ನವದೆಹಲಿ (ಪಿಟಿಐ): ‘ಧಾರ್ಮಿಕ ನಂಬಿಕೆಯಿಂದಾಗಿ ಶಬರಿಮಲೆ ದೇಗುಲಕ್ಕೆ ಅಲ್ಲಿನ ಸರ್ಕಾರ ಮಹಿಳೆಯರಿಗೆ ಪ್ರವೇಶ ನೀಡುತ್ತಿಲ್ಲ. ಇಂತಹ ವಿಷಯಗಳು ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಯನ್ನು ಮೀರಿವೆ’ ಎಂದು ಸುಪ್ರೀಂ ಕೋರ್ಟ್ ಎದುರು ಕೇಂದ್ರ ಸರ್ಕಾರ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ 9 ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠದ ಮುಂದೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಒಂದೊಮ್ಮೆ ಅವೈಜ್ಞಾನಿಕ ಎಂದು ಕಂಡುಬಂದರೆ, ಇದಕ್ಕೆ ಶಾಸಕಾಂಗದಲ್ಲಿ ಪರಿಹಾರವಿದೆ’ ಎಂದು ತಿಳಿಸಿದ್ದಾರೆ.

‘ನಾವು ಪ್ರತಿಯೊಂದು ಪಂಗಡದ ಆಚರಣೆಯನ್ನೂ ಗೌರವಿಸಬೇಕು. ಎಲ್ಲವೂ ಘನತೆ ಹಾಗೂ ದೈಹಿಕ ಸಾಮ ರ್ಥ್ಯಕ್ಕೆ ಸಂಬಂಧಿಸಿದ್ದಲ್ಲ. ನಾನು ಮಜಾರ್ ಅಥವಾ ಗುರುದ್ವಾರಕ್ಕೆ ತೆರಳಿದರೆ, ತಲೆಗೆ ಬಟ್ಟೆ ಕಟ್ಟಿಕೊಳ್ಳಬೇಕು.ಅದನ್ನು ಘನತೆ, ಹಕ್ಕು ಅಥವಾ ಆಯ್ಕೆ ಎಂದು ಹೇಳು ವಂತಿಲ್ಲ’ ಎಂದು ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಎಂ.ಎಂ.ಸುಂದರೇಶ್, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಆಗಸ್ಟೀನ್ ಜಾರ್ಜ್, ಪ್ರಸನ್ನ ವಿ.ವರಾಳೆ, ಆರ್. ಮಹದೇವನ್, ಜಾಯಾಮಾಲ್ಯಾ ಬಾಗ್ಚಿ ಪೀಠದ ಮುಂದೆ ತಿಳಿಸಿದರು.

‘ಯಾರಾದರೂ ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಮಾನವನ ಬಲಿದಾನ ಅಗತ್ಯ ಎಂದು ಪ್ರತಿಪಾದಿಸಿದರೆ, ಆಗ ಅವರು ಸಂವಿಧಾನದ 32ರ ಅಡಿಯಲ್ಲಿ ನ್ಯಾಯಾ ಲಯದಲ್ಲಿ ಪ್ರಶ್ನಿಸಬಹುದಾಗಿದೆ. ಆಗ ನ್ಯಾಯಾಲಯವು ಧಾರ್ಮಿಕವಾಗಿ ಅದು ಅಗತ್ಯವೇ ಎಂದು ಪ್ರಶ್ನಿಸಬೇಕಿಲ್ಲ.ಜನರ ಆರೋಗ್ಯ, ಸಾರ್ವಜನಿಕ ಸುರಕ್ಷತೆ ಆಧರಿಸಿ ನೇರವಾಗಿ ತಿರಸ್ಕರಿಸಬಹುದಾಗಿದೆ’ ಗಮನಸೆಳೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-4-1828282880

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.