ಚೆನ್ನೈ: ತಮಿಳುನಾಡು ವಿಧಾಸನಭಾ ಚುನಾವಣಾ ಫಲಿತಾಂಶದ ನಂತರದ ಬೆಳವಣಿಗೆಗಳು ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟದಲ್ಲಿ ಬಿರುಕು ಮೂಡಿಸಿದ್ದು, ಮೈತ್ರಿಕೂಟ ಅಂತ್ಯಗೊಳ್ಳಲಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಬಹುಮತಕ್ಕೆ ಕೇವಲ 10 ಸ್ಥಾನಗಳ ಕೊರತೆ ಎದುರಿಸುತ್ತಿದೆ. ಇದರಿಂದಾಗಿ ರಾಜ್ಯದ ಅಧಿಕಾರದ ಸಮೀಕರಣ ಸಂಪೂರ್ಣವಾಗಿ ಬದಲಾಗಿದೆ.

ಬಹುಮತದ ಸರ್ಕಾರ ರಚಿಸಲು ಟಿವಿಕೆಗೆ ಇನ್ನೂ 10 ಶಾಸಕರ ಬೆಂಬಲ ಬೇಕಿದ್ದು, ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸುವ ಅನಿವಾರ್ಯತೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಟಿವಿಕೆಯೊಂದಿಗೆ ಅಧಿಕಾರ ಹಂಚಿಕೊಳ್ಳಲು ಸಿದ್ಧವಿಲ್ಲ. ಆದರೆ, ಡಿಎಂಕೆಯ ಹಳೆಯ ಮಿತ್ರಪಕ್ಷವಾದ ಕಾಂಗ್ರೆಸ್ನಿಂದ ಹೊಸ ಮೈತ್ರಿಯ ಸುಳಿವು ಸಿಕ್ಕಿದೆ.

‘ವಿಜಯ್ ಅವರು ಸರ್ಕಾರ ರಚಿಸಲು ಕಾಂಗ್ರೆಸ್ನ ಬೆಂಬಲ ಕೋರಿದ್ದಾರೆ. ಬಿಜೆಪಿ ಅಥವಾ ಅದರ ಪರವಾಗಿರುವ ಯಾವುದೇ ಪಕ್ಷಗಳು ತಮಿಳುನಾಡಿನಲ್ಲಿ ಸರ್ಕಾರದ ಭಾಗವಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಅದರಂತೆ, ಚುನಾವಣಾ ತೀರ್ಪಿನಲ್ಲಿ ಪ್ರತಿಫಲಿಸಿರುವ ರಾಜ್ಯದ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ವಿಜಯ್ ಅವರ ವಿನಂತಿಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ತಮಿಳುನಾಡು ಕಾಂಗ್ರೆಸ್ ಸಮಿತಿಗೆ ಹೈಕಮಾಂಡ್ ಸೂಚಿಸಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.

ಡಿಎಂಕೆ ಪಾಲಿಗೆ ಕೆ.ಸಿ. ವೇಣುಗೋಪಾಲ್ ಅವರ ಹೇಳಿಕೆಯು ಕಾಂಗ್ರೆಸ್ನ ನಿಷ್ಠೆ ಬದಲಾಗುತ್ತಿರುವ ಸಂಕೇತದಂತೆ ಕಾಣುತ್ತಿದೆ. ಚುನಾವಣಾ ಪೂರ್ವ ಮೈತ್ರಿಯ ಭಾಗವಾಗಿ ಡಿಎಂಕೆ 59 ಸ್ಥಾನಗಳನ್ನು ಗೆದ್ದಿದೆ.

ವೇಣುಗೋಪಾಲ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿಎಂಕೆ ವಕ್ತಾರ ಶರವಣನ್ ಅಣ್ಣಾದೊರೈ, ‘ಕಾಂಗ್ರೆಸ್ ‘ಬೆನ್ನಿಗೆ ಇರಿಯುವವರಂತೆ’ ವರ್ತಿಸುತ್ತಿದೆ. ಅಲ್ಲದೆ, ಕಾಂಗ್ರೆಸ್ ಪಕ್ಷದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಕೇಂದ್ರ ನಾಯಕತ್ವವೇ ತೆಗೆದುಕೊಳ್ಳುವಾಗ ಈ ನಿರ್ಧಾರವನ್ನು ಮಾತ್ರ ಸ್ಥಳೀಯ ಘಟಕಕ್ಕೆ ಬಿಟ್ಟಿದ್ದು ಹೇಗೆ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಬೆನ್ನಿಗೆ ಇರಿದವರು’ (Backstabbers) ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ಸಿಗರ ವಿರುದ್ಧ ಅಣ್ಣಾದೊರೈ ಅಸಮಾಧಾನ ಹೊರಹಾಕಿದ್ದಾರೆ. ಮೈತ್ರಿ ಪಾಲುದಾರರ ನಡುವೆ ಬಹಿರಂಗವಾಗಿ ಅಸಮಾಧಾನ ವ್ಯಕ್ತವಾಗಿರುವುದು ಇದೇ ಮೊದಲು.

ಸಂದಿಗ್ಧ ಸನ್ನಿವೇಶದಲ್ಲಿ ಕಾಂಗ್ರೆಸ್...

ತಮಿಳುನಾಡಿನಲ್ಲಿ ಸದ್ಯ ಕಾಂಗ್ರೆಸ್ ಕಾರ್ಯತಂತ್ರದ ಸಂದಿಗ್ಧತೆಯನ್ನು ಎದುರಿಸುತ್ತಿದೆ ಎಂದರೆ ತಪ್ಪಲ್ಲ. ಮೈತ್ರಿ ಧರ್ಮವನ್ನು ಗೌರವಿಸಬೇಕೇ ಅಥವಾ ಹೊಸ 'ಶಕ್ತಿ'ಯೊಂದಿಗೆ ಕೈಜೋಡಿಸಬೇಕೇ ಕೈಜೋಡಿಸಬೇಕೇ?, ಒಂದು ವೇಳೆ ಕಾಂಗ್ರೆಸ್ ಅಂತಿಮವಾಗಿ ಟಿವಿಕೆಯನ್ನು ಬೆಂಬಲಿಸಿದರೆ, ಈ ಕ್ಷಣವು ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ‘ವಿಚ್ಛೇದನ’ದ ಸ್ಪಷ್ಟ ಸಂಕೇತವಾಗಲಿದೆ.
.ಪಂಚರಾಜ್ಯ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಮುಸ್ಲಿಮರೇ ಹೆಚ್ಚು!.ಮೇ 9ಕ್ಕೆ ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಪ್ರಮಾಣ ವಚನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.