10 ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದ ನಿತೀಶ್ ಕುಮಾರ್ ಈಗ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಹಾರ ರಾಜಕೀಯದಲ್ಲಿ ಬದಲಾವಣೆ ಗಾಳಿ ಬೀಸಿದೆ.

ನಿತೀಶ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ 57 ವರ್ಷದ ಸಾಮ್ರಾಟ್ ಅವರು ಈಗ ಸಿಎಂ ಹುದ್ದೆಗೆ ಏರುತ್ತಿದ್ದಾರೆ.

ಗಟ್ಟಿ ರಾಜಕೀಯ ಹಿನ್ನೆಲೆ

ಸಾಮ್ರಾಟ್ ಅವರು ಕುಟುಂಬವೇ ರಾಜಕೀಯ ಹಿನ್ನೆಲೆಯದ್ದು, ಅವರ ತಂದೆ ಶಕುನಿ ಚೌಧರಿ ತಾರಾಪುರ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ತಾಯಿ ಪಾರ್ವತಿ ದೇವಿ ಕೂಡ ಶಾಸಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದೇ ಸಂಪ್ರದಾಯ ಮುಂದುವರಿದು ಸಾಮ್ರಾಟ್ ಅವರೂ ರಾಜಕೀಯಕ್ಕೆ ಧುಮುಕಿದ್ದರು.

1999ರಲ್ಲಿ ರಾಷ್ಟ್ರೀಯ ಜನತಾದಳದ (ಆರ್ಜೆಡಿ) ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಸಾಮ್ರಾಟ್ ಅವರು, 2000ರಲ್ಲಿ ಖಗರಿಯಾ ಜಿಲ್ಲೆಯ ಪರರ್ಬಟ್ಟಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ರಾಬ್ರಿ ದೇವಿ ನೇತೃತ್ವದ ಸರ್ಕಾರದಲ್ಲಿ ಸಚಿವರಾದರು.

2014ರಲ್ಲಿ ಜೆಡಿಯು ಸೇರಿದ ಸಾಮ್ರಾಟ್ ಅವರು, ಜಿತನ್ ರಾಮ್ ಮಾಂಝಿ ಅವರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

2017ರಲ್ಲಿ ಬಿಜೆಪಿಗೆ ಸೇರಿದ ಬಳಿಕ ಸಾಮ್ರಾಟ್ ಅವರ ರಾಜಕೀಯ ಜೀವನದ ದಿಕ್ಕೇ ಬದಲಾಯಿತು. ಆರಂಭದಲ್ಲಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡರು. ನಂತರ 2023ರಲ್ಲಿ ಬಿಹಾರದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು. 2024ರಲ್ಲಿ ಎನ್ಡಿಎ ನೇತೃತ್ವದ ನಿತೀಶ್ ಕುಮಾರ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡರು.

ಬಿಹಾರ ರಾಜಕೀಯದಲ್ಲಿ ಬಿಗಿ ಹಿಡಿತ

ಚುನಾವಣಾ ರಾಜಕೀಯದಲ್ಲಿ ಜಾತಿಯೇ ನಿರ್ಣಾಯಕ ಪಾತ್ರ ವಹಿಸುವ ರಾಜ್ಯ ಬಿಹಾರದಲ್ಲಿ ಬಿಜೆಪಿಯ ಪ್ರಮುಖ ಒಬಿಸಿ ಅಭ್ಯರ್ಥಿಯಾಗಿರುವ ಸಾಮ್ರಾಟ್ ಕೊಯಿರಿ–ಕುಶ್ವಾ ಸಮುದಾಯಕ್ಕೆ ಸೇರಿದವರು. ಇವರು ಪಕ್ಷದ ಪ್ರಮುಖ ಪ್ರಚಾರಕರಾಗಿ, ಪಕ್ಷದ ಪ್ರಭಾವಿಯಾಗಿ ಗುರುತಿಸಿಕೊಂಡಿದ್ದಾರೆ.

ವಿವಾದಗಳ ಸದ್ದು

ಸಾಮ್ರಾಟ್ ಚೌಧರಿ ವಿವಾದಗಳಿಂದ ಏನೂ ದೂರವುಳಿದಿರಲಿಲ್ಲ. ಅವರ ವಯಸ್ಸಿಗೆ ಸಂಬಂಧಿಸಿದ ಚುನಾವಣಾ ಅಫಿಡವಿಟ್ಗಳಲ್ಲಿ ವ್ಯತ್ಯಾಸಗಳಿವೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದು, ತನಿಖೆಗೂ ಒತ್ತಾಯಿಸಿದ್ದರು.

ಅಲ್ಲದೆ, 1995ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಶಕುನಿ ಚೌಧರಿ ಅವರ ಹೆಸರಿನೊಂದಿಗೆ ಸಾಮ್ರಾಟ್ ಅವರ ಹೆಸರೂ ತಳುಕುಹಾಕಿಕೊಂಡಿತ್ತು. ಹೀಗಾಗಿ ಕೊಲೆ ಪ್ರಕರಣದ ಆರೋಪ ಕೂಡ ಇವರ ಮೇಲಿದೆ. ಈ ವಿಚಾರಗಳು ರಾಜಕೀಯ ವಲಯದಲ್ಲಿ ಆಗಾಗ ಸದ್ದು ಮಾಡುತ್ತಿದ್ದರೂ ಬಿಹಾರದಲ್ಲಿ ಸಾಮ್ರಾಟ್ ಅವರ ವರ್ಚಸ್ಸು ಕಡಿಮೆಯಾಗಲಿಲ್ಲ.

ಏಪ್ರಿಲ್ 15ಕ್ಕೆ ಪ್ರಮಾಣ

ಬಿಹಾರದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಸಾಮ್ರಾಟ್ ಅವರು ನಾಳೆ (ಏಪ್ರಿಲ್ 15) ಪ್ರಮಾಣವಚನ ಸ್ವೀಕರಿಸಲಿದ್ದಾರೆ.

243 ಸದಸ್ಯ ಬಲದ ವಿಧಾನಸಭೆಯಲ್ಲಿ 89 ಶಾಸಕರನ್ನು ಹೊಂದಿರುವ ಬಿಜೆಪಿ, ಅತಿ ದೊಡ್ಡ ಪಕ್ಷವಾಗಿದೆ. 2005ರಿಂದ ನಿತೀಶ್ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದ ಬಿಜೆಪಿ, ಇದೀಗ ಮೊದಲ ಬಾರಿಗೆ ಮುಖ್ಯಮಂತ್ರಿಯ ಹುದ್ದೆಯನ್ನು ಪಡೆಯುತ್ತಿರುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.