ಕೊಲಂಬೊ: ತಮಿಳುನಾಡು ವಿಧಾನಸಭೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಐತಿಹಾಸಿಕ ಜಯಗಳಿದ ಬೆನ್ನಲ್ಲೇ, ಶ್ರೀಲಂಕಾದ ಹಲವು ರಾಜಕೀಯ ನಾಯಕರು ಅವರಿಗೆ ಶುಭಕೋರಿದ್ದಾರೆ.

234 ಸದಸ್ಯ ಬಲದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಶ್ರೀಲಂಕಾ ಲೋಕಸಭೆಯ ವಿರೋಧ ಪಕ್ಷವಾದ ಪೊದುಜನ ಪೆರಮುನಾದ ರಾಷ್ಟ್ರೀಯ ಸಂಘಟಕ ಮತ್ತು ಸಂಸದ ನಮಲ್ ರಾಜಪಕ್ಸೆ ಕೂಡ ವಿಜಯ್ ಗೆಲುವಿಗೆ ಅಭಿನಂದನೆ ತಿಳಿಸಿದ್ದಾರೆ. ‘ಐತಿಹಾಸಿಕ ಗೆಲುವಿಗೆ ಅಭಿನಂದನೆಗಳು. ಇನ್ನೂ ನಿಜವಾದ ಕೆಲಸ ಆರಂಭವಾಗಲಿದೆ. ನೀವು ಮತ್ತು ನಿಮ್ಮ ತಂಡಕ್ಕೆ ಮುಂಬರುವ ಸವಾಲುಗಳನ್ನು ಎದುರಿಸುವ ಬಲ ಸಿಗಲಿ. ಜನರಿಗೆ ಸಹಾಯವಾಗುವ ಯೋಜನೆಗಳನ್ನು ಜಾರಿಗೊಳಿಸಿ ಎಂದು ಹೇಳಿದ್ದಾರೆ.

ವಿಜಯ್ ಆಡಳಿತಾವಧಿಯಲ್ಲಿ ದ್ವಿಪಕ್ಷೀಯ ಸಂಬಂಧಗಳು ಸುಧಾರಿಸುವ ಮತ್ತು ಶ್ರೀಲಂಕಾದೊಂದಿಗಿನ ನಂಟು ಗಟ್ಟಿಯಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಬಟ್ಟಿಕಲೋವಾ ಜಿಲ್ಲೆಯ ಸಂಸದ ಶನಕಿಯಾನ್ ರಸಮಾಣಿಕಂ ಅವರು ಕೂಡ ವಿಜಯ್ ಗೆಲುವಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ‘ವಿಜಯ್ಗೆ ಅಭಿನಂದನೆಗಳು, ಇದೊಂದು ಐತಿಹಾಸಿಕ ಗೆಲುವಾಗಿದೆ. ಶ್ರೀಲಂಕಾದ ಪ್ರಮುಖ ತಮಿಳು ಪಕ್ಷವಾದ ನಾವು, ತಮಿಳುನಾಡು ಸರ್ಕಾರದೊಂದಿಗೆ ಕೆಲಸ ಮಾಡಲು ಉತ್ಸುಹಕವಾಗಿದ್ದೇವೆ’ ಎಂದು ಹೇಳಿದ್ದಾರೆ.

ತಮಿಳರು ಹೆಚ್ಚಿನ ಸಂಖ್ಯೆಯಲ್ಲಿರುವ ಶ್ರೀಲಂಕಾದ ಉತ್ತರ ಭಾಗದಲ್ಲಿ ವಿಜಯ್ ಅವರ ಗೆಲುವಿನ ನಂತರ ಸಂಭ್ರಮಾಚರಣೆ ಮಾಡಲಾಗಿದೆ. ಅದರಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.