ಚೆನ್ನೈ: ಚೆನ್ನೈ ನಗರವನ್ನೇ ಕೇಂದ್ರೀಕರಿಸಿಕೊಂಡು ರೂಪಿಸಿರುವ ಚುನಾವಣಾ ಪ್ರಣಾಳಿಕೆಯನ್ನು ಡಿಎಂಕೆ ಪಕ್ಷವು ಭಾನುವಾರ ಬಿಡುಗಡೆ ಮಾಡಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಡಿಎಂಕೆ ಪ್ರಧಾನ ಕಚೇರಿಯಲ್ಲಿ ‘ಚೆನ್ನೈ ಸೂಪರ್– 6’ ಹೆಸರಿನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.

‘ಅಣ್ಣಾ ಅರಿವಲಯಂ’ ಪ್ರಣಾಳಿಕೆಯ ಮೊದಲ ಪ್ರತಿಯನ್ನು ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಸ್ವೀಕರಿಸಿದರು.

ಪ್ರಣಾಳಿಕೆಯು ಆರು ಅಂಶಗಳಿಂದ ಕೂಡಿದೆ. ವಾಹನ ದಟ್ಟಣೆ ಹಾಗೂ ಪ್ರಯಾಣದ ಸಮಯ ಕಡಿಮೆ ಮಾಡಲಿಕ್ಕಾಗಿ 1 ಸಾವಿರ ಹೊಸ ಮಿನಿ ಬಸ್ ಓಡಿಸಲಾಗುವುದು. ಎಐ ಮೂಲಕ ಸಾರಿಗೆ ಸಂಚಾರದ ನಿರ್ವಹಣೆ ಮಾಡಲಾಗುವುದು ಎಂದಿದೆ.

ಮಳೆನೀರಿನ ಚರಂಡಿಗಳು, ಪ್ರಮುಖ ರಸ್ತೆ ಯೋಜನೆಗಳು, ವಿಶ್ವದರ್ಜೆಯ ಸೌಲಭ್ಯಗಳು ಆಡಳಿತ ಪಕ್ಷವು ನೀಡಿರುವ ಭರವಸೆಗಳಲ್ಲಿ ಸೇರಿವೆ.

ಬೀದಿ ನಾಯಿ ಉಪಪಳ ನಿಭಾಯಿಸಲು ಪಶುವೈದ್ಯಕೀಯ ವೈದ್ಯರು ಹಾಗೂ ಕ್ಷೇತ್ರ ಸಿಬ್ಬಂದಿಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸುವುದಾಗಿ ಪಕ್ಷ ಹೇಳಿದೆ.

ಕೃತಕ ಬುದ್ಧಿಮತ್ತೆ (ಎಐ), ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ತಂತ್ರಜ್ಞಾನದ ವಿಶೇಷ ಕೇಂದ್ರಗಳ ಭರವಸೆಯನ್ನೂ ನೀಡಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.