ದೀರ್ಘಕಾಲದ ನಿಷ್ಕ್ರೀಯತೆ ಸಮಸ್ಯೆಗೆ ಕಾರಣ
ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಬಿಸಿ ನಿಯಮಗಳನ್ನು ಆರಂಭದಿಂದಲೇ ಶಿಸ್ತಿನಿಂದ ಜಾರಿಗೊಳಿಸಿದ್ದಲ್ಲಿ, ಸಕಾಲಿಕ ಮತ್ತು ಹಂತಹಂತದ ಸಂತಾನಶಕ್ತಿ ಹರಣ ಪ್ರಕ್ರಿಯೆ, ಲಸಿಕೆ ನೀಡುವಿಕೆ ಮತ್ತು ಸೂಕ್ತ ಸಾಂಸ್ಥಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ್ದಲ್ಲಿ, ಇಂದು ಪರಿಸ್ಥಿತಿ ಇಷ್ಟೊಂದು ಗಂಭೀರವಾಗುತ್ತಿರಲಿಲ್ಲ. ದೀರ್ಘಕಾಲದ ನಿಷ್ಕ್ರೀಯತೆ ಮತ್ತು ಎಬಿಸಿ ನಿಯಮಗಳ ಪರಿಣಾಮಕಾರಿ ಜಾರಿಗೆ ಬದ್ಧತೆಯ ಕೊರತೆಯು ಸಮಸ್ಯೆ ಬಿಗಡಾಯಿಸುವಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ. ಈಗ ಇದು ತುರ್ತು ಮತ್ತು ವ್ಯವಸ್ಥಿತ ಮಧ್ಯಪ್ರವೇಶಿಸುವಿಕೆಯ ಅಗತ್ಯವನ್ನು ಸೃಷ್ಟಿಸಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.