ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಭವಾನಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರು ಗುರುವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಸಮಾರಂಭವನ್ನು ಬಿಜೆಪಿಯು ತನ್ನ ಬಲಪ್ರದರ್ಶನದ ವೇದಿಕೆಯಾಗಿ ಪರಿವರ್ತಿಸಿತು.

ಸುವೇಂದು ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಣಕ್ಕಿಳಿದಿದ್ದಾರೆ. ಭವಾನಿಪುರ ಕ್ಷೇತ್ರವು ಮಮತಾ ಅವರ ರಾಜಕೀಯ ಭದ್ರಕೋಟೆ ಎನಿಸಿಕೊಂಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಮತ್ತು ಇತರ ನಾಯಕರು ನಾಮಪತ್ರ ಸಲ್ಲಿಕೆ ಅಂಗವಾಗಿ ಆಯೋಜಿಸಿದ್ದ ರೋಡ್ ಶೋನಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಶಾ, ‘ಸುವೇಂದು ಅವರ ನಾಮಪತ್ರ ಸಲ್ಲಿಕೆಗಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ’ ಎಂದರು.

‘ಬಂಗಾಳದಲ್ಲಿ ಬಿಜೆಪಿಯು ಬಹುಮತದೊಂದಿಗೆ ಸರ್ಕಾರ ರಚಿಸಲು 170 ಸ್ಥಾನಗಳನ್ನು ಗೆಲ್ಲಬೇಕಾಗಿದ್ದರೂ, ಭವಾನಿಪುರದಲ್ಲಿ ಸುವೇಂದು ಅವರ ಗೆಲುವು ರಾಜ್ಯದ ರಾಜಕೀಯದಲ್ಲಿ ತನ್ನಿಂದ ತಾನೇ ಬದಲಾವಣೆಯನ್ನು ತರಲಿದೆ’ ಎಂದು ಹೇಳಿದರು.

ಬೆಂಬಲಿಗರ ಮುಖಾಮುಖಿ: ಬಿಜೆಪಿ ರೋಡ್ ಶೋ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾಳಿಘಾಟ್ನಲ್ಲಿರುವ ನಿವಾಸದ ಬಳಿಕ ಬಂದಾಗ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರು ಪರಸ್ಪರ ಎದುರಾದರು. ಎರಡೂ ಕಡೆಯವರು ಪರ–ವಿರುದ್ಧ ಘೋಷಣೆ ಕೂಗಿದಾಗ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎರಡೂ ಗುಂಪುಗಳು ಸಂಘರ್ಷಕ್ಕೆ ಇಳಿಯದಂತೆ ತಡೆಯಲು ಪೊಲೀಸರು ರಸ್ತೆ ಮಧ್ಯದಲ್ಲಿ ಮಾನವ ಗೋಡೆಯನ್ನು ನಿರ್ಮಿಸಿದರು. ಬಿಜೆಪಿ ಮೆರವಣಿಗೆಯು ಸ್ಥಳದಿಂದ ಮುಂದೆ ಹೋದ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು.

‘ಶಾ ಅವರೇ ರುಚಿಕರ ಖಾದ್ಯ ಸವಿಯಿರಿ’ ಚುನಾವಣೆಗೆ ಸಜ್ಜಾಗಿರುವ ಪಶ್ಚಿಮ ಬಂಗಾಳದಲ್ಲಿ 15 ದಿನ ವಾಸ್ತವ್ಯ ಹೂಡಲು ನಿರ್ಧರಿಸಿರುವ ಗೃಹ ಸಚಿವ ಅಮಿತ್ ಶಾ ಅವರ ನಡೆಯನ್ನು ಟಿಎಂಸಿ ಲೇವಡಿ ಮಾಡಿದೆ. ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲು 15 ದಿನ ಬಂಗಾಳದಲ್ಲೇ ವಾಸ್ತವ್ಯ ಹೂಡುವುದಾಗಿ ಶಾ ಅವರು ಗುರುವಾರ ಘೋಷಿಸಿದ್ದರು. ಅದರ ಬೆನ್ನಲ್ಲೇ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಟಿಎಂಸಿ ‘ರಾಜ್ಯದ ಜನಪ್ರಿಯ ಮಾಂಸಾಹಾರಿ ಖಾದ್ಯಗಳನ್ನು ಸವಿಯಲು ಈ ಅವಕಾಶವನ್ನು ಬಳಸಿಕೊಳ್ಳಿ’ ಎಂದು ಅವರಿಗೆ ಸಲಹೆ ನೀಡಿದೆ. ‘ಶಾ ಅವರು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ. ಬಂಗಾಳವು ಪ್ರವಾಸಿಗರನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುತ್ತದೆ. ನೀವು ನಮ್ಮಲ್ಲಿನ ಅತ್ಯುತ್ತಮ ಖಾದ್ಯಗಳನ್ನು ಸವಿಯುವ ಅವಕಾಶ ಕಳೆದುಕೊಳ್ಳಬೇಡಿ. ಮುರೀ ಘೊಂಟೊ ಪಾಬ್ದಾ ಮಾಛೆರ್ ಝಾಲ್ ಚಿಂಗರೀ ಮಲಾಯ್ ಕರಿ ಭೇಟ್ಕಿ ಪಾತುರೀ ಕೊಶಾ ಮಾಂಗಶೊ– ಮುಂತಾದ ಖಾದ್ಯಗಳನ್ನು ಸವಿಯುವಂತೆ ಸಲಹೆ ನೀಡುತ್ತೇವೆ’ ಎಂದು ಪೋಸ್ಟ್ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.