ಕೋಲ್ಕತ್ತ: ಕಿಕ್ಕಿರಿದು ಸೇರಿದ ಜನಸ್ತೋಮ, ಹಾರಾಡುತ್ತಿರುವ ಕೇಸರಿ ಧ್ವಜ ಮತ್ತು ಜೈ ಶ್ರೀ ರಾಮ್ ಘೋಷಣೆಗಳ ನಡುವೆ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಒಂಬತ್ತನೆಯ, ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.

ದೀರ್ಘಕಾಲ ಕೆಂಬಾವುಟದ ಹಾರಾಟ ಕಂಡಿದ್ದ, ರಾಜಕೀಯ ಸೋಲು–ಗೆಲುವುಗಳಿಗೆ ಸಾಕ್ಷಿಯಾಗಿದ್ದ ಕೋಲ್ಕತ್ತದ ಹೃದಯ ಭಾಗದಲ್ಲಿರುವ ಬ್ರಿಗೇಡ್ ಮೈದಾನವು ಬಿಜೆಪಿಯ ಚೊಚ್ಚಲ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮಕ್ಕೆ ವೇದಿಕೆಯಾಯಿತು.

ರಾಜ್ಯಪಾಲ ಆರ್.ಎನ್. ರವಿ, ನೂತನ ಮುಖ್ಯಮಂತ್ರಿಗೆ ಪ್ರಮಾಣವಚನ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಲ್ಲದೆ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.

ಭವಾನಿಪುರ ಮತ್ತು ನಂದಿಗ್ರಾಮ ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು, ಪಶ್ಚಿಮ ಬಂಗಾಳದಲ್ಲಿ ಒಂದೂವರೆ ದಶಕದ ನಂತರ ಕಮಲ ಅರಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರ ಬಳಿಕ ಬಿಜೆಪಿಯ ಬಂಗಾಳ ರಾಜ್ಯ ಘಟಕದ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ ಪ್ರಮಾಣ ವಚನ ಸ್ವೀಕರಿಸಿದರು.

ಸುವರ್ಣ ಬಂಗಾಳ ಉದಯ:

ದಶಕಗಳ ದುರಾಡಳಿತ ಇಂದು ಕೊನೆಗೊಂಡಿದೆ. ಬಿಜೆಪಿಯ ‘ಡಬಲ್-ಎಂಜಿನ್ ಸರ್ಕಾರ’ದ ಅಡಿಯಲ್ಲಿ ಶಾಂತಿ ಮತ್ತು ಸಮೃದ್ಧಿಯ ‘ಸೋನಾರ್ ಬಾಂಗ್ಲಾ’ದ (ಸುವರ್ಣ ಬಂಗಾಳ) ಉದಯವಾಗಿದೆ. ಇದು ಪಶ್ಚಿಮ ಬಂಗಾಳಕ್ಕೆ ನಿಜಕ್ಕೂ ಐತಿಹಾಸಿಕ ಉದಯ’ ಎಂದು ಪ್ರಮಾಣ ವಚನ ಸ್ವೀಕರಿಸಿದ ಸುವೇಂದು ಅಧಿಕಾರಿ ಹೇಳಿದರು.

ಸಂಪುಟಕ್ಕೆ ಐದು ಸಚಿವರು:

ಬಿಜೆಪಿ ಶಾಸಕರಾದ ಅಗ್ನಿಮಿತ್ರ ಪಾಲ್, ಅಶೋಕ್ ಕೀರ್ತಾನಿಯಾ, ಖುದಿರಾಮ್ ತುಡು ಮತ್ತು ನಿಶಿತ್ ಪ್ರಾಮಾಣಿಕ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸುವೇಂದು ಚೊಚ್ಚಲ ಸಂಪುಟವು ಬ್ರಾಹ್ಮಣ, ಒಬಿಸಿ, ಬುಡಕಟ್ಟು, ಮತುವಾ, ಕಾಯಸ್ಥ ಮತ್ತು ರಾಜ್ಬನ್ಶಿ ಸಮುದಾಯಗಳ ಪ್ರಾತಿನಿಧ್ಯ ಮತ್ತು ಬಂಗಾಳದ ಸಾಮಾಜಿಕ– ಪ್ರಾದೇಶಿಕ ಸಮತೋಲನಕ್ಕಾಗಿ ಬಿಜೆಪಿ ನಡೆಸಿರುವ ಪ್ರಯತ್ನವನ್ನು ಬಿಂಬಿಸುತ್ತದೆ.

ಸುವೇಂದು ಅಧಿಕಾರಿ – ಬ್ರಾಹ್ಮಣ,

ಘೋಷ್ – ಒಬಿಸಿ,

ಅಗ್ನಿಮಿತ್ರ – ಕಾಯಸ್ಥ

ಕೀರ್ತಾನಿಯಾ – ಮತುವಾ

ಖುದಿರಾಮ್ – ಬುಡಕಟ್ಟು ಸಮುದಾಯ

ಪ್ರಾಮಾಣಿಕ್ ಅವರು ರಾಜ್ಬನ್ಶಿ

ಬಿಜೆಪಿಯ ಮೊದಲ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ಇಬ್ಬರು ಸಚಿವರು ಉತ್ತರ ಮತ್ತು ಮೂವರು ದಕ್ಷಿಣ ಬಂಗಾಳಕ್ಕೆ ಸೇರಿದವರು. ಸಚಿವರ ಮೊದಲ ಪಟ್ಟಿಯಲ್ಲಿ ಬಂಗಾಳದ ಪ್ರಮುಖ ರಾಜಕೀಯ ಧುರೀಣರು, ಮುಖ್ಯಮಂತ್ರಿಗಳನ್ನು ಸೃಷ್ಟಿಸಿದ ‘ಕೋಲ್ಕತ್ತ’ ನಗರದಿಂದ ಯಾವುದೇ ಪ್ರತಿನಿಧಿ ಇರಲಿಲ್ಲ ಎನ್ನುವುದು ಗಮನಾರ್ಹ.

ಗೌರವ ನಮನ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ದೌರ್ಜನ್ಯಕ್ಕೆ ಒಳಗಾಗಿ ಹತ್ಯೆಗೀಡಾಗಿದ್ದಾರೆ ಎನ್ನಲಾದ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಗೌರವ ನಮನ ಸಲ್ಲಿಸಿದರು. ಕಾರ್ಯಕರ್ತರ ತ್ಯಾಗ, ಬಲಿದಾನ ಸದಾ ಸ್ಮರಣೀಯ ಎಂದರು.

ಸುವೇಂದು ಅಧಿಕಾರಿ ಜನರೊಂದಿಗೆ ಆಳವಾದ ಸಂಪರ್ಕ ಹೊಂದಿರುವ ಜನನಾಯಕ. ಬಂಗಾಳದ ಜನರ ಅಪೇಕ್ಷೆಗಳನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ
– ನರೇಂದ್ರ ಮೋದಿ ಪ್ರಧಾನಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆಗಿರುವುದಕ್ಕೆ ನನ್ನ ಪುತ್ರ ಸಂತೋಷಪಟ್ಟಿದ್ದಕ್ಕಿಂತ ಹೆಚ್ಚಾಗಿ ಬಂಗಾಳದ ಜನ ಸಂತೋಷಪಟ್ಟಿದ್ದಾರೆ
– ಗಾಯತ್ರಿ ಅಧಿಕಾರಿ ಸುವೇಂದು ಅಧಿಕಾರಿ ಅವರ ತಾಯಿ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಯನ್ನು ಎದುರಿಸಲು ಜಂಟಿ ವೇದಿಕೆಯನ್ನು ರೂಪಿಸಲು ಪಶ್ಚಿಮ ಬಂಗಾಳದ ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಬೇಕು
– ಮಮತಾ ಬ್ಯಾನರ್ಜಿ ಟಿಎಂಸಿ ನಾಯಕಿ

ಮಂಡಿಯೂರಿ ನಮಿಸಿದ ಪ್ರಧಾನಿ

ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬಂದ ಪ್ರಧಾನಿ ವೇದಿಕೆಯತ್ತ ಸಾಗಿ ಜನಸಮೂಹದತ್ತ ತಿರುಗಿ ಮಂಡಿಯೂರಿ ವೇದಿಕೆಗೆ ಹಣೆಯನ್ನು ಮುಟ್ಟಿಸಿದರು. ಬಂಗಾಳದ ಜನಾದೇಶಕ್ಕೆ ಗೌರವಾರ್ಥವಾಗಿ ಕೈ ಜೋಡಿಸಿ ನಮಿಸಿದರು. ಕೇಸರಿ ಶಿರೋವಸ್ತ್ರ ಧರಿಸಿ ಧ್ವಜಗಳನ್ನು ಹಿಡಿದು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಭಾರತ್ ಮಾತಾ ಕೀ ಜೈ ಘೋಷಣೆಗಳು ಬ್ರಿಗೇಡ್ ಮೈದಾನದಲ್ಲಿ ಅನುರಣಿಸಿತು. ಮಕನ್ಲಾಲ್ ಸರ್ಕಾರ್ಗೆ ಅಭಿನಂದನೆ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಮುನ್ನ ಪ್ರಧಾನಿ ಮೋದಿ ಅವರು 98 ವರ್ಷದ ಬಿಜೆಪಿಯ ಹಿರಿಯ ಮುಖಂಡ ಮಕನ್ಲಾಲ್ ಸರ್ಕಾರ್ ಅವರನ್ನು ವೇದಿಕೆಯಲ್ಲಿ ಅಭಿನಂದಿಸಿದರು. ಅವರ ಪಾದ ಮುಟ್ಟಿ ನಮಸ್ಕರಿಸಿ ಆರ್ಶೀವಾದ ಪಡೆದರು. ಇಬ್ಬರೂ ಪರಸ್ಪರ ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಕಾಶ್ಮೀರದಲ್ಲಿ 1952ರಲ್ಲಿ ತ್ರಿವರ್ಣ ಧ್ವಜ ಚಳವಳಿ ನಡೆದ ಸಂದರ್ಭದಲ್ಲಿ ಜನ ಸಂಘದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ಮಕನ್ಲಾಲ್ ಸರ್ಕಾರ್ ಅವರನ್ನೂ ಬಂಧಿಸಲಾಗಿತ್ತು. ‘ಸ್ವಾತಂತ್ರ್ಯಾನಂತರ ಭಾರತದಲ್ಲಿ ರಾಷ್ಟ್ರೀಯವಾದಿ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದವರು ಸರ್ಕಾರ್’ ಎಂದು ಬಿಜೆಪಿಯ ಪ್ರಕಟಣೆ ತಿಳಿಸಿದೆ. 1980ರಲ್ಲಿ ಬಿಜೆಪಿ ರಚನೆಯಾದ ನಂತರ ಸರ್ಕಾರ್ ಅವರು ಬಂಗಾಳದ ಪಶ್ಚಿಮ ದಿನಾಜ್ಪುರ ಜಲ್ಪೈಗುರಿ ಮತ್ತು ಡಾರ್ಜಿಲಿಂಗ್ ಜಿಲ್ಲೆಗಳ ಸಂಘಟನಾ ಸಂಯೋಜಕರಾಗಿದ್ದರು. ಎಡ ಪಕ್ಷದ ಪ್ರಾಬಲ್ಯದ ನಡುವೆಯೂ 1981ರಿಂದ ಸತತ 7 ವರ್ಷ ಅವರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಸೋಮವಾರವೂ ಪ್ರಮಾಣ ವಚನ

ಹೊಸದಾಗಿ ಮತ್ತೆ ಸಂಪುಟಕ್ಕೆ ಸೇರ್ಪಡೆಯಾಗಲಿರುವವರಿಗೆ ಸೋಮವಾರ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ನೂತನ ಸಚಿವ ಸಂಪುಟದ ಮೊದಲ ಸಭೆಯು ಅಂದೇ ನಡೆಯಲಿದೆ. ಪಶ್ಚಿಮ ಬಂಗಾಳ ವಿಧಾನಸಭೆಯ ಒಟ್ಟು 294 ಸ್ಥಾನಗಳಲ್ಲಿ ಬಿಜೆಪಿಯು 207 ಸ್ಥಾನಗಳನ್ನು ಗೆದ್ದಿದ್ದು 15 ವರ್ಷಗಳ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆಡಳಿತವನ್ನು ಬದಿಗೆ ಸರಿಸಿ ಮೊದಲ ಬಾರಿ ಆಡಳಿತದ ಚುಕ್ಕಾಣಿ ಹಿಡಿದಿದೆ.

ಎಸ್ಐಆರ್ ವಿಶೇಷ ವೀಕ್ಷಕರಾಗಿದ್ದ ಸುಬ್ರತಾ ಗುಪ್ತಾ ಸಿ.ಎಂ ಸಲಹೆಗಾರ

ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ ಸುಬ್ರತಾ ಗುಪ್ತಾ ಅವರನ್ನು ನೇಮಕ ಮಾಡಲಾಗಿದೆ. ಸುಬ್ರತಾ ಗುಪ್ತಾ ಗುಪ್ತಾ ಅವರು ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್ಐಆರ್) ನೇಮಿಸಿದ್ದ ವಿಶೇಷ ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಐಎಎಸ್ ಅಧಿಕಾರಿ ಶಂತನು ಬಾಲ ಅವರು ಮುಖ್ಯಮಂತ್ರಿಯ ಖಾಸಗಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.