ಹೈದರಾಬಾದ್/ಚೆನ್ನೈ: ಭಾರತದಲ್ಲಿ ಹೊಸ ಪಕ್ಷವೊಂದು ಸ್ಥಾಪನೆಯಾದ ಒಂದೆರಡೇ ವರ್ಷಗಳಲ್ಲಿ ಅಧಿಕಾರದ ಗದ್ದುಗೆ ಏರಿರುವಂತಹ ಉದಾಹರಣೆಗಳು ವಿರಳ. ಆದರೂ ಚಿತ್ರನಟರಾಗಿ ಜನರಿಗೆ ಪರಿಚಿತರಾದ ಎನ್.ಟಿ. ರಾಮರಾವ್ (ಎನ್ಟಿಆರ್) ಹಾಗೂ ದಳಪತಿ ವಿಜಯ್ ಅವರು ರಾಜಕೀಯ ಜೀವನಕ್ಕೆ ಕಾಲಿಟ್ಟ ಅಲ್ಪ ಸಮಯದಲ್ಲೇ ಜನರ ವಿಶ್ವಾಸ ಗಳಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ಸಫಲರಾದವರು.

ತೆಲುಗಿನ ಖ್ಯಾತ ನಟ ಎನ್ಟಿಆರ್ ಅವರು 1982ರಲ್ಲಿ ಸ್ಥಾಪಿಸಿದ ತೆಲುಗು ದೇಶಂ ಪಕ್ಷವು (ಟಿಡಿಪಿ) ಕೇವಲ 9 ತಿಂಗಳೊಳಗಾಗಿ, 1983ರಲ್ಲಿ ನಡೆದ ಅವಿಭಜಿತ ಆಂಧ್ರಪ್ರದೇಶ ಚುನಾವಣೆಯಲ್ಲಿ ಗೆಲುವು ಸಾಧಿಸಿತು. 27 ವರ್ಷಗಳ ಕಾಂಗ್ರೆಸ್ ಆಡಳಿತವನ್ನು ಕೊನೆಗೊಳಿಸಿತು. ಎನ್ಟಿಆರ್ ರಾಜ್ಯದ ಮುಖ್ಯಮಂತ್ರಿಯಾದರು. ಅಂದಿಗೆ ಟಿಡಿಪಿಯ ಈ ಅಲೆಯು ದೇಶದಲ್ಲಿ ಭಾರೀ ಸದ್ದು ಮಾಡಿತ್ತು.

ಇದೀಗ ಎನ್ಟಿಆರ್ ಬಳಿಕ ಹೊಸ ಪಕ್ಷ ಸ್ಥಾಪಿಸಿದ ಎರಡೇ ವರ್ಷಗಳಲ್ಲಿ ಚುನಾವಣೆ ಗೆದ್ದ ಎರಡನೇ ವ್ಯಕ್ತಿ ವಿಜಯ್. ಇವರು 2024ರ ಫೆಬ್ರುವರಿ 2ರಂದು ಸ್ಥಾಪಿಸಿದ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಸ್ಥಾಪನೆಯಾದ ಎರಡೇ ವರ್ಷಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಭಾರೀ ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ಬರೆದಿದೆ.

ದಕ್ಷಿಣ ಭಾರತದಲ್ಲಿ ರಾಜಕೀಯ ಪ್ರವೇಶಿಸಿದ ಹಲವಾರು ನಟರು ದೀರ್ಘಕಾಲ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಚಿತ್ರನಟರಾಗಿ ಜನಪ್ರಿಯರಾದ ಮಾತ್ರಕ್ಕೆ ರಾಜಕೀಯ ಒಲಿಯುವುದು ಸಾಧ್ಯವಲ್ಲ ಎಂಬ ಮಾತಿಗೆ ಹಲವು ಉದಾಹರಣೆಗಳೂ ಇವೆ. ಆದರೂ ವಿಜಯ್ ಅವರ ಜನಪ್ರಿಯತೆ ಇಲ್ಲಿ ಕೆಲಸ ಮಾಡಿದೆ.

ದಿವಂಗತ ಮಾಜಿ ಮುಖ್ಯಮಂತ್ರಿ ಎಂ.ಜಿ ರಾಮಚಂದ್ರನ್ ಅವರು ತಮಿಳುನಾಡಿನಲ್ಲಿ 1972ರಲ್ಲಿ ಸ್ಥಾಪಿಸಿದ ಎಐಎಡಿಎಂಕೆಯು 1977ರಲ್ಲಿ ಅಧಿಕಾರ ಪಡೆಯಿತು.

ರಾಜಕೀಯಕ್ಕೆ ಧುಮುಕಿ ಹಿಂದೆ ಸರಿದ ನಟರಿವರು

ತೆಲುಗಿನ ಸೂಪರ್ಸ್ಟಾರ್ ಚಿರಂಜೀವಿ ಅವರು 2008ರಲ್ಲಿ ‘ಪ್ರಜಾ ರಾಜ್ಯಂ’ ಪಕ್ಷವನ್ನು ಸ್ಥಾಪಿಸಿದರು. ಇದು 2009ರಲ್ಲಿ ನಡೆದ ಅವಿಭಜಿತ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 294ರ ಪೈಕಿ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. 2011ರಲ್ಲಿ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸಲಾಯಿತು. ಬಳಿಕ ಚಿರಂಜೀವಿ ರಾಜಕೀಯದಿಂದ ದೂರ ಸರಿದರು

ಚಿರಂಜೀವಿ ಅವರ ಸಹೋದರ ನಟ ಪವನ್ ಕಲ್ಯಾಣ್ ಅವರು 2014ರಲ್ಲಿ ಜನ ಸೇನಾ ಪಕ್ಷವನ್ನು ಸ್ಥಾಪಿಸಿದರು. 2019ರ ಚುನಾವಣೆಯಲ್ಲಿ ಪಕ್ಷವು ಸೋತಿತು. ಬಳಿಕ 2024ರಲ್ಲಿ ಟಿಡಿಪಿ ಜೊತೆ ಪಕ್ಷವನ್ನು ವಿಲೀನಗೊಳಿಸಲಾಯಿತು.

ಬಹುಭಾಷಾ ನಟ ಕಮಲ್ ಹಾಸನ್ ಅವರು 2018ರಲ್ಲಿ ಮಕ್ಕಳ್ ನೀಧಿ ಮಯ್ಯಂ ಪಕ್ಷವನ್ನು ಸ್ಥಾಪಿಸಿದರು. 2021ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಕಮಲ್ ಪರಾಭವಗೊಂಡರು. ನಂತರ ಡಿಎಂಕೆ ಜತೆ ಮೈತ್ರಿ ಮಾಡಿಕೊಂಡರು.

ತಮಿಳಿನ ಮತ್ತೊಬ್ಬ ಖ್ಯಾತ ನಟ ವಿಜಯಕಾಂತ್ ಅವರು 2005ರಲ್ಲಿ ದೆಸೀಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಪಕ್ಷ ಸ್ಥಾಪಿಸಿದರು. ಇದು ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ನೇತೃತ್ವದ ಎಐಎಡಿಎಂಕೆಯೊಂದಿಗೆ ವಿಜಯಕಾಂತ್ ಅವರು 2011ರಲ್ಲಿ ಮೈತ್ರಿ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.