ನವದೆಹಲಿ: 14 ವರ್ಷಗಳಿಗೂ ಹೆಚ್ಚಿನ ಶಿಕ್ಷೆಯ ಅವಧಿಯ ಮೇಲ್ಮನವಿಗಳನ್ನು ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠ ಮಾತ್ರ ವಿಚಾರಣೆ ಮಾಡಬೇಕು ಎಂಬುದರ ಕುರಿತ ಅರ್ಜಿ ಪರಿಶೀಲಿಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ. ನ್ಯಾಯಮೂರ್ತಿಗಳಾದ ಕೆ.ವಿ ವಿಶ್ವನಾಥನ್ ಮತ್ತು ವಿಪುಲ್ ಎಂ. ಪಂಚೋಲಿ ಅವರ ಪೀಠವು ಭಾರತದ ಅಟಾರ್ನಿ ಜನರಲ್ಗೆ ನೋಟಿಸ್ ಜಾರಿ ಮಾಡಿದೆ.

ಮೇಲ್ಮನವಿದಾರರ ಪರ ವಾದ ಮಂಡಿಸಿದ ವಕೀಲ ಎ. ಸಿರಾಜುದ್ದೀನ್, ‘ಹಲವು ಹೈಕೋರ್ಟ್ಗಳಲ್ಲಿ 10 ವರ್ಷಕ್ಕೂ ಮೇಲ್ಪಟ್ಟ ಮೇಲ್ಮನವಿ ಅರ್ಜಿಗಳನ್ನು ವಿಭಾಗೀಯ ಪೀಠವೇ ಪರಿಶೀಲಿಸುತ್ತಿದೆ‘ ಎಂದರು.

‘2012ರ ಪೋಕ್ಸೊ ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ವಿಚಾರಣಾ ನ್ಯಾಯಾಲಯವು ಅಪರಾಧಿಗೆ 20 ವರ್ಷಗಳ ಶಿಕ್ಷೆ ವಿಧಿಸಿದೆ. ಆದರೆ, ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376-ಎಬಿ ಅಡಿಯಲ್ಲಿ ಪ್ರತ್ಯೇಕ ಶಿಕ್ಷೆ ವಿಧಿಸಿಲ್ಲ. ಮೇಲ್ಮನವಿಯ ವಿಚಾರಣೆ ವೇಳೆ 2019 ರಲ್ಲಿ ಪೋಕ್ಸೊ ಕಾಯ್ದೆ ತಿದ್ದುಪಡಿಯಾಗಿರುವುದನ್ನು ಗಮನಿಸಿದ ಹೈಕೋರ್ಟ್, 20 ವರ್ಷಗಳ ಶಿಕ್ಷೆಯನ್ನು ಐಪಿಸಿಯ ಸೆಕ್ಷನ್ 376-ಎಬಿ ಅಡಿಯಲ್ಲಿ ಅಪರಾಧಕ್ಕೆ ವಿಧಿಸಲಾಗಿದೆ ಹೊರತು ಪೋಕ್ಸೊ ಅಪರಾಧಕ್ಕೆ ಅಲ್ಲ ಎಂದು ಹೇಳಿತ್ತು‘.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-51-1914176507

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.