ಬೆಂಗಳೂರು: ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಅವರ ನಿಧನದ ಬಳಿಕ ತೆರವಾದ ಬಾರಾಮತಿ ಕ್ಷೇತ್ರದ ಉಪಚುನಾವಣೆಯಲ್ಲಿ ಅಜಿತ್ ಪವಾರ್ ಅವರ ಪತ್ನಿ, ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು ವಿಜಯಶಾಲಿಯಾಗಿದ್ದಾರೆ.

ಅವರು ಭರ್ಜರಿ 1.75 ಲಕ್ಷಕ್ಕೂ ಅಧಿಕ ಮತಗನ್ನು ಪಡೆದು ಗೆದ್ದಿದ್ದಾರೆ.

ಕಣದಲ್ಲಿ ನೋಟಾ ಸೇರಿದಂತೆ 18 ಅಭ್ಯರ್ಥಿಗಳಿದ್ದರು. ಕಾಂಗ್ರೆಸ್ ಹಾಗೂ ಎನ್ಸಿಪಿ ಶರದ್ ಪವಾರ್, ಉದ್ಧವ್ ಠಾಕ್ರೆ ಅವರ ಶಿವಸೇನಾ ಬಣದ ಯಾವುದೇ ಅಭ್ಯರ್ಥಿಗಳು ಕಣದಲ್ಲಿರಲಿಲ್ಲ. ಹೀಗಾಗಿ ಅವರ ಭಾರಿ ಗೆಲುವು ಸಹಜವಾಗಿದೆ.

ನ್ಯೂ ರಾಷ್ಟ್ರೀಯ ಸಮಾಜ ಪಾರ್ಟಿ ಅಭ್ಯರ್ಥಿ ಆರ್.ವೈ.ಗುಟುಕಡೆ ಕೇವಲ 600 ಮತ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ ನೋಟಾ ಇದೆ.

ಸುನೇತ್ರಾ ಪವಾರ್ ಒಟ್ಟು 1.70 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿ 2024 ರಲ್ಲಿ ಪತಿ ಅಜಿತ್ ಪವಾರ್ ಅವರ ದಾಖಲೆಯನ್ನು (1.68 ಲಕ್ಷ 2024ರಲ್ಲಿ) ಮುರಿದಿದ್ದಾರೆ.

ಸುನೇತ್ರಾ ಪವಾರ್ ಅವರು ವಿಜಯಶಾಲಿಯಾದರೂ ಕ್ಷೇತ್ರದಲ್ಲಿ ಯಾವುದೇ ಸಂಭ್ರಮಾಚರಣೆ ಇಲ್ಲ ಎಂದು ಪವಾರ್ ಕುಟುಂಬದವರು ಘೋಷಣೆ ಮಾಡಿದ್ದಾರೆ.

ಬಾರಾಮತಿ ಕ್ಷೇತ್ರದಿಂದ ಎಂಟು ಬಾರಿ ಶಾಸಕರಾಗಿದ್ದ ಮತ್ತು ಆರು ಬಾರಿ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರು ಜನವರಿ 28ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು.

ಅವರು 1991,1995, 1999, 2004, 2009, 2014, 2019 ಮತ್ತು 2024ರಲ್ಲಿ ಬಾರಾಮತಿ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಈ ಕ್ಷೇತ್ರದೊಂದಿಗೆ ಬಲವಾದ ನಂಟು ಹೊಂದಿದ್ದರು.
.ಬಾರಾಮತಿ ಉಪಚುನಾವಣೆ: ನಾಮಪತ್ರ ಹಿಂಪಡೆದ ಕಾಂಗ್ರೆಸ್, ಸುನೇತ್ರಾ ಅವಿರೋಧ ಆಯ್ಕೆ?.ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿ ಸುನೇತ್ರಾ ಪ್ರಮಾಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.