ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ನ(ಟಿಎಂಸಿ) 20 ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡಿದರೆ, ಅವರು ಪಕ್ಷಾಂತರ ಮಾಡಲು ಸಿದ್ಧರಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಸೌಮಿತ್ರ ಖಾನ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಲ್ಲಿ 29 ಸಂಸದರು ಟಿಎಂಸಿ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಬಿಜೆಪಿಯ 12, ಕಾಂಗ್ರೆಸ್ನ ಒಬ್ಬ ಸಂಸದರಿದ್ದಾರೆ.

ಟಿಎಂಸಿಯ ಬಹುತೇಕ ಸಂಸದರು ನಮ್ಮ ಪಕ್ಷದ ಕಡೆಗೆ ಒಲವು ಹೊಂದಿದ್ದಾರೆ. ಬಿಜೆಪಿ ಬಯಸಿದರೆ, ಸಂಪೂರ್ಣ ಟಿಎಂಸಿಯು ಕೆಲವೇ ದಿನಗಳಲ್ಲಿ ಇಲ್ಲವಾಗಲಿದೆ ಎಂದು ಸಂಸದರಾಗಿರುವ ಸೌಮಿತ್ರ ಖಾನ್ ಹೇಳಿದ್ದಾರೆ.

ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಅನರ್ಹತೆಯನ್ನು ತಪ್ಪಿಸಲು ಸಂಸದೀಯ ಪಕ್ಷದ ಕನಿಷ್ಠ ಮೂರನೇ ಎರಡರಷ್ಟು ಸದಸ್ಯರು ಒಟ್ಟಿಗೆ ಪಕ್ಷ ಬದಲಾಯಿಸಬೇಕಾಗುತ್ತದೆ. ಟಿಎಂಸಿಯ ಪ್ರಕರಣದಲ್ಲಿ ಅವರ 29 ಸದಸ್ಯರಲ್ಲಿ 19ರಿಂದ 20 ಸಂಸದರು ಪಕ್ಷ ಬದಲಾಯಿಸುವುದರಿಂದ ಯಾವುದೇ ತೊಂದರೆಯಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಟಿಎಂಸಿ ಸಂಸದ ಸೌಗತ ರಾಯ್, ಇದೊಂದು ಆಧಾರರಹಿತ ಆರೋಪ. ವರದಿಗಾರರಿಗೆ ಅವರು ಸುಳ್ಳು ಹೇಳಿದ್ದು, ಈ ರೀತಿಯಾಗಿ ಯಾವುದೇ ಘಟನೆಗಳು ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.