ಚೆನ್ನೈ: ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಗೆ ಸಂಬಂಧ ವಿಜಯ್ ನೇತೃತ್ವದ ತಮಿಳಗ ವೇಟ್ರಿ ಕಳಗಂ (ಟಿವಿಕೆ) ಬೆಂಬಲ ಕೋರಿರುವ ಮಧ್ಯೆ ವಿಸಿಕೆ ಹಾಗೂ ಎಡಪಕ್ಷಗಳ ನಾಯಕರು ಗುರುವಾರ ನಿರ್ಗಮಿತ ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಡಿಎಂಕೆಯ ಮೂರು ಮಿತ್ರಪಕ್ಷಗಳು ಶುಕ್ರವಾರ ಪ್ರತ್ಯೇಕವಾಗಿ ಸಭೆ ಸೇರಿ ಟಿವಿಕೆ ಕೋರಿಕೆಯ ಕುರಿತು ನಿರ್ಧರಿಸಲಿವೆ ಎಂದು ಸ್ಟಾಲಿನ್ ಅವರೊಂದಿಗಿನ ಭೇಟಿಯ ಬಳಿಕ ವಿಸಿಕೆ ಮುಖ್ಯಸ್ಥ ತೊಲ್ ತಿರುಮವಲವನ್ ತಿಳಿಸಿದ್ದಾರೆ.
.ನೂತನ ಶಾಸಕಿಯನ್ನು ಬಹಿರಂಗವಾಗಿ ತಬ್ಬಿಕೊಳ್ಳಲು ಯತ್ನಿಸಿದ ಕೇರಳಂ ಕಾಂಗ್ರೆಸ್ ನಾಯಕ.ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಗೆ ಎಡಪಕ್ಷಗಳ ಬೆಂಬಲ ಕೋರಿದ ಟಿವಿಕೆ.
ಸ್ಟಾಲಿನ್ ಅವರ ಭೇಟಿಗೂ ಮುನ್ನ ತಿರುಮವಲವನ್, ಸಿಪಿಐ ರಾಜ್ಯ ಕಾರ್ಯದರ್ಶಿ ಎಂ.ವೀರಪಾಂಡ್ಯನ್ ಮತ್ತು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

'ನಾವು ಜಾದೂ ಮಾಡಲು ಸಾಧ್ಯವಿಲ್ಲ. ವಿಸಿಕೆಯ ಉನ್ನತ ಮಟ್ಟದ ಸಮಿತಿ ಶುಕ್ರವಾರ ಸಭೆ ಸೇರಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಎಡ ಪಕ್ಷಗಳು ಪ್ರತ್ಯೇಕವಾಗಿ ಸಭೆ ನಡೆಸಲಿವೆ' ಎಂದು ಅವರು ಹೇಳಿದ್ದಾರೆ.

ಸ್ಟಾಲಿನ್ ಅವರೊಂದಿಗಿನ ಭೇಟಿ ಕುರಿತು ಕೇಳಿದಾಗ 'ನಾವು ಚುನಾವಣಾ ಫಲಿತಾಂಶದ ಬಗ್ಗೆ ಚರ್ಚಿಸಿದ್ದೇವೆ' ಎಂದು ಹೇಳಿದ್ದಾರೆ.

ಈ ಮೂರು ಪಕ್ಷಗಳು ತಲಾ ಇಬ್ಬರು ಶಾಸಕರ ಬಲವನ್ನು ಹೊಂದಿದೆ.

ಮತ್ತೊಂದೆಡೆ ಡಿಎಂಕೆಯ ದೀರ್ಘಕಾಲದ ಮಿತ್ರ ಪಕ್ಷವಾದ ಕಾಂಗ್ರೆಸ್ನ ನೂತನ ಐವರು ಶಾಸಕರು ಟಿವಿಕೆ ಜೊತೆ ಚುನಾವಣೋತ್ತರ ಮೈತ್ರಿಯನ್ನು ಘೋಷಿಸಿದ್ದರು.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆದ್ದಿದ್ದ ಟಿವಿಕೆ ಅತಿ ದೊಡ್ಡ ಪಕ್ಷವೆನಿಸಿತು. ವಿಜಯ್ ನೂತನ ಸರ್ಕಾರ ರಚಿಸುವ ಹಕ್ಕು ಮಂಡಿಸಿದ್ದರೂ ಬಹುಮತ ಇಲ್ಲ ಎಂಬ ಕಾರಣಕ್ಕೆ ರಾಜ್ಯಪಾಲರು ಅವಕಾಶ ನಿರಾಕರಿಸಿದರು.
.ತಮಿಳುನಾಡಿನಲ್ಲಿ ಸರ್ಕಾರ ರಚನೆ ಕಗ್ಗಂಟು: ಡಿಎಂಕೆ-ಎಐಎಡಿಎಂಕೆ ಮೈತ್ರಿ ಸಾಧ್ಯವೇ?.ಸರ್ಕಾರ ರಚಿಸಲು ಬಹುಮತ ಇಲ್ಲ: ಟಿವಿಕೆ ಮುಖ್ಯಸ್ಥ ವಿಜಯ್ಗೆ ತಿಳಿಸಿದ ರಾಜ್ಯಪಾಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.