ನವದೆಹಲಿ: ದೇಶದಲ್ಲಿ ಆನ್ಲೈನ್ ಆಂದೋಲನದ ರೂಪದಲ್ಲಿ ದಿಢೀರ್ ಹುಟ್ಟಿಕೊಂಡ ವಿಡಂಬನಾ ರಾಜಕೀಯ ಪಕ್ಷವಾದ ‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು (ಜಿರಲೆ ಜನತಾ ಪಕ್ಷ– ಸಿಜೆಪಿ) ರಾಜಕೀಯ ಪಕ್ಷವಾಗಿ ನೋಂದಣಿ ಮಾಡಲು ಹರಿಯಾಣದ ವಕೀಲರೊಬ್ಬರು ಕೇಂದ್ರ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ.

‘ಸಿಜೆಪಿ’ ಹುಟ್ಟಿಗೆ ಕಾರಣವಾದ, ಸದ್ಯ ಅಮೆರಿಕದಲ್ಲಿರುವ ಪುಣೆಯ ಅಭಿಜೀತ್ ದೀಪ್ಕೆ ಭಾರತಕ್ಕೆ ಬಂದು, ಈ ಆಂದೋಲನವನ್ನು ರಾಜಕೀಯ ಚಳವಳಿಯಾಗಿ ಮುನ್ನಡೆಸಲು ಹಿಂದೇಟು ಹಾಕುತ್ತಿರುವುದರಿಂದ, ತಾವು ಈ ಹೊಣೆ ಹೊತ್ತುಕೊಂಡಿರುವುದಾಗಿ ಪಾಣಿಪತ್ನ ಸುಧೀರ್ ಜಾಖಡ್ ಹೇಳಿದ್ದಾರೆ. ಮೇ 22ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಮ್ಮನ್ನು ಸಿಜೆಪಿಯ ರಾಷ್ಟ್ರೀಯ ಸಂಚಾಲಕ ಎಂದು ಸುಧೀರ್ ಹೇಳಿಕೊಂಡಿದ್ದಾರೆ.

‘ಬಾಸ್ಟನ್ನಲ್ಲಿರುವ ದೀಪ್ಕೆ ಭಾರತಕ್ಕೆ ಬರುವುದಿಲ್ಲ. ಹೀಗಾಗಿ ನಾನೇ ಈ ಚಳವಳಿಯ ನೇತೃತ್ವ ವಹಿಸಿಕೊಂಡಿರುವೆ. ಇಲ್ಲದಿದ್ದರೆ ಬೇರೆ ಯಾರಾದರೂ ರಾಜಕೀಯ ಪಕ್ಷವಾಗಿ ‘ಸಿಜೆಪಿ’ ನೋಂದಣಿ ಮಾಡಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಾರೆ’ ಎಂದು ಸುಧೀರ್ ‘ಪ್ರಜಾವಾಣಿ’ಗೆ ತಿಳಿಸಿದರು. 1951ರ ಜನ ಪ್ರಾತಿನಿಧ್ಯ ಕಾಯ್ದೆ, ಸೆಕ್ಷನ್ 29ಎ ಪ್ರಕಾರ, ರಾಜಕೀಯ ಪಕ್ಷವಾಗಿ ಸಿಜೆಪಿ ನೋಂದಣಿ ಮಾಡಲು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದರು. ವಿದ್ಯಾರ್ಥಿ ಮುಖಂಡ, ರೈತಪರ ಹೋರಾಟಗಾರ ಎಂದೂ ಸುಧೀರ್ ತಮ್ಮನ್ನು ಕರೆದುಕೊಂಡಿದ್ದಾರೆ.

‘ಸಾಮಾಜಿಕ ಹೊಣೆಗಾರಿಕೆ, ಸಮುದಾಯ ಸೇವೆ, ಸಂವಿಧಾನದ ಅರಿವು, ಸಾಮಾಜಿಕ ಸಾಮರಸ್ಯ, ಪರಿಸರ, ಜೀವ ವೈವಿಧ್ಯ ಸಂರಕ್ಷಣೆ, ಪ್ರಾಣಿ ಕಲ್ಯಾಣ, ಪಾರದರ್ಶಕ ಆಡಳಿತ, ಕರ್ತವ್ಯಗಳ ಪಾಲನೆ ಮೂಲಕ ಪ್ರಜಾಸತ್ತಾತ್ಮಕ ಭಾಗವಹಿಸುವಿಕೆಯನ್ನು ‘ಸಿಜೆಪಿ’ ಪ್ರೋತ್ಸಾಹಿಸಲಿದೆ ಎಂದು ಸುಧೀರ್ ಹೇಳಿದ್ದಾರೆ.

ಪಕ್ಷದ ನೋಂದಣಿ ಐಚ್ಛಿಕವಾದರೂ, ದೇಣಿಗೆ ಸ್ವೀಕಾರ ಸೇರಿ ಕಾನೂನಿನ ಅಡಿಯಲ್ಲಿ ಕೆಲವು ಪ್ರಯೋಜನಗಳನ್ನು ಪಡೆಯಲು ಇದು ಅನುವು ಮಾಡಿಕೊಡುತ್ತದೆ.

‘ಕೆಲವು ಯುವಕರು ಜಿರಲೆಗಳಿದ್ದಂತೆ’ ಎಂಬ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆ ಬೆನ್ನಲ್ಲೇ, ವಿಡಂಬನಾ ರಾಜಕೀಯ ಪಕ್ಷದ ರೂಪದಲ್ಲಿ ‘ಸಿಜೆಪಿ’ ಹುಟ್ಟಿಕೊಂಡಿತ್ತು. ಶಶಿ ತರೂರ್, ಮಹುವಾ ಮೊಯಿತ್ರಾ ಸೇರಿದಂತೆ ಹಲವು ರಾಜಕಾರಣಿಗಳು ಇದಕ್ಕೆ ಬೆಂಬಲ ಸೂಚಿಸಿದ್ದರು. ದೇಶದಾದ್ಯಂತ ಶರವೇಗದಲ್ಲಿ ಈ ಆಂದೋಲನ ವ್ಯಾಪಿಸಿದ ಬೆನ್ನಲ್ಲೇ ‘ಸಿಜೆಪಿ’ಯ ಎಕ್ಸ್ ಖಾತೆಯನ್ನು ಮೇ 21ರಂದು ತಡೆಹಿಡಿಯಲಾಗಿತ್ತು.

’ಕಾಂಗ್ರೆಸ್ನಿಂದ ಯುವ ಜಿರಲೆ ಅಭಿಯಾನ’

‘ಕಾಕ್ರೋಚ್ ಜನತಾ ಪಾರ್ಟಿಯಿಂದ ಸ್ಫೂರ್ತಿ ಪಡೆದು ಕೇಂದ್ರದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ನಿರುದ್ಯೋಗ ನೀತಿ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ರಾಷ್ಟ್ರವ್ಯಾಪಿ ಯುವ ಪ್ರತಿರೋಧ ಚಳುವಳಿ ರೀತಿಯಲ್ಲಿ ’ ಭಾರತೀಯ ಯುವ ಜಿರಲೆ ಅಭಿಯಾನ’ಕ್ಕೆ ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಮಂಗಳವಾರ ಚಾಲನೆ ನೀಡಿದೆ. ಯುವ ಕಾಂಗ್ರೆಸ್ ಮುಖಂಡರಾದ ಮನೀಶ್ ಶರ್ಮಾ ಉದಯ್ ಭಾನು ಚಿಬ್ ನೇತೃತ್ವದಲ್ಲಿ ಈ ಅಭಿಯಾನ ಆರಂಭಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.