ಚೆನ್ನೈ: ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಪಡಿಸಿ, ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಮಾರನೇ ದಿನವೇ ಕೇಂದ್ರ ಚುನಾವಣಾ ಆಯೋಗ ಸೋಮವಾರ ತಮಿಳುನಾಡಿನ ನಾಲ್ವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ಕರೂರು, ಈರೋಡ್, ನಾಗಪಟ್ಟಣಂ ಮತ್ತು ವಿರುಧುನಗರ್ ಜಿಲ್ಲೆಗಳ ಎಸ್ಪಿಗಳನ್ನು ವರ್ಗಾಯಿಸಲಾಗಿದೆ. ಕರೂರು ಎಸ್ಪಿ ಜೋಶ್ ತಂಗಯ್ಯ ಅವರ ಸ್ಥಾನಕ್ಕೆ ಹರಿಕೃಷ್ಣನ್ ಪ್ರಸಾದ್, ಈರೋಡ್ ಎಸ್ಪಿ ಎ.ಸುಜಾತ ಬದಲಿಗೆ ಡಿ.ವಿ.ಕಿರಣ್ ಶೃತಿ ಅವರನ್ನು ನಿಯೋಜಿಸಲಾಗಿದೆ.

ನಾಗಪಟ್ಟಣಂ ಎಸ್ಪಿ ಕೆ.ಬಲ್ಲಾ ಅವರ ಸ್ಥಾನಕ್ಕೆ ಸುಜಿತ್ ಕುಮಾರ್, ವಿರುಧುನಗರ ಜಿಲ್ಲೆಯ ಎಸ್ಪಿ ಡಿ.ಕಣ್ಣನ್ ಅವರ ಸ್ಥಾನಕ್ಕೆ ಎನ್.ಶ್ರೀನಾಥ ಅವರನ್ನು ನಿಯೋಜಿಸಲಾಗಿದೆ.

‘ಕರೂರು ಎಸ್ಪಿ ಮತ್ತು ಜಿಲ್ಲಾಧಿಕಾರಿಯನ್ನು ತೆರವು ಮಾಡದೇ ಜಿಲ್ಲೆಯಲ್ಲಿ ಪಾರದರ್ಶಕ ಚುಣಾವಣೆ ಸಾಧ್ಯವಿಲ್ಲ’ ಎಂದು ಬಿಜೆಪಿ ಮುಖಂಡ ಕೆ.ಅಣ್ಣಾಮಲೈ ಹೇಳಿಕೆ ನೀಡಿದ್ದರು. ಅದಾದ ಕೆಲ ಗಂಟೆಗಳಲ್ಲೇ ಆಯೋಗದ ನಿರ್ದೇಶನ ಹೊರಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.