ಹೆದ್ದಾರಿಗಳು ಇರುವುದು ಟ್ರ್ಯಾಕ್ಟರ್‌ಗಳನ್ನು, ಟ್ರಾಲಿಗಳನ್ನು ಅಥವಾ ಜೆಸಿಬಿಗಳನ್ನು ನಿಲ್ಲಿಸಲು ಅಲ್ಲ ಎಂದು ಹೇಳಿರುವ ಕೋರ್ಟ್, ರೈತರು ಆ ಗಡಿಯಲ್ಲಿ ಬೀಡುಬಿಟ್ಟಿರುವ ಸಮಸ್ಯೆಗೆ ಸೌಹಾರ್ದಯುತವಾದ ಪರಿಹಾರವೊಂದು ಸಾಧ್ಯವಾಗಬಹುದು ಎಂಬ ಆಶಯ ವ್ಯಕ್ತಪಡಿಸಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸುವುದಕ್ಕೆ ಕಾನೂನಿನ ಖಾತರಿ ನೀಡಬೇಕು ಎಂಬ ಬೇಡಿಕೆಯೊಂದಿಗೆ ರೈತರು ಗಡಿಯಲ್ಲಿ ಬೀಡುಬಿಟ್ಟಿದ್ದಾರೆ.