ನವದೆಹಲಿ: ‘ವೇತನ ಸಹಿತ ಮುಟ್ಟಿನ ರಜೆ’ ನೀತಿಯನ್ನು ಕಾನೂನುಬದ್ಧಗೊಳಿಸುವುದರಿಂದ ಅದು ಮಹಿಳೆಯರ ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಮಹಿಳಾ ಉದ್ಯೋಗಿಗಳು ಮತ್ತು ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ನೀತಿಯೊಂದನ್ನು ರೂಪಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಾಲ್ಯಾ ಬಾಗ್ಚಿ ಅವರಿದ್ದ ನ್ಯಾಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಷ್ಟ್ರವ್ಯಾಪಿ ‘ಮುಟ್ಟಿನ ರಜೆ ನೀತಿ’ ಜಾರಿಗೊಳಿಸಲು ಸಕ್ಷಮ ಪ್ರಾಧಿಕಾರವು ಅಹವಾಲುಗಳನ್ನು ಸ್ವೀಕರಿಸಿ ಅದರ ಸಾಧ್ಯತೆಗಳನ್ನು ಪರಿಶೀಲಿಸಬಹುದು ಎಂದು ಪುನರುಚ್ಚರಿಸಿದ ನ್ಯಾಯಪೀಠವು, ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿ, ಶೈಲೇಂದ್ರ ಮಣಿ ತ್ರಿಪಾಠಿ ಎಂಬುವರು ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿತು.

‘ಇಂತಹ ನೀತಿಗಳನ್ನು ರೂಪಿಸುವುದು ಹಾಗಿರಲಿ, ಉದ್ಯೋಗ ಮಾರುಕಟ್ಟೆಯ ವಾಸ್ತವಗಳನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಪೀಠ ಹೇಳಿತು.
.ಮುಟ್ಟಿನ ರಜೆ ನಿರಾಕರಿಸಿದರೆ ₹5 ಸಾವಿರದವರೆಗೆ ದಂಡ: ಮಸೂದೆ ಸಿದ್ಧ.ಉದ್ಯೋಗಸ್ಥ ಮಹಿಳೆಯರಿಗೆ ವರ್ಷಕ್ಕೆ 12 ಮುಟ್ಟಿನ ರಜೆ: ಕಾರ್ಮಿಕ ಇಲಾಖೆ ಆದೇಶ.
ಅಲ್ಲದೇ ‘ಬಹುಮುಖ್ಯವಾಗಿ ಯುವತಿಯರಲ್ಲಿ ತಾವು ಕೀಳು ಎಂಬ ಭಾವನೆ ಮೂಡದಿರುವಂತೆ ನೋಡಿಕೊಳ್ಳಬೇಕು’ ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಎಂ.ಆರ್ ಶಂಶಾದ್ ಅವರು, ‘ಈಗಾಗಲೇ ಕರ್ನಾಟಕ, ಒಡಿಶಾ ರಾಜ್ಯಗಳು ಮತ್ತು ಕೆಲವು ಸಂಸ್ಥೆಗಳು ಮುಟ್ಟಿನ ರಜೆಯನ್ನು ನೀಡಲು ಕ್ರಮ ಕೈಗೊಂಡಿವೆ. ಕೇರಳದ ಶಾಲೆಗಳಲ್ಲಿ ಮುಟ್ಟಿನ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ರಜೆ ನೀಡಲಾಗುತ್ತಿದೆ. ಕೆಲವು ಖಾಸಗಿ ಕಂಪನಿಗಳಲ್ಲಿ ಸ್ವಯಂ ಪ್ರೇರಣೆಯಿಂದ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆಯನ್ನು ನೀಡಲಾಗುತ್ತಿದೆ’ ಎಂದು ಪೀಠದ ಗಮನಕ್ಕೆ ತಂದರು.

‘ಪುರುಷರೊಂದಿಗೆ ಸರಿಸಮಾನವಾಗಿರಲು ಆಗದಂತಹ ಕೆಲವು ನೈಸರ್ಗಿಕ ಸಮಸ್ಯೆಗಳು ಮಹಿಳೆಯರಿಗೆ ಇವೆ’ ಎಂದು ಅರ್ಜಿದಾರರು ಹೇಳಲು ಹೊರಟಿದ್ದಾರೆ. ಈ ಅರ್ಜಿಯ ಹಿಂದೆ ಬೇರೆ ಆಳವಾದ ಉದ್ದೇಶವಿದೆ. ಇದು ಮಹಿಳೆಯರ ಬಗೆಗಿನ ನೈಜ ಕಾಳಜಿಯ ಅರ್ಜಿ ಅಲ್ಲ’ ಎಂದು ಅಭಿಪ್ರಾಯಪಟ್ಟ ಪೀಠವು, ಮಹಿಳೆಯರಿಗೆ ವೇತನ ಸಹಿತ ಮುಟ್ಟಿನ ರಜೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಲೇವಾರಿ ಮಾಡಿತು.

ಮುಟ್ಟಿನ ರಜೆ ನೀತಿಗೆ ಸಂಬಂಧಿಸಿದಂತೆ ಅರ್ಜಿದಾರರು ಈಗಾಗಲೇ ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಹಾಗಾಗಿ, ಈ ಬಗ್ಗೆ ಆದೇಶ ಕೋರಿ ಪದೇ ಪದೇ ಕೋರ್ಟ್ ಮೆಟ್ಟಿಲೇರುವ ಅಗತ್ಯವಿಲ್ಲ ಎಂದೂ ನ್ಯಾಯಪೀಠ ಎಚ್ಚರಿಕೆ ನೀಡಿತು.

ಉದ್ಯೋಗದಾತರ ಬಗ್ಗೆಯೂ ಯೋಚಿಸಿ..

ಕಾನೂನಿನ ಮೂಲಕ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವುದರಿಂದ ಆಗುವ ಸಾಮಾಜಿಕ ಪರಿಣಾಮಗಳ ಬಗ್ಗೆಯೂ ಪೀಠ ಕಳವಳ ವ್ಯಕ್ತಪಡಿಸಿದೆ. ಇದೇ ವೇಳೆ ವೇತನ ಸಹಿತ ರಜೆ ನೀಡಬೇಕಾದ ಉದ್ಯೋಗದಾತರ ಬಗ್ಗೆಯೂ ಯೋಚಿಸಬೇಕಾಗಿದೆ ಎಂದು ಹೇಳಿದೆ. ಮುಟ್ಟಿನ ರಜೆ ‘ಕಾನೂನಾತ್ಮಕವಾಗಿ ಕಡ್ಡಾಯ’ ಎಂದು ಹೇಳಿದರೆ ಯಾರೂ ಮಹಿಳೆಯರಿಗೆ ಕೆಲಸ ಕೊಡಲು ಮುಂದೆ ಬರುವುದಿಲ್ಲ. ಯಾರೂ ಅವರನ್ನು ನ್ಯಾಯಾಂಗ ಅಥವಾ ಸರ್ಕಾರಿ ಕೆಲಸಗಳಿಗೆ ತೆಗೆದುಕೊಳ್ಳುವುದಿಲ್ಲ. ಅವರ ವೃತ್ತಿಜೀವನ ಮುಗಿದೇಹೋಗುತ್ತದೆ. ಹಾಗಾಗಿ ‘ವ್ಯವಹಾರದ ಮಾದರಿ’ ದೃಷ್ಟಿಯಿಂದಲೂ ಈ ಸಮಸ್ಯೆಯನ್ನು ನೋಡಬೇಕು ಎಂದು ನ್ಯಾಯಪೀಠ ಹೇಳಿತು. ‘ಸ್ವಯಂಪ್ರೇರಿತವಾಗಿ ಮುಟ್ಟಿನ ರಜೆ ನೀಡುವ ಕ್ರಮ ಅತ್ಯುತ್ತಮವಾಗಿದೆ. ಇದು ಸ್ವಾಗತಾರ್ಹ. ಆದರೆ ಕಾನೂನಿನ ಮೂಲಕ ಇಂತಹ ನಿಬಂಧನೆಗಳನ್ನು ಕಡ್ಡಾಯಗೊಳಿಸುವಾಗ ಎಚ್ಚರ ವಹಿಸಬೇಕು’ ಎಂದು ಸಿಜೆಐ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.