ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಯುದ್ಧದಲ್ಲಿ ಸಂಭವಿಸಿದ ವಿವಿಧ ಘಟನೆಗಳಲ್ಲಿ ಆರು ಮಂದಿ ಭಾರತೀಯರು ಮೃತಪಟ್ಟಿದ್ದಾರೆ ಮತ್ತು ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.

‘ಬುಧವಾರ ರಿಯಾದ್ ಮೇಲೆ ನಡೆದ ದಾಳಿಯಲ್ಲಿ ಭಾರತೀಯರೊಬ್ಬರು ಮೃತಪಟ್ಟಿರುವ ಬಗ್ಗೆ ಕಳೆದ ರಾತ್ರಿ ಮಾಹಿತಿ ಸಿಕ್ಕಿದೆ’ ಎಂದು ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ(ಕೊಲ್ಲಿ ರಾಷ್ಟ್ರ) ಅಸೀಮ್ ಆರ್.ಮಹಾಜನ್ ಅವರು ತಿಳಿಸಿದ್ದಾರೆ. ಆದರೆ ಅವರು ಘಟನೆಯ ಬಗ್ಗೆ ಪೂರ್ಣ ಮಾಹಿತಿ ನೀಡಿಲ್ಲ

‘ನಾಪತ್ತೆಯಾದ ಭಾರತೀಯರ ಪತ್ತೆಗೆ ಮತ್ತು ಮೃತರ ಶವಗಳನ್ನು ಭಾರತಕ್ಕೆ ಶೀಘ್ರದಲ್ಲಿ ಕಳುಹಿಸುವ ಪ್ರಕ್ರಿಯೆ ಬಗ್ಗೆ ಸೌದಿ ಅರೇಬಿಯಾ, ಒಮನ್, ಇರಾಕ್ ಮತ್ತು ಯುಎಇಯಲ್ಲಿರುವ ನಮ್ಮ ರಾಯಭಾರಿಗಳು ಅಲ್ಲಿನ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ’ ಎಂದು ಮಹಾಜನ್ ತಿಳಿಸಿದ್ದಾರೆ.

‘ಫೆಬ್ರುವರಿ 28ರಿಂದ ಈವರೆಗೆ ಪಶ್ಚಿಮ ಏಷ್ಯಾದಿಂದ ಮೂರು ಲಕ್ಷ ಜನರು ಭಾರತಕ್ಕೆ ವಾಪಸ್ ಆಗಿದ್ದಾರೆ’ ಎಂದು ಮಹಾಜನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.