ಎಸ್‌ಐಆರ್ ಕಾನೂನುಬದ್ಧ ಮತ್ತು ಸಾಂವಿಧಾನಿಕ ಪ್ರಕ್ರಿಯೆ ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಎಸ್‌ಐಆರ್‌ಗೆ ವಿರೋಧ ವ್ಯಕ್ತವಾಗಿತ್ತು. ಅವರು ಭಾರತೀಯ ಮತದಾರರ ಪರ ಅಲ್ಲ, ಬದಲಾಗಿ ನುಸುಳುಕೋರರ ಪರವಾಗಿ ಇದ್ದರು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ
-ಪ್ರದೀಪ್ ಭಂಡಾರಿ, ಬಿಜೆಪಿ ರಾಷ್ಟ್ರೀಯ ವಕ್ತಾರ
ಬಿಹಾರದಲ್ಲಿನ ಎಸ್‌ಐಆರ್ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಚುನಾವಣಾ ಆಯೋಗ ಕೈಗೊಂಡಿದ್ದ ಅತಾರ್ಕಿಕ, ಅವಸರದ ಮತ್ತು ಪಕ್ಷಪಾತದಿಂದ ಕೂಡಿದ ಪ್ರಕ್ರಿಯೆಗೆ ಅನುಮೋದನೆ ನೀಡಿದಂತಾಗಿದೆ. ಆಯೋಗದ ಇಂತಹ ಕ್ರಮದಿಂದಾಗಿ ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಅರ್ಹ ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಸಾಧ್ಯವಾಗಿಲ್ಲ.
-ಮಹುವಾ ಮೊಯಿತ್ರಾ, ಟಿಎಂಸಿ ಸಂಸದೆ
ಇದೇ ರೀತಿ ತೀರ್ಪು ಬರಲಿದೆ ಎಂಬುದು ಬಹಳ ದಿನಗಳ ಮೊದಲೇ ನನಗೆ ಸ್ಪಷ್ಟವಾಗಿತ್ತು. ಹೀಗಾಗಿ, ತೀರ್ಪು ಪ್ರಕಟಗೊಂಡರೂ ನ್ಯಾಯಾಲಯದಿಂದ ನಾನು ದೂರವೇ ಉಳಿದಿದ್ದೆ. ಎಸ್‌ಐಆರ್ ಸಾಂವಿಧಾನಿಕವಾಗಿದೆ ಎಂದು ಸುಪ್ರೀಂ ಕೋರ್ಟ್ ಘೋಷಿಸಿರುವುದು ಸುದ್ದಿಯಲ್ಲ. ಈ ದೇಶದಲ್ಲಿ ಪ್ರಸ್ತುತ, ಯಾರು ಮತ ಚಲಾಯಿಸಬೇಕು ಹಾಗೂ ಯಾರು ಚಲಾಯಿಸಬಾರದು ಎಂಬುದನ್ನು ಬಿಜೆಪಿ ನಿರ್ಧರಿಸುತ್ತಿದೆ. ಇದೇ ನಿಜವಾದ ಸುದ್ದಿ.