ಬೆಂಗಳೂರು: ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಯುಕ್ತ ಇಂದು ಮತ ಎಣಿಕೆ ನಡೆಯುತ್ತಿದ್ದು, ನಟ ದಳಪತಿ ವಿಜಯ್ ಅವರ ಟಿವಿಕೆ ಭರ್ಜರಿ ಮುನ್ನಡೆ ಸಾಧಿಸಿದೆ.

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಮತದಾನ ನಡೆದಿತ್ತು. ಇಂದು ನಡೆಯುತ್ತಿರುವ ಮತ ಎಣಿಕೆಯಲ್ಲಿ ಡಿಎಂಕೆ ಅಭ್ಯರ್ಥಿಗಳು 109 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ತಮಿಳುನಾಡಿನಲ್ಲಿ ಅತಂತ್ರ ವಿಧಾನಸಭೆ ರಚನೆಯಾಗುವ ಸಂಭವ ಇದೆ.

ಅದಾಗ್ಯೂ ಟಿವಿಕೆ ವಿಜಯ್ ಅವರ ಭರ್ಜರಿ ಸಾಧನೆಗೆ ಅವರ ಚುನಾವಣಾ ತಂತ್ರಗಳ ಜೊತೆ ಪ್ರಣಾಳಿಕೆಯಲ್ಲಿ ಘೋಷಿಸಲಾದ ಈ ಕೆಳಗಿನ ಅಂಶಗಳು ಅವರ ಕೈ ಹಿಡಿದಿವೆ ಎನ್ನಲಾಗುತ್ತಿದೆ.

* ಮಹಿಳೆಯರಿಗೆ ತಿಂಗಳಿಗೆ ₹2,500 ರೂ. ಸಹಾಯಧನ

* ಸಣ್ಣ ರೈತರ ಬೆಳೆ ಸಾಲ ಮನ್ನಾ

* ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ಮಾಸಿಕ ₹3,000 ಭತ್ಯೆ

* ಸಹೋದರಿ, ಮಗಳ ಮದುವೆಗೆ 8 ಗ್ರಾಂ ಚಿನ್ನ

* 200 ಯೂನಿಟ್ ಉಚಿತ ವಿದ್ಯುತ್

* ಬೇಸಿಗೆಯಲ್ಲಿ ಉಚಿತವಾಗಿ ಕೊಳವೆ ಬಾವಿ ನೀರು ಸರಬರಾಜು

* ಪ್ರತಿ ವರ್ಷ ಆರು ಉಚಿತ LPG ಸಿಲಿಂಡರ್ಗಳನ್ನು ನೀಡುವ ಭರವಸೆ

* ಮಹಿಳಾ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರೂಪಾಯಿಗಳವರೆಗೆ ಬಡ್ಡಿರಹಿತ ಸಾಲ

* ಪದವೀಧರರಿಗೆ ₹4,000 ಭತ್ಯೆ, ಡಿಪ್ಲೊಮಾ ಪಡೆದವರಿಗೆ ₹2,500

* ಮಹಿಳೆಯರು ಮಕ್ಕಳಿಗೆ ಅತಿ ಹೆಚ್ಚಿನ ಸುರಕ್ಷತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.