ಕೋಲ್ಕತ್ತ: ಬಾರಿ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಕ್ಷದ(ಬಿಜೆಪಿ) ಗೆಲುವು ಬಹುತೇಕ ಖಚಿತವಾಗಿದೆ. ಆ ಮೂಲಕ ಜನಸಂಘ ಸಂಸ್ಥಾಪಕ ಶ್ಯಾಮ್ಪ್ರಸಾದ್ ಮುಖರ್ಜಿ ಅವರ ತವರಿನಲ್ಲಿ ಇದೇ ಮೊದಲ ಬಾರಿ ಕಮಲ ಅಧಿಕಾರಕ್ಕೇರುತ್ತಿದೆ.

ಹಿಂದಿ ಭಾಷಿಕ ರಾಜ್ಯಗಳು ಸೇರಿ ಪಶ್ಚಿಮ ಮತ್ತು ಈಶಾನ್ಯ ಭಾಗದ ರಾಜ್ಯಗಳಲ್ಲಿ ಬಿಜೆಪಿಯು ಈಗಾಗಲೇ ತನ್ನ ಬಾಹುವನ್ನು ವಿಸ್ತರಿಸಿದೆ. ಒಂದು ಕಾಲದಲ್ಲಿ ಪ್ರಬಲವಾಗಿದ್ದ ಪ್ರಾದೇಶಿಕ ಪಕ್ಷಗಳನ್ನು ಸೋಲಿಸುವ ಮೂಲಕ ಅಲ್ಲಿ ಅಧಿಕಾರ ಹಿಡಿದಿದೆ. ಆದರೆ, ಬಂಗಾಳ ಅದಕ್ಕೆ ಸುಲಭದ ತುತ್ತಾಗಿರಲಿಲ್ಲ.

ಕಳೆದ ಸುಮಾರು ಅರ್ಧ ಶತಮಾನದಿಂದ ಬಂಗಾಳವು ಕೇವಲ ಒಂದು ಬಾರಿ ಮಾತ್ರ ಸರ್ಕಾರದ ಬದಲಾವಣೆಯನ್ನು ಕಂಡಿದೆ. ಕಮ್ಯುನಿಸ್ಟ್ ನೇತೃತ್ವದ ಎಡರಂಗವು 34 ವರ್ಷಗಳ ಕಾಲ ಇಲ್ಲಿ ಆಳ್ವಿಕೆ ನಡೆಸಿದರೆ, ನಂತರದ 15 ವರ್ಷಗಳ ಕಾಲ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಇಲ್ಲಿ ಪ್ರಾಬಲ್ಯ ಸಾಧಿಸಿತ್ತು.

ಇದೇ ಕಾರಣಕ್ಕೆ ಈ ಚುನಾವಣೆಯಲ್ಲಿ ಬೇರೆಲ್ಲಾ ರಾಜ್ಯಗಳಿಗಿಂತ ಬಂಗಾಳವು ಬಿಜೆಪಿ ಪಾಲಿಗೆ ಅತಿ ಮುಖ್ಯವಾಗಿತ್ತು. 10 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ರಾಜ್ಯವನ್ನು ಗೆಲ್ಲುವುದು ಅದರ ಪ್ರತಿಷ್ಠೆಗೆ ಒಂದು ಸವಾಲಾಗಿತ್ತು. ಇದಕ್ಕಾಗಿ ಕಳೆದ ಮೂರು ಚುನಾವಣೆಗಳಿಂದಲೂ ಬಿಜೆಪಿಯು ತನ್ನ ಮತ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿದೆ.

ಏತನ್ಮಧ್ಯೆ, ಬಂಗಾಳದಲ್ಲಿ ಮುನ್ನಡೆ ಸಾಧಿಸುತ್ತಲೇ ಬಿಜೆಪಿಯು ಹೊಸ ಭೂಪಟವೊಂದನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬಿಡುಗಡೆ ಮಾಡಿದೆ

‘ದೇಶದ ಹೃದಯಭಾಗದಿಂದ ಬಂಗಾಳದವರೆಗೆ... ಭೂಪಟವು ಕೇವಲ ವಿಸ್ತರಣೆಯಾಗುತ್ತಿಲ್ಲ, ಬದಲಿಗೆ ಇದು ಪ್ರಗತಿ ಸಾಧಿಸಲು ಸಂಕಲ್ಪ ಮಾಡಿರುವ ರಾಷ್ಟ್ರವೊಂದರ ಅಚಲ ನಂಬಿಕೆಯಾಗಿದೆ’ ಎಂದು ಬರೆದುಕೊಂಡಿದೆ.

‘ಉತ್ತರದಿಂದ ಈಶಾನ್ಯದವರೆಗೆ... ಬಣ್ಣದ ಬದಲಾವಣೆಯು ಈಗ ಅಸ್ಪಷ್ಟವಾಗಿ ಉಳಿದಿಲ್ಲ. ಈಗಾಗಲೇ ಆರಂಭವಾಗಿರುವ ಯಶೋಗಾಥೆಯಲ್ಲಿ ಬಂಗಾಳವು ಕೇವಲ ಇತ್ತೀಚಿನ ಅಧ್ಯಾಯವಷ್ಟೇ’ ಎಂದಿದೆ.

ಬಂಗಾಳದಲ್ಲಿ ಮತ ಎಣಿಕೆ ಕೊನೆಯ ಹಂತಕ್ಕೆ ಬಂದಿದ್ದು, ಸುಮಾರು 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. 15 ವರ್ಷಗಳಿಂದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಟಿಎಂಸಿಯು ಮೂರಂಕಿ ದಾಟಲು ಹರಸಾಹಸ ಪಡುತ್ತಿದೆ.

ಬಂಗಾಳದ ಪುತ್ರ ಶ್ಯಾಮ್ಪ್ರಸಾದ್ ಮುಖರ್ಜಿ:

1901ರ ಜುಲೈ 6ರಂದು ಕೋಲ್ಕತ್ತದಲ್ಲಿ ಜನಿಸಿದ ಶ್ಯಾಮ್ಪ್ರಸಾದ್ ಮುಖರ್ಜಿ, ಕಾಂಗ್ರೆಸ್ಗೆ ಪರ್ಯಾಯವಾಗಿ 1951ರಲ್ಲಿ ಭಾರತೀಯ ಜನಸಂಘ ಹುಟ್ಟುಹಾಕಿದರು. ಇದು ಬಿಜೆಪಿಯ ಮೂಲ ಪಕ್ಷವಾಗಿದೆ.

ಒಂದೇ ದೇಶದಲ್ಲಿ ಎರಡು ಸಂವಿಧಾನ, ಎರಡು ಪ್ರಧಾನಿ ಇರಬಾರದು ಎಂದು ಪ್ರತಿಪಾದಿಸಿ, ಕಾಶ್ಮೀರದ ವಿಶೇಷ ಸ್ಥಾನಮಾನ ವಿರೋಧಿಸಿ ಶ್ಯಾಮ್ಪ್ರಸಾದ್ ಹೋರಾಡಿದ್ದರು. ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವಾಗಿ ಉಳಿಸಲು ನಡೆಸಿದ ಹೋರಾಟದ ವೇಳೆ 1953ರ ಜೂನ್ 23ರಂದು ಜೈಲಿನಲ್ಲಿ ನಿಧನರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.