ಚೆನ್ನೈ: ಡಿಎಂಕೆ, ಸಿಪಿಎಂ, ವಿಸಿಕೆ ಮತ್ತು ನಟ ಕಮಲ್ ಹಾಸನ್ ಅವರ ಎಂಎನ್ಎಂ ಪಕ್ಷಗಳು ಒಗ್ಗೂಡಿ ಮಾಡಿಕೊಂಡಿರುವ ಜಾತ್ಯತೀತ ಪ್ರಗತಿಪರ ಮೈತ್ರಿಕೂಟದಲ್ಲಿ (ಎಸ್ಪಿಎ) ಸೀಟು ಹಂಚಿಕೆ ಪ್ರಕ್ರಿಯೆಯು ಕಗ್ಗಂಟಾಗಿದೆ. ಸಣ್ಣ ಪಕ್ಷಗಳು ಡಿಎಂಕೆ ಕುರಿತು ಬೇಸರಗೊಂಡಿವೆ.

ಈ ಪಕ್ಷಗಳೊಂದಿಗೆ ಮಾತುಕತೆ ಮುಗಿದ ಬಳಿಕ ನಟ ವಿಜಯಕಾಂತ್ ಅವರ ಡಿಎಂಡಿಕೆ ಪಕ್ಷದೊಂದಿಗೆ ಡಿಎಂಕೆ ಮಾತುಕತೆ ನಡೆಸಲಿದೆ. ಡಿಎಂಡಿಕೆ ಪಕ್ಷಕ್ಕೆ ಎಷ್ಟು ಸೀಟು ನೀಡಲಾಗುತ್ತದೆ ಎಂಬುದನ್ನು ಡಿಎಂಕೆ ಬಹಿರಂಗ ಮಾಡಿಲ್ಲ. ಇದೇ ವಿಚಾರ ಸಿಪಿಎಂ ಸೇರಿ ಇತರ ಪಕ್ಷಗಳಿಗೆ ಬೇಸರ ತರಿಸಿದೆ.

2021ರ ಚುನಾವಣೆಯಲ್ಲಿ 6 ಸ್ಥಾನಗಳಲ್ಲಿ ಸಿಪಿಎಂ ಸ್ಪರ್ಧಿಸಿತ್ತು. ಈ ಬಾರಿ 5 ಸ್ಥಾನಗಳಿಗೆ ಒಪ್ಪಿಕೊಳ್ಳುವಂತೆ ಡಿಎಂಕೆ ಕೇಳಿಕೊಳ್ಳುತ್ತಿದೆ. ಅಂತೆಯೇ ವಿಸಿಕೆ ಪಕ್ಷಕ್ಕೆ ಕೂಡ ಕಳೆದ ಬಾರಿಗಿಂತ ಒಂದು ಸ್ಥಾನ ಕಡಿಮೆ, ಅಂದರೆ 7 ಸ್ಥಾನಗಳಿಗೆ ಒಪ್ಪಿಕೊಳ್ಳುವಂತೆ ಡಿಎಂಕೆ ಹೇಳುತ್ತಿದೆ. ಆದರೆ, 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂಬುದು ವಿಸಿಕೆ ಆಗ್ರಹ.

ಇನ್ನಷ್ಟು ಪಕ್ಷಗಳು ಮೈತ್ರಿಕೂಟವನ್ನು ಸೇರಿಕೊಂಡಿವೆ. ಆದ್ದರಿಂದ ಎಲ್ಲ ಪಕ್ಷಗಳಿಗೆ ಕಡಿಮೆ ಸೀಟುಗಳು ದೊರೆಯಲಿವೆ ಎನ್ನುತ್ತಿದೆ ಡಿಎಂಕೆ. ಆದರೆ, ‘ಕಾಂಗ್ರೆಸ್ಗೆ ಮಾತ್ರ ಕಳೆದ ಬಾರಿಗಿಂತ 3 ಸೀಟು ಹೆಚ್ಚಿಗೆ ನೀಡಲಾಗಿದೆ. ಇದರೊಂದಿಗೆ ಒಂದು ರಾಜ್ಯಸಭೆ ಸೀಟನ್ನೂ ನೀಡಲಾಗಿದೆ. ಆದ್ದರಿಂದ ನಮಗೂ ಹೆಚ್ಚಿನ ಸೀಟು ನೀಡಿ’ ಎನ್ನುತ್ತಿವೆ ಸಣ್ಣ ಪಕ್ಷಗಳು.

‘ಆರು ಸೀಟುಗಳು ಬೇಕು ಎಂದು ಸಿಪಿಎಂ ಹಟ ಹಿಡಿದರೆ, ನಾವು ಕೊಡಲೇಬೇಕಾಗುತ್ತದೆ. ವಿಸಿಕೆ ಪಕ್ಷಕ್ಕೆ 8 ಸೀಟುಗಳನ್ನು ನೀಡುವ ಯೋಜನೆ ಇದೆ. ನಮ್ಮ ಮೈತ್ರಿ ಪಕ್ಷಗಳ ಸೀಟುಗಳನ್ನು ಕಡಿತ ಮಾಡುತ್ತಿದ್ದೇವೆ ಎಂದಲ್ಲ. ಕಳೆದ ಬಾರಿ ಚುನಾವಣೆಯ ಹೋಲಿಕೆಯಲ್ಲಿ ನಮ್ಮ ಸೀಟುಗಳು ಕೂಡ ಕಡಿತಗೊಂಡಿವೆ. ನಾವೂ ಕಡಿಮೆ ಸೀಟುಗಳಲ್ಲಿಯೇ ಸ್ಪರ್ಧಿಸುತ್ತಿದ್ದೇವೆ’ ಎಂದು ಡಿಎಂಕೆ ನಾಯಕರೊಬ್ಬರು ಹೇಳಿದರು.

ಎಂಎನ್ಎಂ ಪಕ್ಷದವರು ನಮ್ಮ ಪಕ್ಷದ ಚಿಹ್ನೆಯಲ್ಲಿಯೇ ಸ್ಪರ್ಧಿಸಲಿ ಎನ್ನುತ್ತಿದೆ ಡಿಎಂಕೆ. ಆದರೆ, ಹೀಗೆ ಮಾಡಿದರೆ ನಮ್ಮ ಸ್ವಂತಿಕೆಗೆ ಹೊಡೆದ ಬೀಳಲಿದೆ ಎನ್ನುವುದು ಎಂಎನ್ಎಂ ಪ್ರತಿಕ್ರಿಯೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.