ನವದೆಹಲಿ: ಪಾನ್ ಮಸಾಲಕ್ಕೆ ಸಂಬಂಧಿಸಿದ ಜಾಹೀರಾತಿನ ಮೂಲಕ ತಪ್ಪು ಸಂದೇಶ ನೀಡಲಾಗಿದೆ ಎಂಬ ಆರೋಪದಡಿ ನಟ ಸಲ್ಮಾನ ಖಾನ್ ಅವರ ವಿರುದ್ಧ ಹೊರಡಿಸಿದ್ದ ವಾರಂಟ್ಗೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ(ಎನ್ಸಿಡಿಆರ್ಸಿ) ತಡೆ ನೀಡಿದೆ.

ವಿಚಾರಣೆಯ ಪೂರ್ಣ ದಾಖಲೆಗಳನ್ನು ನೀಡುವಂತೆ ಜೈಪುರ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ಸಮನ್ಸ್ ಜಾರಿಗೊಳಿಸಿ, ದಾಖಲೆಗಳನ್ನು ಎನ್ಸಿಡಿಆರ್ಸಿ ರಿಜಿಸ್ಟ್ರಾರ್ಗೆ ವರ್ಗಾಯಿಸುವಂತೆ ಎನ್ಸಿಡಿಆರ್ಸಿ ಅಧ್ಯಕ್ಷರಾದ ನ್ಯಾಯಮೂರ್ತಿ ಎ.ಪಿ ಸಾಹಿ ಮತ್ತು ಸದಸ್ಯರಾದ ಭರತ್ಕುಮಾರ್ ಪಾಂಡೆ ಅವರ ಪೀಠವು ರಾಜಸ್ಥಾನ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ನಿರ್ದೇಶನ ನೀಡಿದೆ.

‘ರಾಷ್ಟ್ರೀಯ ಪೀಠದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೆ ಜಿಲ್ಲಾ ಆಯೋಗ ಹೊರಡಿಸಿರುವ ವಾರಂಟ್ ಅನ್ನು ತಡೆಹಿಡಿಯಲಾಗುತ್ತದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಜನರನ್ನು ದಾರಿ ತಪ್ಪಿಸುವ ಜಾಹೀರಾತನ್ನು ನೀಡಿದ್ದಾರೆ ಎಂದು ಆರೋಪಿಸಿ ರಾಜಶ್ರೀ ಪಾನ್ ಮಸಾಲ ಮತ್ತು ಅದರ ರಾಯಭಾರಿ ಸಲ್ಮಾನ್ ಖಾನ್ ವಿರುದ್ದ 2025ರಲ್ಲಿ ಜೈಪುರ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ಸಲ್ಲಿಕೆಯಾಗಿತ್ತು.

ಆ ಜಾಹೀರಾತಿಗೆ ನಿರ್ಬಂಧಿಸಿ ಜಿಲ್ಲಾ ಆಯೋಗವು 2026ರ ಜನವರಿ 6ರಂದು ಆದೇಶ ಹೊರಡಿಸಿತ್ತು. ಆಯೋಗದ ಆದೇಶದ ಬಳಿಕವೂ ಸಲ್ಮಾನ್ ಚಿತ್ರವಿರುವ ಜಾಹೀರಾತನ್ನು ಪ್ರದರ್ಶಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಲಾಗಿದೆ ಎಂದು ಮತ್ತೊಂದು ಅರ್ಜಿ ಸಲ್ಲಿಕೆಯಾಗಿತ್ತು. ನ್ಯಾಯಾಂಗ ನಿಂದನೆ ಆರೋಪದಡಿ ಜಿಲ್ಲಾ ಆಯೋಗವು ಜನವರಿ 15ರಂದು ಸಲ್ಮಾನ್ ವಿರುದ್ಧ ಜಾಮೀನು ಪಡೆಯಬಹುದಾದ ವಾರೆಂಟ್ ಜಾರಿಗೊಳಿಸಿತ್ತು. ಈ ಆದೇಶವನ್ನು ರಾಜ್ಯ ಆಯೋಗವು ಎತ್ತಿಹಿಡಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.