ನವದೆಹಲಿ (ಪಿಟಿಐ): ಸೋಮವಾರ ಮತ್ತು ಶುಕ್ರವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಕರಣಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರ್ಧರಿಸಿದೆ. ಇಂಧನ ಬಳಕೆ ತಗ್ಗಿಸಲಿಕ್ಕಾಗಿ ‘ಕಾರ್ ಪೂಲಿಂಗ್’ ಅಳವಡಿಸಿಕೊಳ್ಳಲು ನ್ಯಾಯಮೂರ್ತಿಗಳು ಸಮ್ಮತಿಸಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾಗಿರುವ ಬಿಕ್ಕಟ್ಟು ಎದುರಿಸಲಿಕ್ಕಾಗಿಇಂಧನ ಬಳಕೆ ತಗ್ಗಿಸಲು ಮತ್ತು ತಪ್ಪಿಸಬಹುದಾದ ವೆಚ್ಚಗಳಿಗೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಕರೆ ನೀಡಿದ್ದರು. ಅವರ ಸಲಹೆಯನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಈ ಕ್ರಮ ಕೈಗೊಂಡಿದೆ.

‘ಇತರೆ ದಿನಗಳಲ್ಲಿ (ಅಂದರೆ ಸೋಮವಾರ, ಶುಕ್ರವಾರ ಅಥವಾ ‘ಇತರೆ’ ಎಂದು ಘೋಷಿಸಿರುವ ದಿನಗಳಲ್ಲಿ) ಮತ್ತು ಭಾಗಶಃ ಅಥವಾ ಅರ್ಧ ಕೆಲಸದ ದಿನಗಳಲ್ಲಿ ಕೈಗೆತ್ತಿಕೊಳ್ಳಲು ಪಟ್ಟಿ ಮಾಡಲಾದ ಪ್ರಕರಣಗಳ ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಲಾಗುತ್ತದೆ’ ಎಂದು ಸುತ್ತೋಲೆ ಹೊರಡಿಸಲಾಗಿದೆ.

‘ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ಸಂದರ್ಭ ನ್ಯಾಯಾಲಯಕ್ಕೆ ಯಾವುದೇ ಅನನುಕೂಲತೆ ಆಗದಂತೆ ರಿಜಿಸ್ಟ್ರಿ ಖಚಿತಪಡಿಸಿಕೊಳ್ಳಬೇಕು. ವಿಡಿಯೊ ಕಾನ್ಫರೆನ್ಸ್ಗೆ ಲಿಂಕ್ಗಳನ್ನು ಸೂಕ್ತ ಸಮಯದಲ್ಲಿ ಕಳುಹಿಸಬೇಕು, ಯಾವುದೇ ಅಡೆತಡೆಯಿಲ್ಲದ ವಿಚಾರಣೆಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕು ಮತ್ತು ಅಗತ್ಯ ತಾಂತ್ರಿಕ ನೆರವು ಒದಗಿಸಬೇಕು’ ಎಂದು ಸುತ್ತೋಲೆ ಹೇಳಿದೆ.

‘ಇಂಧನದ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸಿಕೊಳ್ಳಲು, ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳುತಮ್ಮೊಳಗೆ ‘ಕಾರ್ ಪೂಲಿಂಗ್’ ವ್ಯವಸ್ಥೆ ಉತ್ತೇಜಿಸಲು ಒಮ್ಮತದಿಂದ ನಿರ್ಧರಿಸಿದ್ದಾರೆ’ ಎಂದು ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-726831075

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.