ನವದೆಹಲಿ: ನೋಂದಣಿ ಆಗಿಲ್ಲ ಎಂಬ ಕಾರಣಕ್ಕೆ ವಿಲ್ನ (ಉಯಿಲು) ನೈಜತೆಯನ್ನು ಅನುಮಾನದಿಂದ ನೋಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಉತ್ತರಾಧಿಕಾರಿಗಳನ್ನು ಹೊರಗಿಟ್ಟು ಉಯಿಲು ಮಾಡಿದ್ದರೂ ಅದನ್ನು ಅನುಮಾನಿಸಲಾಗದು. ಸಾಮಾನ್ಯ ಉತ್ತರಾಧಿಕಾರದ ಹಕ್ಕನ್ನು ಬದಲಾಯಿಸುವುದೇ ಉಯಿಲು ಮಾಡಿದವರ ಉದ್ದೇಶ ಆಗಿರುವ ಸಾಧ್ಯತೆ ಇದೆ ಎಂದು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಉಯಿಲನ್ನು (ವಿಲ್) ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂಬ ಕಾನೂನೇನೂ ಇಲ್ಲ ಎಂಬುದನ್ನು ನ್ಯಾಯಾಲಯವು ಗಮನಿಸಿದೆ.

ಮುಂಬೈನ ಪ್ರತಿಷ್ಠಿತ ಕಂಪನಿಗಳ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ಬಿ. ಶೀನಾ ನಾಯರಿ ಅವರು, ತಮ್ಮ ಕೃಷಿ ಮತ್ತು ಇತರ ಆಸ್ತಿಗಳನ್ನು ಕರ್ನಾಟಕದಲ್ಲಿರುವ ತಮ್ಮ ಸಹೋದರಿ ಲಕ್ಷ್ಮಿ ನಾಯರ್ತಿ ಅವರಿಗೆ 1983ರಲ್ಲಿ ಬಿಟ್ಟುಕೊಟ್ಟ ಉಯಿಲಿನ ಸಿಂಧುತ್ವವನ್ನು ನ್ಯಾಯಾಲಯವು ಎತ್ತಿ ಹಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.