ನವದೆಹಲಿ: ಗಾಜಿಯಾಪುರದ ಫ್ಲಾಟ್ನಲ್ಲಿಟ್ಟಿದ್ದ ಎಲ್ಪಿಜಿ ಸಿಲಿಂಡರ್ನಿಂದ ಗ್ಯಾಸ್ ಸೋರಿಕೆಯಾದ ಪರಿಣಾಮ ಎರಡೂವರೆ ವರ್ಷದ ಬಾಲಕಿ ಮೃತಪಟ್ಟಿದ್ದು, ಆಕೆಯ ಸಹೋದರಿಯು ಪ್ರಜ್ಞೆತಪ್ಪಿ ಬಿದ್ದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಎಲ್ಪಿಜಿ ಗ್ಯಾಸ್ನ ವಿಷಕಾರಿ ಅನಿಲ ಸೇವಿಸಿ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ಪ್ಲಾಟ್ನಲ್ಲಿ ರಾಸಾಯನಿಕ ವಾಸನೆ ಬರುತ್ತಿರುವ ಕುರಿತು ಅನುಮಾನ ವ್ಯಕ್ತಿಪಡಿಸಿ ಪಿಸಿಆರ್ ಕಾಲ್ ಬಂದಿತ್ತು. ಕೋಣೆಯಲ್ಲಿ ಆಟವಾಡುತ್ತಿದ್ದ ಇಬ್ಬರು ಚಿಕ್ಕ ಮಕ್ಕಳು ಪ್ರಜ್ಞೆತಪ್ಪಿ ಬಿದ್ದಿದ್ದಾರೆ ಎನ್ನುವ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿ, ಬಾಲಕಿಯರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲಿ ಬಾಲಕಿಯು ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ 7 ವರ್ಷದ ಬಾಲಕಿಯು, ಚಿಕಿತ್ಸೆಯ ನಂತರ ಗುಣಮುಖವಾಗಿದ್ದಾಳೆ ಎಂದು ತಿಳಿಸಿದ್ದಾರೆ.

ಇನ್ನು ಎರಡು ತಿಂಗಳಲ್ಲಿ ಮೃತ ಬಾಲಕಿಯ ಹುಟ್ಟುಹಬ್ಬವಿತ್ತು. ಆಕೆಯ ತಂದೆಯು ದರ್ಜಿಯಾಗಿದ್ದು, ಮಗಳ ಹುಟ್ಟುಹಬ್ಬಕ್ಕಾಗಿ ಈಗಾಗಲೇ ಹೊಸ ಬಟ್ಟೆಯನ್ನು ಹೊಲೆಯುತ್ತಿದ್ದರು. ಅಷ್ಟರಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.

‘ಎಲ್ಪಿಜಿಯು ಆಮ್ಲಜನಕಕ್ಕಿಂತ ಭಾರವಾಗಿರುತ್ತದೆ ಮತ್ತು ನೆಲದ ಬಳಿ ನೆಲೆಗೊಳ್ಳುತ್ತದೆ. ಚಿಕ್ಕ ಮಕ್ಕಳ ಶ್ವಾಸಕೋಶಗಳು ಸೂಕ್ಷ್ಮವಾಗಿರುವುದರಿಂದ ಮತ್ತು ವಿಷಕಾರಿ ಅಂಶಗಳಿಗೆ ಹೆಚ್ಚು ಗುರಿಯಾಗುವುದರಿಂದ ಇದರ ಪರಿಣಾಮವು ಅವರ ಮೇಲೆ ಹೆಚ್ಚು ತೀವ್ರವಾಗಿರುತ್ತದೆ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೃತ ಬಾಲಕಿಯ ಕುಟುಂಬವು ಕಳೆದ ಎರಡು ವರ್ಷಗಳಿಂದ ಆ ಫ್ಲಾಟ್ನಲ್ಲಿ ವಾಸ ಮಾಡುತ್ತಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.