ತಂಜಾವೂರು: ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಯಾವುದೇ ರೀತಿಯಲ್ಲಿ ಕ್ಷೇತ್ರಕಾರ್ಯಗಳನ್ನು ಮಾಡಿಲ್ಲ. ಕೇವಲ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಜನರ ಮೇಲೆ ಪ್ರಭಾವ ಬೀರುವ ಮೂಲಕ ಚುನಾವಣೆ ಗೆದ್ದಿದ್ದಾರೆ ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ.

ತಂಜಾವೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಸ್ಟಾಲಿನ್, ಡಿಎಂಕೆ ರೀತಿಯಲ್ಲಿ ಅವರು ಯಾವುದೇ ಕ್ಷೇತ್ರಕಾರ್ಯವನ್ನು ಮಾಡದೆ ಗೆದ್ದಿದ್ದಾರೆ. ಅವರು ಅನೇಕ ಮತಗಟ್ಟೆಗಳಲ್ಲಿ ಏಜೆಂಟ್ಗಳನ್ನು ಸಹ ನೇಮಿಸಿರಲಿಲ್ಲ ಎಂದು ನೇರವಾಗಿ ಟಿಎಂಕೆಯನ್ನು ಹೆಸರಿಸದೆ ಆರೋಪಿಸಿದ್ದಾರೆ.

ಟಿವಿಕೆಯು ಸಾಮಾಜಿಕ ಜಾಲತಾಣಗಳ ಮೂಲಕ ಯುವ ಮತದಾರರನ್ನು ಸೆಳೆದುಕೊಂಡರು, ನಂತರ ಅವರ ಮೂಲಕ ಕುಟುಂಬ ಸದಸ್ಯರ ಮೇಲೆ ಪ್ರಭಾವ ಬೀರಲಾಗಿದೆ ಎಂದು ಹೇಳಿದ್ದಾರೆ.

ಚುನಾವಣೆಯ ವೇಳೆ ಟಿವಿಕೆ ಸಾಮಾಜಿಕ ಜಾಲತಾಣಗಳನ್ನು ಪ್ರಭಾವಶಾಲಿಯಾಗಿ ಬಳಸಿಕೊಂಡಿದ್ದು ನಮ್ಮ ಕಣ್ಣಿಗೆ ಬೀಳಲಿಲ್ಲ, ಈಗ ಅದು ನಮ್ಮ ಗಮನಕ್ಕೆ ಬಂದಿದೆ. ಇನ್ನೂ ಮುಂದೆ ನಾವು ಬಹಳ ಜಾಗರೂಕವಾಗಿರುತ್ತೇವೆ. ಜಾಲತಾಣಗಳಲ್ಲಿ ರೂಪಿಸುವ ಯೋಜನೆಗಳಿಗೆ ಪ್ರತಿತಂತ್ರ ರೂಪಿಸುವ ಕುರಿತು ಯೋಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

1949ರಲ್ಲಿ ಸ್ಥಾಪನೆಯಾದ ಡಿಎಂಕೆ ಹಲವಾರು ಚುನಾವಣಾ ಗೆಲುವು ಮತ್ತು ಸೋಲುಗಳನ್ನು ಕಂಡಿದೆ. ಈ ಚುನಾವಣಾ ಫಲಿತಾಂಶದಿಂದ ನಾವು ನಿರಾಶರಾಗುವುದಿಲ್ಲ. ಮತ್ತೊಮ್ಮೆ ಫೀನಿಕ್ಸ್ನಂತೆ ಎದ್ದೇಳಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.