ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ ದೇಶಗಳು

Published 17 ಅಕ್ಟೋಬರ್ 2023, 16:33 IST
Last Updated 17 ಅಕ್ಟೋಬರ್ 2023, 16:33 IST
ಅಕ್ಷರ ಗಾತ್ರ

ನೆದರ್ಲೆಂಡ್ಸ್‌: ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಿದ ಜಗತ್ತಿನ ಮೊದಲ ದೇಶ. 2000ನೇ ಇಸವಿಯ ಡಿಸೆಂಬರ್‌ನಲ್ಲಿ ಈ ಕುರಿತ ಕಾನೂನಿಗೆ ಇಲ್ಲಿನ ಸಂಸತ್ತು ಅಂಗೀಕಾರ ನೀಡಿದೆ.

ಬೆಲ್ಜಿಯಂ: 200‌3ರಲ್ಲಿ ಸಲಿಂಗ ಮದುವೆಗೆ ಕಾನೂನು ಮಾನ್ಯತೆ ನೀಡಿದೆ.

ಅರ್ಜೆಂಟಿನಾ: ಲ್ಯಾಟಿನ್‌ ಅಮೆರಿಕದಲ್ಲಿ ಸಲಿಂಗ ವಿವಾಹಕ್ಕೆ ಅವಕಾಶ ನೀಡಿದ ಮೊದಲ ದೇಶ. 2010ರಲ್ಲಿ ಅರ್ಜೆಂಟಿನಾ ಇದಕ್ಕೆ ಮಾನ್ಯತೆ ನೀಡಿದೆ.

ಬ್ರೆಜಿಲ್‌: 2013ರಲ್ಲಿ ಇಲ್ಲಿನ ನ್ಯಾಯಾಲಯವು ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದೆ.

ಫಿನ್‌ಲ್ಯಾಂಡ್‌: 2017ರಲ್ಲಿ ಫಿನ್‌ಲ್ಯಾಂಡ್‌ನಲ್ಲಿ ಈ ಕುರಿತ ಕಾನೂನು ಅಸ್ವಿತ್ವಕ್ಕೆ ಬಂದಿದೆ.

ಫ್ರಾನ್ಸ್‌: ನ್ಯಾಯಾಲಯದಲ್ಲಿ ಅರ್ಜಿ ವಜಾಗೊಂಡ ನಂತರ ಫ್ರಾನ್ಸ್‌ ಮಾಜಿ ಪ್ರಧಾನಿ ಫ್ರಾಂಕೋಸಿಸ್‌ ಹೊಲಾಂಡೆ ಕಾನೂನಿಗೆ ಅನುಮೋದನೆ ನೀಡಿದರು.

ಐರ್ಲೆಂಡ್‌: ಜನಾಭಿಪ್ರಾಯದ ಮೂಲಕ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಮೊದಲ ದೇಶ. 2015ರಲ್ಲಿ ನಡೆದ ಮತದಾನದಲ್ಲಿ ಶೇ 62ರಷ್ಟು ಜನರು ಪರವಾಗಿ ಮತ ಚಲಾಯಿಸಿದ್ದರು.

ಬ್ರಿಟನ್‌: ದಕ್ಷಿಣ ಐರ್ಲೆಂಡ್‌ನಲ್ಲಿ 2020ರಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲಾಯಿತು. ಅದಕ್ಕೂ ಆರು ವರ್ಷ ಮೊದಲೇ ಬ್ರಿಟನ್‌ ಮತ್ತು ವೇಲ್ಸ್‌ನಲ್ಲಿ ಕಾನೂನು ಜಾರಿಯಾಗಿತ್ತು. ಸ್ಕಾಟ್‌ಲ್ಯಾಂಡ್‌ನಲ್ಲಿ 2014ರಲ್ಲಿ ಪ್ರತ್ಯೇಕ ಕಾನೂನನ್ನು ಜಾರಿಗೆ ತರಲಾಯಿತು.

ಅಮೆರಿಕ: ಇಲ್ಲಿನ ಸುಪ್ರೀಂ ಕೋರ್ಟ್ ದೇಶದಾದ್ಯಂತ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ  ಮೊದಲೇ 36 ರಾಜ್ಯಗಳು ಮತ್ತು ಕೊಲಂಬಿಯಾ ಜಿಲ್ಲೆಯಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT