ನವದೆಹಲಿ: ‘ಒಬ್ಬ ಮಹಿಳೆಗೆ ಅದರಲ್ಲಿಯೂ ಬಾಲಕಿಗೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಮಗುವಿಗೆ ಜನ್ಮ ನೀಡಲೇಬೇಕು ಎಂದು ಯಾವುದೇ ನ್ಯಾಯಾಲಯ ಕೂಡ ಒತ್ತಾಯಪಡಿಸಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ಶುಕ್ರವಾರ ಹೇಳಿದೆ. ದೆಹಲಿ ಏಮ್ಸ್ನಲ್ಲಿ 15 ವರ್ಷದ ಬಾಲಕಿಗೆ ತನ್ನ ಏಳುತಿಂಗಳ ಭ್ರೂಣವನ್ನು ತೆಗೆಸಿಕೊಳ್ಳುವುದಕ್ಕೆ ನ್ಯಾಯಾಲಯ ಒಪ್ಪಿಗೆ ನೀಡಿತು.

ಪರಿಣಾಮದ ಅರಿವಿದ್ದೇ ಬಾಲಕಿಯು ಗರ್ಭ ಧರಿಸಿದ್ದಳು. ಆದರೆ, ಇಲ್ಲಿ ಬಾಲಕ ಮತ್ತು ಬಾಲಕಿಯರು ಇಬ್ಬರೂ 18 ವರ್ಷ ಕೆಳಗಿನವರು. ಗರ್ಭ ಧರಿಸಿದ ಬಳಿಕ ಮಗುವಿಗೆ ಜನ್ಮ ನೀಡಲು ಬಾಲಕಿ ನಿರಾಕರಿಸಿದ್ದಳು ಮತ್ತು ಗರ್ಭಿಣಿಯಾದ ಮೇಲೆ ಆಕೆ ಮಾನಸಿಕವಾಗಿ ಸಮಸ್ಯೆ ಎದುರಿಸುತ್ತಿದ್ದಾಳೆ. ಆದ್ದರಿಂದ ಭ್ರೂಣ ತೆಗೆಸಲು ಅನುಮತಿ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. ‘ಬಾಲಕಿಗೆ ಮಗುವಿಗೆ ಜನ್ಮ ನೀಡಲು ಇಷ್ಟವಿಲ್ಲ. ಜೊತೆಗೆ, ಆಕೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇಂಥ ಸಂದರ್ಭದಲ್ಲಿ ಗರ್ಭಿಣಿಯ ಕುರಿತು ಹೆಚ್ಚು ಯೋಚಿಸಬೇಕೇ ವಿನಃ ಹುಟ್ಟಲಿರುವ ಮಗುವಿನ ಕುರಿತು ಯೋಚಿಸಬಾರದು’ ಎಂದು ಪೀಠ ಹೇಳಿತು.

‘ಭ್ರೂಣ ತೆಗೆಸಲು ಅನುಮತಿ ನೀಡಲಿಲ್ಲವಾದರೆ, ಬಾಲಕಿಯು ಆಕೆಯ ಜೀವನದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ, ಮಗುವಿಗೆ ಜನ್ಮ ನೀಡಲು ಒತ್ತಾಯಿಸುವುದು ಮಹಿಳೆಯ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಜನ್ಮ ನೀಡಬೇಕು ಬೇಡ ಎನ್ನುವುದು ಮಹಿಳೆಯ ಹಕ್ಕು’ ಎಂದು ಪೀಠ ಅಭಿಪ್ರಾಯಪಟ್ಟಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-51-1203337597

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.