ನವದೆಹಲಿ: ‘ನಾನೊಬ್ಬ ಗೌರವಾನ್ವಿತ ಜಿರಳೆ’ ಎನ್ನುವ ಮೂಲಕ ಪರಿಸರವಾದಿ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ಕಾಕ್ರೋಚ್ ಚಳುವಳಿಗೆ ಬೆಂಬಲ ಸೂಚಿಸಿದ್ದಾರೆ.

ಸಿಜೆಐ ಅವರ ಕಾಕ್ರೋಚ್ ಹೇಳಿಕೆಯ ಬಳಿಕ, ಸಾಮಾಜಿಕ ಜಾಲತಾಣದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’(ಸಿಜೆಪಿ) ಹೆಸರಿನಲ್ಲಿ ವಿಭಿನ್ನ ಅಭಿಯಾನ ಆರಂಭವಾಗಿದೆ.

ನಾನು ನಿರುದ್ಯೋಗಿ ಅಥವಾ ಆಲಸಿಯಾಗಿರದ ಕಾರಣ ನಾನು ಆ ಪಕ್ಷದ ಸದಸ್ಯನಾಗಿಲ್ಲ ಎಂದು ನಗುತ್ತಾ ಹೇಳಿದ ಅವರು, ನಾನು ನನ್ನನ್ನು ಗೌರವಾನ್ವಿತ ಜಿರಳೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಇದೊಂದು ಅಹಿಂಸಾತ್ಮಕ ಆಂದೋಲನವಾಗಿದ್ದು, ಈ ಅಭಿಯಾನದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಈ ರೀತಿಯ ಅಭಿಯಾನಗಳು ಭಾರತವನ್ನು ವಿಶ್ವಗುರು ಮಾಡುತ್ತವೆ ಎಂದು ಹೇಳಿದ್ದಾರೆ.

ಸರ್ಕಾರವು ಯುವಕರ ಧ್ವನಿಯನ್ನು ಕೇಳಿಸಿಕೊಳ್ಳಬೇಕು, ಅದು ಬಿಟ್ಟು ಅವರ ಅಭಿಪ್ರಾಯಗಳನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ಇದನ್ನು ಬೆದರಿಕೆ ಎಂದು ಪರಿಗಣಿಸುವುದಕ್ಕಿಂತ ಪ್ರಜಾಸತ್ತಾತ್ಮಕ ಪ್ರತಿಕ್ರಿಯೆಯ ರೀತಿ ನೋಡಬೇಕಾಗಿದೆ ಎಂದು ಹೇಳಿದ್ದಾರೆ.

ಇದೊಂದು ವ್ಯಂಗ್ಯಾತ್ಮಕ ಚಳುವಳಿಯಾಗಿದ್ದು, ಪತ್ರಿಕೆಗಳಲ್ಲಿ ಕಾರ್ಟೂನಿಸ್ಟ್ಗಳು ಮಾಡುವ ಕೆಲಸವನ್ನು ಇವರು ಮಾಡುತ್ತಿದ್ದಾರೆ. ಪ್ರಧಾನಿಯ ವ್ಯಂಗ್ಯಚಿತ್ರ ಮಾಡಿದಕ್ಕಾಗಿ ವ್ಯಂಗ್ಯಚಿತ್ರಕಾರನಿಗೆ ನೀವು ಗುಂಡು ಹೊಡೆಯಲು ಆಗುವುದಿಲ್ಲ. ಅದೇ ರೀತಿ, ಇದನ್ನೂ ಯುವಜನರ ಪ್ರತಿಕ್ರಿಯೆಯಾಗಿ ಪರಿಗಣಿಸಿ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.