‘ಖಾಲಿದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಜನವರಿ 5ರಂದು ತಿರಸ್ಕರಿಸಿರುವುದು ಗಮನದಲ್ಲಿದೆ. ಆದರೆ ಸಹಾನುಭೂತಿಯ ದೃಷ್ಟಿಯಿಂದ ಅವರ ಮನವಿ ಪುರಸ್ಕರಿಸಲಾಗಿದೆ. ಈ ಮೂರು ದಿನ ಅವರು ತಾಯಿಯೊಂದಿಗೆ ಮಾತ್ರ ಕಳೆಯಬೇಕು’ ಎಂದು ಪೀಠ ಹೇಳಿದೆ. ದೆಹಲಿ ಪೊಲೀಸರ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ಅವರು ‘ಖಾಲಿದ್ ಅವರ ತಾಯಿ ಶಸ್ತ್ರಚಿಕಿತ್ಸೆಗೆ ಒಳಪಡುತ್ತಿದ್ದು ಅವರನ್ನು ಭೇಟಿಯಾಗಲು ಖಾಲಿದ್‌ಗೆ ಪೊಲೀಸ್ ಭದ್ರತೆಯಲ್ಲಿ ಅವಕಾಶ ನೀಡಬೇಕು’ ಎಂದು ಮನವಿ ಮಾಡಿಕೊಂಡಿದ್ದರು.ವಿಚಾರಣಾ ನ್ಯಾಯಾಲಯದ ಎದುರು ಖಾಲಿದ್ 15 ದಿನಗಳ ಮಧ್ಯಂತರ ಜಾಮೀನಿಗಾಗಿ ಮನವಿ ಮಾಡಿಕೊಂಡಿದ್ದರು. ನ್ಯಾಯಾಲಯ ಅದನ್ನು ಮೇ 19ರಂದು ತಿರಸ್ಕರಿಸಿತ್ತು. ಇದರ ವಿರುದ್ಧ ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.