ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಜಯ ದಾಖಲಿಸಿದ್ದು ಈಗ ಪಕ್ಷದ ಮುಂದಿನ ಗುರಿ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಭವಾನಿಪುರ ಮತ್ತು ನಂದಿಗ್ರಾಮ ವಿಧಾನಸಭಾ ಕ್ಷೇತ್ರಗಳಲ್ಲಿ ಐತಿಹಾಸಿಕ ಜಯ ದಾಖಲಿಸಿ ಅತ್ಯುತ್ಸಾಹದಲ್ಲಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಈ ಬಗ್ಗೆ ಮಾತನಾಡಿದ್ದಾರೆ.

ಮಮತಾ ಬ್ಯಾನರ್ಜಿ, ತೇಜಸ್ವಿ ಯಾದವ್ ಮತ್ತು ರಾಹುಲ್ ಗಾಂಧಿ ಅವರ ಅಧ್ಯಾಯ ಮುಗಿದಿದೆ. ನಮ್ಮ ಮುಂದಿನ ಗುರಿ ಅಖಿಲೇಶ್ ಯಾದವ್ ಎಂದು ಹೇಳುವ ಮೂಲಕ ಸಮಾಜವಾದಿ ಪಕ್ಷದ ಮುಖ್ಯಸ್ಥರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಮುಂದಿನ ವರ್ಷ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಅಖಿಲೇಶ್ ಪ್ರಬಲ ಎದುರಾಳಿಯಾಗಿದ್ದಾರೆ.
.ಇಲ್ಲಿ ಸೀಟಿ ಸದ್ದು, ಅಲ್ಲಿ ದೀದಿಗೆ ಗುದ್ದು.‘ನಿರ್ಮಮ್’ ಸರ್ಕಾರ ಕಿತ್ತೊಗೆಯಿರಿ: ಪಶ್ಚಿಮ ಬಂಗಾಳದ ಮತದಾರರಿಗೆ ಮೋದಿ ಕರೆ.
ಮಮತಾ ಬ್ಯಾನರ್ಜಿಯ ರಾಜಕೀಯ ವನವಾಸ ಆರಂಭ

ಬಂಗಾಳದ ಚುನಾವಣಾ ಹಿಂಸಾಚಾರಗಳಲ್ಲಿ ಪ್ರಾಣ ಕಳೆದುಕೊಂಡ ಬಿಜೆಪಿ ಕಾರ್ಯಕರ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅಧಿಕಾರಿ, ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುತ್ತಿರುವ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಮತಾ ಬ್ಯಾನರ್ಜಿಯ ರಾಜಕೀಯ ವನವಾಸ ಈಗ ಆರಂಭವಾಗಿದೆ. 2021ರಲ್ಲಿ ಅವರು ನಂದಿಗ್ರಾಮದಲ್ಲಿ ಸೋತಿದ್ದರು, ಈ ಬಾರಿ ಭವಾನಿಪುರದಲ್ಲಿ 15,000ಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಜಯಗೊಂಡಿದ್ದಾರೆ ಎಂದರು.

ತೃಣಮೂಲ ಕಾಂಗ್ರೆಸ್ ಭ್ರಷ್ಟ, ಸಿದ್ಧಾಂತ ರಹಿತ ಮತ್ತು ಕುಟುಂಬ ರಾಜಕಾರಣದ ಪಕ್ಷ ಎಂದು ಟೀಕಿಸಿದ ಸುವೇಂದು ಎಎಪಿ ಪಕ್ಷದಂತೆ ಟಿಎಂಸಿ ಶೀಘ್ರದಲ್ಲೇ ಅಂತ್ಯವಾಗಲಿದೆ ಎಂದರು

ಹಿಂದೂತ್ವ ಮತ್ತು ಮೋದಿ ಅಲೆಗೆ ಸಂದ ಜಯ

ನಂದಿಗ್ರಾಮದ ಹಿಂದೂ ಮತದಾರರು ನನ್ನನ್ನು ಮತ್ತೆ ಗೆಲ್ಲಿಸಿದ್ದಾರೆ. ಅಲ್ಲಿ ಮುಸ್ಲಿಂ ಮತಗಳು ಸಂಪೂರ್ಣವಾಗಿ ಟಿಎಂಸಿ ಪಾಲಾಗಿದ್ದವು. ಆದರೆ ಹಿಂದೂ, ಸಿಖ್, ಬೌದ್ಧ ಮತ್ತು ಜೈನ ಸಮುದಾಯದವರು ನನಗೆ ಮತ ನೀಡಿದ್ದಾರೆ. ಇದು ಹಿಂದೂತ್ವಕ್ಕೆ ಮತ್ತು ಪ್ರಧಾನಿ ಮೋದಿ ಅವರಿಗೆ ಸಂದ ಜಯ ಎಂದು ಸುವೇಂದು ಅಧಿಕಾರಿ ಬಣ್ಣಿಸಿದರು. ಹಲವು ಸಿಪಿಎಂ ಬೆಂಬಲಿಗರು ಕೂಡ ತಮಗೆ ಮತ ಚಲಾಯಿಸಿದ್ದಾರೆ ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಟಿಎಂಸಿಯ ಹಲವು ಸಂಸದರು ಮತ್ತು ಕಾರ್ಯಕರ್ತರು ಬಿಜೆಪಿ ಸೇರಲಿದ್ದಾರೆ ಎಂದು ಅವರು ಭವಿಷ್ಯ ನುಡಿದರು.

ಭವಾನಿಪುರದಲ್ಲಿ ಇತಿಹಾಸ ಮರುಕಳಿಸಿದ ಅಧಿಕಾರಿ

2021ರಲ್ಲಿ ನಂದಿಗ್ರಾಮದಲ್ಲಿ ಮಮತಾ ಅವರನ್ನು ಸೋಲಿಸಿ ಬಂಗಾಳದ ರಾಜಕೀಯ ದಿಕ್ಕನ್ನೇ ಬದಲಿಸಿದ್ದ ಅಧಿಕಾರಿ, ಈ ಬಾರಿ ಭವಾನಿಪುರದಲ್ಲೂ ಅದೇ ಸಾಧನೆ ಮಾಡಿದ್ದಾರೆ. ನಂದಿಗ್ರಾಮದಲ್ಲಿ ಅವರು ಟಿಎಂಸಿ ಸೋಲಿಸಿದ್ದಾರೆ.

ಈ ಸತತ ಗೆಲುವಿನೊಂದಿಗೆ ಬಂಗಾಳದ ಮುಂದಿನ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅಧಿಕಾರಿ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
.ಆಳ–ಅಗಲ | ಮತ ಸಮರ: ಎಸ್ಐಆರ್ಗೆ ನಲುಗಿದ ಪಶ್ಚಿಮ ಬಂಗಾಳ.ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್: ಯಾರಿಗೆ ಮುಳುವು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.