ತಮಿಳುನಾಡಿನ ವಿಧಾನಸಭೆಯ ಎಲ್ಲ 234 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಿಲ್ಲಿಯೂ ಹಿಂದೆಂಗಿಂತಲೂ ಈ ವರ್ಷದ ಚುನಾವಣಾ ಲೆಕ್ಕಾಚಾರ ವಿಭಿನ್ನವಾಗಿದೆ. ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಪ್ರವೇಶ ಅಲ್ಲಿನ ರಾಜಕೀಯ ಲೆಕ್ಕಾಚಾರವನ್ನೇ ಬದಲಿಸಿದೆ. ಡಿಎಂಕೆ ಅಧಿಕಾರ ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದರೆ, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಎಐಎಡಿಎಂಕೆಯು ಅಧಿಕಾರಕ್ಕೆ ಮರಳುವ ಕಾತರದಲ್ಲಿದೆ. ಇವೆರಡೂ ಮೈತ್ರಿಕೂಟಗಳಿಗೆ ಟಕ್ಕರ್ ಕೊಡುವ ವಿಶ್ವಾಸದಲ್ಲಿ ವಿಜಯ್ ಇದ್ದಾರೆ.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ, ಮಹಿಳಾ ಮೀಸಲಾತಿ ಮಸೂದೆ, ಡ್ರಗ್ಸ್ ಹಾವಳಿ ಹೆಚ್ಚಳ, ಆಡಳಿತ ವಿರೋಧಿ ಅಲೆ ಸೇರಿದಂತೆ ತಮಿಳುನಾಡಿನಲ್ಲಿ ಮತದಾರರ ಮೇಲೆ ಪ್ರಭಾವ ಬೀರಿರಬಹುದಾದ ಪ್ರಮುಖ ಅಂಶಗಳು ಇಂತಿವೆ.

1. ವಿಜಯ್ ರಾಜಕೀಯ ಪ್ರವೇಶ

ಡಿಎಂಕೆ ಬಿಟ್ಟರೆ ಅಣ್ಣಾಡಿಎಂಕೆ ಎನ್ನುವಂತಿದ್ದ ತಮಿಳುನಾಡು ರಾಜಕೀಯಕ್ಕೆ ನಟ ವಿಜಯ್ ಪ್ರವೇಶವು ಹೊಸ ದಿಕ್ಕು ನೀಡಿದೆ. ತಮ್ಮ ಸ್ಟಾರ್ ಡಮ್ ಅನ್ನು ಬಳಸಿಕೊಂಡು ಅಭಿಮಾನಿ ಬಳಗವನ್ನು ಮತದಾರರಾಗಿ ಪರಿವರ್ತಿಸುವ ಯತ್ನದಲ್ಲಿ ವಿಜಯ್ ಇದ್ದಾರೆ, ಕೆಲ ಸಮೀಕ್ಷೆಗಳಲ್ಲೂ ಅವರ ಪರ ಒಲವು ವ್ಯಕ್ತವಾಗಿತ್ತು. ಅವರ ಸಮಾವೇಶಗಳಲ್ಲಿ ಸಾಗರೋಪಾದಿಯಲ್ಲಿ ಜನ ಸೇರುತ್ತಿರುವುದು ಡಿಎಂಕೆ ಮತ್ತು ಅಣ್ಣಾಡಿಎಂಕೆಯನ್ನು ವಿಚಲಿತಗೊಳಿಸಿರುವುದು ಸುಳ್ಳಲ್ಲ.

ಎಐಡಿಎಂಕೆಯು ಡಿಎಂಕೆ ಭ್ರಷ್ಟಾಚಾರ, ಕಾನೂನು ನುವ್ಯವಸ್ಥೆ ಬಗ್ಗೆ ಗಮನ ಕೇಂದ್ರೀಕರಿಸಿದ್ದರೆ, ಟಿವಿಕೆಯು ಫ್ರೀಬಿಗಳು, ಕೈಗಾರಿಕೆ ಅಭಿವೃದ್ಧಿ, ಕಲ್ಯಾಣ ಯೋಜನೆಗಳು, ಚಿನ್ನದ ತಾಳಿಭಾಗ್ಯ ಮುಂತಾದ ಜನಪ್ರಿಯ ಘೋಷಣೆಗಳ ಮೂಲಕ ಮತದಾರರನ್ನು ಸೆಳೆಯುವತ್ತ ಚಿತ್ತ ನೆಟ್ಟಿದೆ.

2. ಕಲ್ಯಾಣ ಕಾರ್ಯಕ್ರಮ vs ಉದ್ಯೋಗ ಸೃಷ್ಟಿ

ಉಚಿತ ವಿದ್ಯುತ್, ನಗದು ವರ್ಗಾವಣೆ ಮತ್ತು ಅಗತ್ಯ ವಸ್ತುಗಳಿಗೆ ಸಬ್ಸಿಡಿ ತಮಿಳುನಾಡಿನಲ್ಲಿ ಪಕ್ಷಗಳು ಮತದಾರರ ವಿಶ್ವಾಸ ಗಳಿಸಲು ಬಳಸುತ್ತಿರುವ ತಂತ್ರಗಳಾಗಿವೆ. ಆಡಳಿತಾರೂಢ ಡಿಎಂಕೆ ಈ ಯೋಜನೆಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳುತ್ತಿದ್ದರೆ, ವಿರೋಧ ಪಕ್ಷ ಎಐಎಡಿಎಂಕೆಯು ಅದಕ್ಕಿಂತ ಉತ್ತಮ ಯೋಜನೆಗಳ ಭರವಸೆ ನೀಡಿದೆ,

ಅದೇ ಸಮಯದಲ್ಲಿ, ಉದ್ಯೋಗಗಳು, ಖಾಸಗಿ ಹೂಡಿಕೆ ಮತ್ತು ನಿರಂತರ ಆದಾಯದ ಬೆಳವಣಿಗೆಯ ಮೇಲೆ ಯುವ ಮತದಾರರಲ್ಲಿ ಹೆಚ್ಚುತ್ತಿರುವ ಒತ್ತು ಗ್ರಹಿಸಬಹುದಾದ ಬದಲಾವಣೆ ತಂದಿರುವುದು ಎದ್ದು ಕಾಣುತ್ತಿದೆ. ಆದರೆ, ಕಲ್ಯಾಣ ಕಾರ್ಯಕ್ರಮಗಳು ಚುನಾವಣೆಯ ಕೇಂದ್ರಬಿಂದುವಾಗೇ ಉಳಿದಿವೆ.

3. ರಾಜ್ಯದ ಗುರುತು ಮತ್ತು ಒಕ್ಕೂಟ ವ್ಯವಸ್ಥೆ

ತಮಿಳುನಾಡಿನಲ್ಲಿ ಪ್ರತಿ ಚುನಾವಣೆಯಲ್ಲೂ ರಾಜ್ಯದ ಐಡೆಂಟಿಟಿಯನ್ನು ಯಾರು ಎತ್ತಿ ಹಿಡಿಯುತ್ತಾರೆ ಎಂಬ ಪ್ರಶ್ನೆ ಏಳುತ್ತದೆ. ಈ ಬಾರಿಯೂ ಅದು ಅತ್ಯಂತ ಪ್ರಬಲ ಪಾತ್ರ ವಹಿಸುತ್ತಿದೆ ಎನ್ನಲಾಗುತ್ತಿದೆ.

ಹಿಂದಿ ಹೇರಿಕೆಗೆ ಪ್ರತಿರೋಧ, ನೀಟ್ನಂತಹ ಕೇಂದ್ರೀಕೃತ ನೀತಿಗಳಿಗೆ ವಿರೋಧ ಮತ್ತು ಕೇಂದ್ರ ಸರ್ಕಾರದೊಂದಿಗಿನ ಘರ್ಷಣೆ ಮತ್ತೊಮ್ಮೆ ಪ್ರಚಾರ ನಿರೂಪಣೆಯನ್ನು ರೂಪಿಸಿದೆ. ಅದರಲ್ಲೂ ಭಾಷೆ ಈ ಚರ್ಚೆಯ ಪ್ರಮುಖ ವಿಷಯವಾಗಿ ಉಳಿದಿದೆ. ಭಾಷೆಯನ್ನು ಸಮರ್ಥಿಸುವ ಮೂಲಕ ಡಿಎಂಕೆ ಇದನ್ನು ಒಕ್ಕೂಟ ವ್ಯವಸ್ಥೆಯ ಹಕ್ಕುಗಳ ರಕ್ಷಣೆಯ ಹೋರಾಟ ಎಂದು ಬಿಂಬಿಸಿದೆ. ಬಿಜೆಪಿಯು ಅಭಿವೃದ್ಧಿ ಮತ್ತು ರಾಷ್ಟ್ರೀಯ ಏಕೀಕರಣದ ಹೆಸರಲ್ಲಿ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದೆ.

4. ಕಾನೂನು ಮತ್ತು ಸುವ್ಯವಸ್ಥೆ/ಮಹಿಳಾ ಸುರಕ್ಷತೆ

ಎಐಎಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಪ್ರಮುಖ ಕಳವಳದ ವಿಷಯವೆಂದು ಪ್ರಚಾರ ಮಾಡಿವೆ. ಮಾದಕ ವಸ್ತುಗಳ ವಿಪರೀತ ಲಭ್ಯತೆ, ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಆರೋಪಿಸಿವೆ.

ಈ ಆರೋಪಗಳನ್ನು ಅಲ್ಲಗಳೆದಿರುವ ಡಿಎಂಕೆಯು ಕಠಿಣ ಕಾನೂನು, ತ್ವರಿತ ತನಿಖೆಯ ಉದಾಹರಣೆ, ಮಹಿಳೆಯರ ವಿರುದ್ಧದ ಅಪರಾಧ ಸಂಬಂಧಿತ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಬೇಗ ಶಿಕ್ಷೆ ವಿಧಿಸಿರುವ ಅಂಕಿ ಅಂಶಗಳನ್ನು ಮುಂದಿಟ್ಟಿದೆ. ಆಡಳಿತಾತ್ಮಕ ಸುಧಾರಣೆ ಕಂಡುಬಂದಿದ್ದು, ಬೇರೆಲ್ಲ ರಾಜ್ಯಗಳಿಗಿಂತ ತಮಿಳುನಾಡು ಅತ್ಯಂತ ಸುರಕ್ಷಿತ ರಾಜ್ಯ ಎಂದು ಅದು ಪ್ರತಿಪಾದಿಸಿದೆ.

5. ಮಹಿಳಾ ಮೀಸಲಾತಿ/ ಕ್ಷೇತ್ರ ಪುನರ್ವಿಂಗಡಣೆ

ಚುನಾವಣಾ ಪ್ರಚಾರದ ಅಂತಿಮ ದಿನಗಳಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಯ ವಿಷಯಗಳು ಪ್ರಚಾರದ ಪ್ರಮುಖ ಅಂಶಗಳ ಸಾಲಿಗೆ ಸೇರಿದ್ದವು. ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆಗೆ ಸೋಲಾಗುತ್ತಿದ್ದಂತೆ ತಮಿಳುನಾಡಿನಲ್ಲಿ ಪ್ರಚಾರ ರ್ಯಾಲಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಜೊತೆ ಸೇರಿಕೊಂಡು ಡಿಎಂಕೆ, ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಸೋಲಿಸಿದೆ. ಮಹಿಳೆಯರಿಗೆ ದ್ರೋಹ ಮಾಡಿದೆ. ಕ್ಷೇತ್ರ ಪುನರ್ವಿಂಗಡಣೆ ಮೂಲಕ ತಮಿಳುನಾಡಿನಲ್ಲಿ ಹೆಚ್ಚಾಗುತ್ತಿದ್ದ ಕ್ಷೇತ್ರಗಳಿಗೆ ಕೊಕ್ಕೆ ಹಾಕಿದೆ ಎಂದು ವಾಗ್ದಾಳಿ ನಡೆಸಿದ್ದರು.

ಮಸೂದೆಯ ಸೋಲು ತಮಿಳುನಾಡು ಸೇರಿದಂತೆ ದಕ್ಷಿಣದ ಇತರ ರಾಜ್ಯಗಳ ಗೆಲುವು ಎಂದು ಹೇಳಿತ್ತು. ಕ್ಷೇತ್ರ ಪುನರ್ವಿಂಗಡಣೆಯು ಸಂಸತ್ತಿನಲ್ಲಿ ರಾಜ್ಯದ ಪ್ರಾತಿನಿಧ್ಯವನ್ನು ಕುಗ್ಗಿಸುತ್ತದೆ ಎಂದು ಡಿಎಂಕೆ ವಾದಿಸಿತ್ತು. ಅದು ತನ್ನ ನಿಲುವನ್ನು ಒಕ್ಕೂಟ ವ್ಯವಸ್ಥೆಯ ಹಕ್ಕುಗಳು ಮತ್ತು ಪ್ರಾದೇಶಿಕ ಗುರುತಿನ ರಕ್ಷಣೆಯ ಭಾಗವೆಂದು ವಿವರಿಸಿದೆ. ರಾಜ್ಯದ ಸ್ವಾಯತ್ತತೆ ಮತ್ತು ಕೇಂದ್ರ ಪ್ರಾಬಲ್ಯದ ನಡುವಿನ ಚರ್ಚೆ ಇದಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.