ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ಜೊತೆ ನಕಲಿ ವಕೀಲರು ಮತ್ತು ಕಾರ್ಯಕರ್ತರು ನಂಟು ಹೊಂದಿದ್ದಾರೆ ಎಂಬ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

‘ಈ ವಿಚಾರವನ್ನು ಭಾವನಾತ್ಮಕವಾಗಿ ಪರಿಗಣಿಸಬೇಡಿ’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರಿದ್ದ ಪೀಠವು ವಕೀಲರಾದ ಎನ್.ಕೆ. ಗೋಸ್ವಾಮಿ ಅವರಿಗೆ ಸೂಚಿಸಿದೆ.

ನಕಲಿ ಕಾನೂನು ಪದವಿ ವಿಚಾರವಾಗಿ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದ ಮತ್ತೊಬ್ಬ ವಕೀಲರು, ‘ನ್ಯಾಯಾಲಯದ ವಿಚಾರಗಳು ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗಬಾರದು’ ಎಂದು ಹೇಳಿದರು.

‘ಮುಖ್ಯನ್ಯಾಯಮೂರ್ತಿಗಳ ಸ್ಪಷ್ಟನೆಯ ಹೊರತಾಗಿಯೂ, ವಿಕೃತ ಮತ್ತು ದುರುದ್ದೇಶಪೂರಿತ ಹೇಳಿಕೆಗಳನ್ನು ನೀಡುವುದು ಮುಂದುವರಿದಿದೆ’ ಎಂದು ಗೋಸ್ವಾಮಿ ನ್ಯಾಯಾಲಯಕ್ಕೆ ತಿಳಿಸಿದರು.

‘ಈ ಅರ್ಜಿ ವಿಚಾರಣೆಗೆ ಅಂಥ ತುರ್ತು ಏನಿಲ್ಲ. ನಾವು ಪರಿಶೀಲಿಸುತ್ತೇವೆ’ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ತಿಳಿಸಿದರು.

ನ್ಯಾಯಾಲಯದ ವಿಚಾರಣೆ ಸಂದರ್ಭ ಮಾಡಲಾದ ಮೌಖಿಕ ಅವಲೋಕನಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ನಕಲಿ ಪದವಿ ಪಡೆದಿರುವವರು ವಕೀಲಿ ವೃತ್ತಿಯನ್ನು ಮಾಡುತ್ತಿದ್ದಾರೆ ಎಂಬ ಆರೋಪಗಳ ಬಗ್ಗೆ ತನಿಖೆ ಮಾಡುವಂತೆಯೂ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಮೇ 15ರಂದು ವಕೀಲರೊಬ್ಬರ ಪದೋನ್ನತಿ ಕುರಿತ ಅರ್ಜಿಯ ವಿಚಾರಣೆ ವೇಳೆ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ‘ಜಿರಳೆಗಳು’ ಮತ್ತು ‘ಪರಾವಲಂಬಿಗಳು’ ಎಂಬ ಪದ ಬಳಸಿದ್ದರು. ಈ ಬಳಿಕ ‘ಜಿರಳೆ’ ಹೆಸರಿನಲ್ಲಿ ಸಿಜೆಪಿ ಹುಟ್ಟಿಕೊಂಡಿತ್ತು.

ತಮ್ಮ ಹೇಳಿಕೆಯು ನಕಲಿ ಪದವಿಗಳ ಮೂಲಕ ವಕೀಲ ವೃತ್ತಿಗೆ ಪ್ರವೇಶಿಸುವವರ ಕುರಿತು ಹೇಳಿಕೆ ನೀಡಿದ್ದೆ. ಆದರೆ ಕೆಲವು ಮಾಧ್ಯಮಗಳು ಅದನ್ನು ತಪ್ಪಾಗಿ ವರದಿ ಮಾಡಿವೆ ಎಂದು ಸಿಜೆಐ ಸ್ಪಷ್ಟನೆ ನೀಡಿದ್ದರು.

‘ಸಿಜೆಪಿ: ರಾಜಕೀಯ ದೃಷ್ಟಿಕೋನದಿಂದ ನೋಡಬೇಡಿ’

ಅಮರಾವತಿ: ಸಿಜೆಪಿ ದೇಶದ ಯುವಜನರ ನಿರಾಶೆಯ ಪ್ರತಿಫಲವಾಗಿದೆ. ಅದನ್ನು ಯುವಜನರ ಸಮಸ್ಯೆಗಳ ದೃಷ್ಟಿಯಿಂದ ನೋಡಬೇಕು ಎಂದು ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ಟಿಡಿಪಿ ಸೋಮವಾರ ಹೇಳಿದೆ.

ಸಿಜೆಪಿ ವಿಚಾರವನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಪ್ರಜಾಪ್ರಭುತ್ವ ಸರ್ಕಾರಗಳು ಯುವಜನರ ಭಾವನೆಗಳನ್ನು ಸ್ವೀಕರಿಸಬೇಕು ಎಂದು ಟಿಡಿಪಿ ರಾಜ್ಯ ಘಟಕದ ಅಧ್ಯಕ್ಷ ಪಲ್ಲ ಶ್ರೀನಿವಾಸ್ ರಾವ್ ಅವರು ಹೇಳಿದ್ದಾರೆ.
.ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಮನೆಗೆ ಪೊಲೀಸ್ ಕಾವಲು: ಕಾರಣವೇನು?.ಕಾಕ್ರೋಚ್ ಪಾರ್ಟಿಯ ಎಕ್ಸ್, ಇನ್ಸ್ಟಾ, ವೆಬ್ಸೈಟ್ಗೆ ತಡೆ: ಅಭಿಜೀತ್ ದಿಪ್ಕೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.