ಸೋಲಾಪುರ: ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನ ಪಂಢರಪುರ, ಶ್ರೀ ಸ್ವಾಮಿ ಸಮರ್ಥ ಅಕ್ಕಲಕೋಟೆ ಮೊದಲಾದ ಮಹತ್ವದ ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಸೋಲಾಪುರ ಜಿಲ್ಲೆಯ ರಸ್ತೆಗಳಿಗೆ ವಿಶೇಷ ಮಹತ್ವವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೆದ್ದಾರಿ ಯೋಜನೆಗಳ ಮೂಲಕ ಈ ಧಾರ್ಮಿಕ ಸ್ಥಳಗಳಿಗೆ ಸುಲಭ ಸಂಪರ್ಕ ಕಲ್ಪಿಸಲಾಗುತ್ತಿದೆ. ಶ್ರೀ ವಿಠ್ಠಲನ ದರ್ಶನಕ್ಕಾಗಿ ಪಲ್ಲಕ್ಕಿಯೊಂದಿಗೆ ಬರುವ ವಾರಕರಿ ಭಕ್ತರಿಗಾಗಿ ವಿಶೇಷ ರಸ್ತೆ ನಿರ್ಮಿಸಲಾಗುತ್ತಿದೆ. ಇದರಿಂದ ವಾರಕರಿ ಭಕ್ತರ ಪ್ರಯಾಣ ಸುಖಕರವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ ಗಡ್ಕರಿ ಹೇಳಿದರು.

ಸಂತ ಜ್ಞಾನೇಶ್ವರ ಮಹಾರಾಜ ಹಾಗೂ ಸಂತ ತುಕಾರಾಮ ಮಹಾರಾಜರ ಪಲ್ಲಕ್ಕಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಗುರುವಾರ ನೇರವಾಗಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತುಳಜಾಪುರ, ಪಂಢರಪುರ ಹಾಗೂ ಅಕ್ಕಲಕೋಟೆ ಮಾರ್ಗಗಳ ರಸ್ತೆಗಳು ಹಿಂದಿನಿಂದಲೂ ಹದಗೆಟ್ಟ ಸ್ಥಿತಿಯಲ್ಲಿದ್ದವು. ಇದರಿಂದ ವಾರಕರಿ ಭಕ್ತರಿಗೆ ಪ್ರಯಾಣದಲ್ಲಿ ಅನೇಕ ತೊಂದರೆಗಳು ಎದುರಾಗುತ್ತಿದವು. ಈ ಮಾರ್ಗಗಳ ರಸ್ತೆಯನ್ನು ಸುಧಾರಿಸುವ ಸಂಕಲ್ಪ ಮಾಡಿಕೊಂಡಿದ್ದೆ ಎಂದು ಹೇಳಿದರು.

ಪ್ರಸ್ತುತ ಪಲ್ಲಕ್ಕಿ ರಾಷ್ಟ್ರೀಯ ಹೆದ್ದಾರಿ 80 ಶೇಕಡಾ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು. ಪಲ್ಲಕ್ಕಿ ರಾಷ್ಟ್ರೀಯ ಹೆದ್ದಾರಿಯ ಕೆಲವು ಬಾಕಿ ಕಾಮಗಾರಿಗಳು ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿವೆ. ವಾರಕರಿ–ಪಂಢರಪುರ ರಸ್ತೆಯ ಕಾಮಗಾರಿ ರೈಲ್ವೆ ಆಡಳಿತದಿಂದ ಬಾಕಿ ಉಳಿದಿದ್ದರೂ, ಅದನ್ನು ತಕ್ಷಣ ಪೂರ್ಣಗೊಳಿಸಿ ಮಾರ್ಗ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಅವರು ಹೇಳಿದರು.

ಈ ವೇಳೆ ಮಾಳಶಿರಸ್ ತಾಲ್ಲೂಕಿನ ಘುಳೆ ವಸ್ತಿ ಪ್ರದೇಶದಲ್ಲಿರುವ ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳ್ಕರ್ ನಿರ್ಮಿಸಿದ ಪುರಾತನ ಬಾವಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. ಜೊತೆಗೆ ಪಂಢರಪುರ ತಾಲ್ಲೂಕಿನ ಭಂಡೀಶೆಗಾಂವ್ ಪ್ರದೇಶದಲ್ಲಿರುವ ಬಾಜೀರಾವ್ ನಿರ್ಮಿಸಿದ ಐತಿಹಾಸಿಕ ಬಾವಿಯ ಅಭಿವೃದ್ಧಿಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಲಿದೆ ಎಂದು ಹೇಳಿದರು. ಈ ಎರಡೂ ಬಾವಿಗಳ ಪರಿಶೀಲನೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ನಡೆಸಿದರು. ನಂತರ ಅವರು ಗಿಡ ನೆಡುವ ಕಾರ್ಯಕ್ರಮದಲ್ಲೂ ಭಾಗವಹಿಸಿದರು.

ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಜಯಕುಮಾರ ಗೊರೆ, ಮಾಜಿ ಸಂಸದ ಮೋಹಿತೆ ಪಾಟೀಲ, ಶಾಸಕ ಸುಭಾಷ ದೇಶಮುಖ, ಸಮಾಧಾನ ಅವತಾಡೆ, ಅಭಿಜಿತ ಪಾಟೀಲ, ಮಾಜಿ ಸಂಸದ ರಂಜಿತ್ಸಿಂಗ್ ನಿಂಬಾಳ್ಕರ್, ಮಾಜಿ ಶಾಸಕ ಪ್ರಶಾಂತ ಪರಿಚಾರಕ, ಮಾಜಿ ಶಾಸಕ ರಂಜಿತಸಿಂಗ್ ಮೋಹಿತೆ ಪಾಟೀಲ, ಮಾಜಿ ಶಾಸಕ ರಾಮ ಸಾತ್ಪುತೆ, ಜಿಲ್ಲಾಧಿಕಾರಿ ಕಾರ್ತಿಕೇಯನ್ ಎಸ್., ಪೊಲೀಸ್ ಅಧೀಕ್ಷಕ ಅತುಲ್ ಕುಲಕರ್ಣಿ, ಉಪವಿಭಾಗಾಧಿಕಾರಿ ವಿಜಯ ಪಾಂಗ್ರೇಕರ್, ಸಚಿನ ಇತಾಪೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಅಂಶುಮಾನ ಶ್ರೀವಾಸ್ತವ, ಅಭಿಜಿತ್ ಔಟಿ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-26-2078504664

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.