ನವದೆಹಲಿ: ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್ ಕುಟುಂಬದ ಮೂವರು ಸದಸ್ಯರು ಮೂರು ಬೇರೆ ಬೇರೆ ಪಕ್ಷಗಳಲ್ಲಿ ಸ್ಪರ್ಧೆ ಮಾಡಿ ಗೆಲುವು ಕಂಡಿದ್ದಾರೆ.

ಮಾರ್ಟಿನ್ ಅವರ ಪತ್ನಿ, ಮಗ ಮತ್ತು ಅಳಿಯ ಮೂರು ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ತಮ್ಮ ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.
.ಇಲ್ಲಿ ಸೀಟಿ ಸದ್ದು, ಅಲ್ಲಿ ದೀದಿಗೆ ಗುದ್ದು.ತಮಿಳುನಾಡು ವಿಧಾನಸಭಾ ಚುನಾವಣೆ: ಟಿವಿಕೆಯತ್ತ ಎಲ್ಲರ ಚಿತ್ತ.
ಇವರೆಲ್ಲರೂ 2026ರ ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಚುನಾವಣಾ ಬಾಂಡ್ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಭಾರಿ ದೇಣಿಗೆ ನೀಡಿದ್ದ ಭಾರತದ 'ಲಾಟರಿ ಕಿಂಗ್' ಸ್ಯಾಂಟಿಯಾಗೊ ಮಾರ್ಟಿನ್ ಅವರ ಕುಟುಂಬಕ್ಕೆ ಸೇರಿದವರು ಎಂಬುದು ವಿಶೇಷ

ಸ್ಯಾಂಟಿಯಾಗೊ ಮಾರ್ಟಿನ್ ಅವರ ಪತ್ನಿ ಲಿಮಾರೋಸ್ ಮಾರ್ಟಿನ್ ತಮಿಳುನಾಡಿನ ಲಾಲ್ಗುಡಿ ಕ್ಷೇತ್ರದಿಂದ ಎಐಎಡಿಎಂಕೆ ಪಕ್ಷದಿಂದ ಸ್ಪರ್ಧಿಸಿ 2,739 ಮತಗಳಿಂದ ಟಿವಿಕೆ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.

ಡಿಎಂಕೆ ಭದ್ರಕೋಟೆಯಾಗಿದ್ದ ಲಾಲ್ಗುಡಿ, ಸುಮಾರು 20 ವರ್ಷಗಳ ನಂತರ ಎಐಎಡಿಎಂಕೆ ಪಾಲಾಗಿದೆ. ಇಲ್ಲಿ ಡಿಎಂಕೆ ಅಭ್ಯರ್ಥಿ ಟಿ. ಪರಿವಲ್ಲಾಲ್ 5,230 ಮತಗಳ ಅಂತರದಿಂದ ಸೋತಿದ್ದಾರೆ. 2006, 2011, 2016 ಮತ್ತು 2021ರ ಚುನಾವಣೆಗಳಲ್ಲಿ ಇಲ್ಲಿ ಡಿಎಂಕೆ ಸತತವಾಗಿ ಜಯಗಳಿಸಿತ್ತು.

14 ವರ್ಷಗಳ ಕಾಲ ಐಜೆಕೆ ಪಕ್ಷದಲ್ಲಿದ್ದ ಲಿಮಾರೋಸ್ ಇತ್ತೀಚೆಗಷ್ಟೇ ಎಐಎಡಿಎಂಕೆಗೆ ಸೇರ್ಪಡೆಯಾಗಿದ್ದರು. ಅವರು ಸದ್ಯ ಪಕ್ಷದಲ್ಲಿ ಮಹಿಳಾ ಘಟಕದ ಜಂಟಿ ಕಾರ್ಯದರ್ಶಿಯಾಗಿದ್ದಾರೆ.

ಕುಟುಂಬದ ಎರಡನೇ ಗೆಲುವು...

ತಮಿಳುನಾಡಿನಲ್ಲಿ ಮಾರ್ಟಿನ್ ಅವರ ಅಳಿಯ ಮತ್ತು ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಆದವ್ ಅರ್ಜುನ್ ವಿಕ್ಕಿವಾಕಂ ಕ್ಷೇತ್ರದಲ್ಲಿ 17,302 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇವರು ಡಿಎಂಕೆಯ ಕಾರ್ತಿಕ್ ಮೋಹನ್ ಮತ್ತು ಎಐಎಡಿಎಂಕೆಯ ವಿಜಯಕುಮಾರ್ ಅವರನ್ನು ಸೋಲಿಸಿದ್ದಾರೆ.

ಪುದುಚೇರಿಯಲ್ಲೂ ಮಾರ್ಟಿನ್ ಕುಟುಂಬದ ಮಿಂಚು

ಸ್ಯಾಂಟಿಯಾಗೊ ಮಾರ್ಟಿನ್ ಅವರ ಪುತ್ರ ಜೋಸ್ ಚಾರ್ಲ್ಸ್ ಮಾರ್ಟಿನ್ ಅವರು ಕಳೆದ ವರ್ಷ 'ಲಕ್ಷೀಯ ಜನನಾಯಕ ಕಚ್ಚಿ' (ಎಲ್ಜೆಕೆ) ಎಂಬ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡಿದ್ದರು. ತಮ್ಮ ನೂತನ ಪಕ್ಷದ ಮೂಲಕ ವಿಧಾನಸಭೆಯನ್ನು ಪ್ರವೇಶ ಮಾಡಿದ್ದಾರೆ.

ಕಾಮರಾಜ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಪಿ.ಕೆ.ದೇವದಾಸ್ ಅವರನ್ನು 10,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.

ಈ ಹಿಂದೆ ಬಿಜೆಪಿಯಲ್ಲಿದ್ದ ಜೂನಿಯರ್ ಮಾರ್ಟಿನ್ ಕೆಲವು ಕಾರಣಗಳಿಂದ ಪಕ್ಷ ತೊರೆದಿದ್ದರು. ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮದ ಬಗ್ಗೆ ತಮಗೆ ಇಂದಿಗೂ ಗೌರವವಿದೆ ಎಂದು ಅವರು ತಿಳಿಸಿದ್ದಾರೆ.

ತಮ್ಮನ್ನು ಹೊರಗಿನವರು ಎಂದು ಟೀಕಿಸುವವರಿಗೆ ಉತ್ತರಿಸಿದ ಮಾರ್ಟಿನ್, ತಾವು ಈಗ ಪುದುಚೇರಿಗೆ ವಾಸ್ತವ್ಯ ಬದಲಿಸಿರುವುದಾಗಿ ತಿಳಿಸಿದ್ದಾರೆ. ಈ ಕೇಂದ್ರಾಡಳಿತ ಪ್ರದೇಶವನ್ನು ಸಿಂಗಾಪುರ ಅಥವಾ ಹಾಂಗ್ ಕಾಂಗ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.
.ಕಿಂಗ್ ಮೇಕರ್ ಅಲ್ಲ 'ಕಿಂಗ್' ಆಗುವತ್ತ ದಳಪತಿ ವಿಜಯ್: TVK ಕೈ ಹಿಡಿದ ಅಂಶಗಳಿವು....ತಮಿಳುನಾಡಿನ 'ಅಕ್ಕಿ ಪಾತ್ರೆ'ಯಲ್ಲಿ ಮತ ಲೆಕ್ಕಾಚಾರ: ಡಿಎಂಕೆಗೆ ರೈತರ ಚಾಟಿ ಏಟು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.