ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಂಡೀಗಢ: ಕಾಂಗ್ರೆಸ್‌ ಮುಖಂಡ ಸುಭಾಷ್‌ ಚಾವ್ಲಾ ಬಿಜೆಪಿ ಸೇರ್ಪಡೆ

Published : 15 ಮೇ 2024, 14:12 IST
Last Updated : 15 ಮೇ 2024, 14:12 IST
ಫಾಲೋ ಮಾಡಿ
Comments

ಚಂಡೀಗಢ: ಕಾಂಗ್ರೆಸ್‌ನ ಹಿರಿಯ ಮುಖಂಡ, ಚಂಡೀಗಢದ ಮಾಜಿ ಮೇಯರ್‌ ಸುಭಾಷ್‌ ಚಾವ್ಲಾ ಅವರು ಬುಧವಾರ ಬಿಜೆಪಿ ಸೇರಿದರು.

ಚಂಡೀಗಢದಲ್ಲಿ ಕಾಂಗ್ರೆಸ್‌ ಪಕ್ಷವು ಎಎಪಿ ಜತೆ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

‘21ನೇ ವಯಸ್ಸಿನಲ್ಲಿ ನಾನು ಸೇರಿಕೊಂಡಿದ್ದ ಪಕ್ಷವನ್ನು ತೊರೆಯುವುದು ಅತ್ಯಂತ ಕಠಿಣ ನಿರ್ಧಾರವಾಗಿದೆ. ಆದರೆ ಪಾಲಿಕೆ ಚುನಾವಣೆಯಲ್ಲಿ ಎಎಪಿಯು ಕಾಂಗ್ರೆಸ್‌ಗೆ ಮಾಡಿದ್ದ ಹಾನಿಯನ್ನು ನನಗೆ ಮರೆಯಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್‌ ಚಂಡೀಗಢ ಘಟಕದ ಅಧ್ಯಕ್ಷರೂ ಆಗಿದ್ದ ಅವರು ತಿಳಿಸಿದರು.

ಜೆಡಿಯು ಮಾಜಿ ಶಾಸಕಿ ಕಾಂಗ್ರೆಸ್‌ಗೆ (ಪಟ್ನಾ ವರದಿ): ಬಿಹಾರದಲ್ಲಿ ಜೆಡಿಯು ಪಕ್ಷದ ಮಾಜಿ ಶಾಸಕಿ ಪೂನಂ ದೇವಿ ಯಾದವ್‌ ಅವರು ಬುಧವಾರ ಕಾಂಗ್ರೆಸ್‌ ಸೇರ್ಪಡೆಯಾದರು. ಪೂನಂ ಅವರು ಖಗಾರಿಯಾ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಸಲ ಆಯ್ಕೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT