ಚೆನ್ನೈ: ಡಿಎಂಕೆ ಆದ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ‘ದ್ರಾವಿಡ ಮಾದರಿ 2.0’ ಅಡಿಯಲ್ಲಿ ಮತ್ತೆ ಸರ್ಕಾರ ರಚಿಸಲು ಕಂಡಿದ್ದ ಕನಸು ನನಸಾಗಲಿಲ್ಲ. ಹೊಸ ಪಕ್ಷ ಟಿವಿಕೆ ವಿರುದ್ಧ ಡಿಎಂಕೆ ಸೋತಿದ್ದು, ಸ್ಟಾಲಿನ್ ಅವರ ದಶಕಗಳಷ್ಟು ಹಳೆಯ ರಾಜಕೀಯ ಜೀವನದಲ್ಲಿ ಹಿನ್ನಡೆ ಉಂಟು ಮಾಡಿದೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧನಕ್ಕೆ ಒಳಗಾಗಿದ್ದ ಸ್ಟಾಲಿನ್ ಅವರು ನಂತರ ಪಕ್ಷದಲ್ಲಿ ವಿವಿಧ ಹಂತಗಳಲ್ಲಿ ಬೆಳೆದು ಬಂದರು. ತಳಮಟ್ಟದಲ್ಲಿ ಹಲವು ದಶಕಗಳ ಕಾಲ ದುಡಿದ ಅವರು, ಡಿಎಂಕೆಯ ಯುವ ಘಟಕವನ್ನು ರಾಜಕೀಯ ಶಕ್ತಿಯಾಗಿ ಪರಿವರ್ತಿಸಿದರು.

ಮೊದಲ ಬಾರಿಗೆ, 1989ರಲ್ಲಿ ಚೆನ್ನೈನ ಥೌಸಂಡ್ ಲೈಟ್ಸ್ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ ಅವರು, 1996ರಲ್ಲಿ ಅದೇ ಕ್ಷೇತ್ರದಿಂದ ಮತ್ತೆ ಆಯ್ಕೆಯಾದರು. 2001 ಮತ್ತು 2006ರಲ್ಲೂ ಪುನರಾಯ್ಕೆಯಾದರು. 1996–2002ರವರೆಗೆ ಸ್ಟಾಲಿನ್ ಚೆನ್ನೈನ ಮೇಯರ್ ಆಗಿ ಆಯ್ಕೆಯಾಗಿ, ಉತ್ತಮ ಕೆಲಸ ಮಾಡಿ ಜನರ ಪ್ರೀತಿಗಳಿಸಿದರು.

2011ರಲ್ಲಿ ಕೊಲತ್ತೂರು ಕ್ಷೇತ್ರದಿಂದ, 2016ರಲ್ಲಿ ನಗರ ವಿಭಾಗದಿಂದ ಮರು ಆಯ್ಕೆಯಾದರು. 2021ರಲ್ಲಿ ಮತ್ತೆ ಕೊಲತ್ತೂರು ಕ್ಷೇತ್ರದಿಂದ 75,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರು. ಜಾತ್ಯತೀತ ಪ್ರಗತಿಪರ ಒಕ್ಕೂಟವನ್ನು (ಎಸ್ಪಿಎ) ಸಮರ್ಥವಾಗಿ ಮುನ್ನಡೆಸಿದ ಅವರು ಸರ್ಕಾರ ರಚಿಸಿದರು. 2021ರ ಮೇ 7ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸ್ಟಾಲಿನ್ ಅವರು ಒಟ್ಟು ಏಳು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 2018ರಲ್ಲಿ ತಂದೆ, ದ್ರಾವಿಡ ನಾಯಕ ಎಂ. ಕರುಣಾನಿಧಿ ಅವರು ನಿಧನರಾದ ಬಳಿಕ ಪಕ್ಷದ ನಾಯಕತ್ವ ವಹಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.