ನವದೆಹಲಿ: ಖಾಸಗಿ ಸಂಸ್ಥೆಯೊಂದು ನೀಡುವ ಈ ವರ್ಷದ ಸಂಸದ್ ರತ್ನ ಪ್ರಶಸ್ತಿಗಳಿಗೆ ಒಟ್ಟು 12 ಸಂಸದರು ಮತ್ತು ನಾಲ್ಕು ಸಂಸದೀಯ ಸಮಿತಿಗಳನ್ನು ಆಯ್ಕೆ ಮಾಡಲಾಗಿದೆ.

ವೈಯಕ್ತಿಕ ವಿಭಾಗದಲ್ಲಿ ಆಯ್ಕೆಯಾಗಿರುವ ಸಂಸದರಲ್ಲಿ ಬಿಜೆಪಿಯ ಜಗದಂಬಿಕಾ ಪಾಲ್ (ಉತ್ತರ ಪ್ರದೇಶ), ಪಿ ಪಿ ಚೌಧರಿ (ರಾಜಸ್ಥಾನ), ನಿಶಿಕಾಂತ್ ದುಬೆ (ಜಾರ್ಖಂಡ್) ಮತ್ತು ಶಿವಸೇನೆಯ ಶ್ರೀಕಾಂತ್ ಏಕನಾಥ್ ಶಿಂಧೆ (ಮಹಾರಾಷ್ಟ್ರ) ಸೇರಿದ್ದಾರೆ ಎಂದು ‘ಪ್ರೈಮ್ ಪಾಯಿಂಟ್ ಫೌಂಡೇಶನ್’ ಪ್ರಕಟಣೆಯಲ್ಲಿ ತಿಳಿಸಿದೆ.
.ಮುಂಗಾರು ಮುನಿಸು | ಜುಲೈಗೆ ಕಾಲಿಡುವ ‘ಎಲ್ ನಿನೋ’: ತಪ್ಪದ ಬಿಸಿಲ ಬೇಗೆ.
ಪ್ರವೀಣ್ ಪಟೇಲ್ (ಉತ್ತರ ಪ್ರದೇಶ), ಬಿದ್ಯುತ್ ಬರನ್ ಮಹತೋ (ಜಾರ್ಖಂಡ್), ಲುಂಬಾರಾಮ್ ಚೌಧರಿ (ರಾಜಸ್ಥಾನ), ಹೇಮಂತ್ ವಿಷ್ಣು ಸವರಾ (ಮಹಾರಾಷ್ಟ್ರ), ಸ್ಮಿತಾ ಉದಯ್ ವಾಘ್ (ಮಹಾರಾಷ್ಟ್ರ), ನರೇಶ್ ಗಣಪತ್ ಮ್ಹಾಸ್ಕೆ (ಮಹಾರಾಷ್ಟ್ರ), ಮೇಧಾ ವಿಶ್ರಾಮ್ ಕುಲಕರ್ಣಿ (ಮಹಾರಾಷ್ಟ್ರ) ಮತ್ತು ನರಹರಿ ಅಮೀನ್ (ಗುಜರಾತ್) ಅವರಿಗೂ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.

ನಾಲ್ಕು ಸಂಸದೀಯ ಸಮಿತಿಗಳು ಕೂಡ ತಮ್ಮ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಪ್ರಶಸ್ತಿಗೆ ಆಯ್ಕೆಯಾಗಿವೆ.

ಚರಂಜಿತ್ ಸಿಂಗ್ ಚನ್ನಿ ಅವರ ಅಧ್ಯಕ್ಷತೆಯ ಕೃಷಿ ಸಮಿತಿ, ಭರ್ತೃಹರಿ ಮಹತಾಬ್ ಅವರ ಅಧ್ಯಕ್ಷತೆಯ ಹಣಕಾಸು ಸಮಿತಿ, ಸಪ್ತಗಿರಿ ಶಂಕರ್ ಉಲಕಾ ಅವರ ಅಧ್ಯಕ್ಷತೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಮಿತಿ ಮತ್ತು ಅನುರಾಗ್ ಠಾಕೂರ್ ಅವರ ಅಧ್ಯಕ್ಷತೆಯ ಕಲ್ಲಿದ್ದಲು ಮತ್ತು ಗಣಿ ಸಮಿತಿ ಪ್ರಶಸ್ತಿಗಳನ್ನು ಭಾಜನವಾಗಿವೆ.

ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಪಾಲ್ ಮತ್ತು ಚನ್ನಿ ಮಾಜಿ ಮುಖ್ಯಮಂತ್ರಿಗಳಾಗಿದ್ದರೆ, ಅಮೀನ್ ಮಾಜಿ ಉಪಮುಖ್ಯಮಂತ್ರಿಯಾಗಿದ್ದಾರೆ.
.ಮಾನವ ಇತಿಹಾಸವನ್ನೇ ಬದಲಿಸಿದ್ದ ಎಲ್ ನಿನೊ! ಕಾದಿದೆಯಾ ಮಹಾ ವಿಪತ್ತು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.