ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಜಿ ಮಹಾರಾಜ್‌ ಪಟ್ಟಾಭಿಷೇಕ ದಿನ; ಗೌರವ ನಮನ ಸಲ್ಲಿಸಿದ ಉದ್ಧವ್‌ ಠಾಕ್ರೆ

Last Updated 6 ಜೂನ್ 2021, 8:14 IST
ಅಕ್ಷರ ಗಾತ್ರ

ಮುಂಬೈ: ‘ಶಿವಾಜಿ ಮಹಾರಾಜ್‌ ಅವರ ಪಟ್ಟಾಭಿಷೇಕದ ಗಳಿಗೆಯನ್ನು ಮಹಾರಾಷ್ಟ್ರದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಕೆತ್ತಲಾಗಿದೆ’ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಭಾನುವಾರ ಹೇಳಿದರು.

1674ರ ಜೂನ್‌ 6ರಂದು ಶಿವಾಜಿ ಮಹಾರಾಜ್‌ ಅವರಿಗೆ ಸ್ವತಂತ್ರ ಮರಾಠ ಸಾಮ್ರಾಜ್ಯದ ಛತ್ರಪತಿಯನ್ನಾಗಿ ಪಟ್ಟಾಭಿಷೇಕ ಮಾಡಲಾಗಿತ್ತು. ಇದರ ಸ್ಮರಣಾರ್ಥ ಶಿವಾಜಿ ಮಹಾರಾಜ್‌ಗೆ ಅವರು ಗೌರವ ನಮನ ಸಲ್ಲಿಸಿದರು ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಸಾಮಾನ್ಯವಾಗಿ ಈ ದಿನದಂದು ರಾಯಗಡ ಕೋಟೆಯಲ್ಲಿ ಸಾರ್ವಜನಿಕ ರ‍್ಯಾಲಿಗಳನ್ನು ನಡೆಸಲಾಗುತ್ತದೆ. ಆದರೆ ಕೋವಿಡ್‌ ಸಾಂಕ್ರಾಮಿಕದಿಂದಾಗಿ ಸತತ ಎರಡು ವರ್ಷಗಳ ಕಾಲ ಸಾರ್ವಜನಿಕ ಸಮಾರಂಭಗಳನ್ನು ರದ್ದುಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಶಿವಾಜಿ ಮಹಾರಾಜ್‌ ಅವರ ವಂಶಸ್ಥ, ಬಿಜೆಪಿ ಸಂಸದ ಛತ್ರಪತಿ ಸಂಭಾಜಿರಾಜೆ ಅವರು ರಾಯಗಡ ಕೋಟೆಗೆ ಭೇಟಿ ನೀಡಿದರು.

‘ಈ ವರ್ಷದ ರಾಜ್ಯಭಿಷೇಕ ಸಮಾರಂಭಕ್ಕೆ ಶಿವಾಜಿ ಮಹಾರಾಜ್‌ ಕಾಲದ ಅಪರೂಪದ ‘ಹೊನ’ ನಾಣ್ಯವು ಇನ್ನಷ್ಟು ಮೆರುಗು ನೀಡಲಿದೆ. ಈ ನಾಣ್ಯವು ಸ್ವರಾಜ್ಯ, ಸಾರ್ವಭೌಮತ್ವ ಮತ್ತು ಸಮೃದ್ಧಿಯ ಪ್ರತೀಕವಾಗಿದೆ’ ಎಂದು ಸಂಭಾಜಿರಾಜೆ ಅವರು ಶನಿವಾರ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT