ಶಿವಮೊಗ್ಗ: ‘ಯುವಕರು, ಕುಶಲಕರ್ಮಿಗಳು ಸ್ವಾವಲಂಬಿ ಬದುಕು ನಡೆಸಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ವಿಶ್ವಕರ್ಮ ಯೋಜನೆ ರೂಪಿಸಿದ್ದಾರೆ. ಅದರ ಸದುಪಯೋಗ ಪಡೆದುಕೊಳ್ಳಿ’ ಎಂದು ಸಂಸದ ಬಿ.ವೈ. ರಾಘವೇಂದ್ರ ಸಲಹೆ ನೀಡಿದರು.

ಎಂಎಸ್ಎಂಇ ಡಿಎಫ್ಒ ಮತ್ತು ಜಿಲ್ಲಾ ಕೈಗಾರಿಕ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಪಿಎಂ ವಿಶ್ವಕರ್ಮ ವಸ್ತು ಪ್ರದರ್ಶನ ಮತ್ತು ವ್ಯಾಪಾರ ಮೇಳ ಉದ್ಘಾಟಿಸಿ ಮಾತನಾಡಿದರು.

‘ಕೇಂದ್ರ ಬಜೆಟ್ನಲ್ಲಿ ವಿಶ್ವಕರ್ಮ ಯೋಜನೆಗೆ ₹ 13,000 ಕೋಟಿ ಮೀಸಲಿಡಲಾಗಿದೆ. ಇದರಡಿ ಆಯ್ಕೆಯಾದವರಿಗೆ ಒಟ್ಟು ₹ 3 ಲಕ್ಷ ಸಾಲ ಶೇ 5 ಬಡ್ಡಿ ದರದಂತೆ ಕಂತಿನ ರೂಪದಲ್ಲಿ ನೀಡಲಾಗುತ್ತಿದೆ. ವಿಶ್ವಕರ್ಮ ಯೋಜನೆಯಲ್ಲಿ ಕೆಲಸ ಮಾಡುವಂತಹ ವಿಶ್ವಕರ್ಮ ಬಂಧುಗಳಿಗೆ ಐಡಿ ಕಾರ್ಡ್ ಹಾಗೂ ಅವರ ಮನೆಗೆ ನೇರವಾಗಿ ₹ 40 ಸಾವಿರದಿಂದ ₹ 50 ಸಾವಿರ ಬೆಲೆಬಾಳುವ ಕಿಟ್ ವಿತರಿಸಲಾಗುತ್ತಿದೆ’ ಎಂದರು.

‘ವಿಶ್ವಕರ್ಮ ಬಂಧುಗಳಿಗೆ ಐಡಿ ಕಾರ್ಡ್ ತುಂಬ ಮುಖ್ಯವಾಗಿದೆ. ಅದರಿಂದ ದೇಶದಲ್ಲಿ ಅವರನ್ನು ಗುರುತಿಸಲಾಗುತ್ತದೆ. ವಿಶ್ವಕರ್ಮ ಯೋಜನೆಯಡಿ ರಾಜ್ಯದಲ್ಲಿ 22 ಲಕ್ಷ ಅರ್ಜಿಗಳು ಬಂದಿದ್ದು, 5.39 ಲಕ್ಷ ಅರ್ಜಿಗಳ ಪರಿಶೀಲನೆ ಪೂರ್ಣಗೊಂಡು 1.25 ಲಕ್ಷ ಜನರಿಗೆ ಸಾಲ ವಿತರಣೆ ಮಾಡಲಾಗಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಂಎಸ್ಎಂಇ ಡಿಎಫ್ಒ ಬೆಂಗಳೂರು ನಿರ್ದೇಶಕ ಕೆ. ದೇವರಾಜ್, ಸಹಾಯಕ ನಿರ್ದೇಶಕ ಎ. ಶಿವಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಎಚ್. ಸುರೇಶ್, ಎಂಎಸ್ಎಂಇ ಅಧಿಕಾರಿ ಗೀತಾ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-42-359925791

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.