ವಿರುಧುನಗರ: ತಮಿಳುನಾಡಿನ ವಿರುಧುನಗರ ಜಿಲ್ಲೆಯ ಕಟ್ಟಾನಿಪಟ್ಟಿ ಎಂಬಲ್ಲಿ ಭಾನುವಾರ ಸಂಭವಿಸಿದ ಪಟಾಕಿ ಕಾರ್ಖಾನೆ ಸ್ಫೋಟದಲ್ಲಿ 23 ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರ ಪೈಕಿ 19 ಮಂದಿ ಮಹಿಳೆಯರಾಗಿದ್ದು, ಘಟನೆಯಲ್ಲಿ ಅನೇಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಮೂರು ಕೊಠಡಿಗಳು ಸಂಪೂರ್ಣವಾಗಿ ಧ್ವಂಸವಾಗಿದ್ದು, ಸುತ್ತಮುತ್ತಲಿನ ಕಟ್ಟಡಗಳಿಗೂ ಹಾನಿಯಾಗಿದೆ.
.ಪಾಕ್ಗೆ ನಿಯೋಗ ಕಳುಹಿಸುವ ನಿರ್ಧಾರ ಕೈಗೊಳ್ಳದ ಇರಾನ್: ಮುಗಿಯದ ಗೊಂದಲ.ಪಾಕ್ಗೆ ನಿಯೋಗ ಕಳುಹಿಸುವ ನಿರ್ಧಾರ ಕೈಗೊಳ್ಳದ ಇರಾನ್: ಮುಗಿಯದ ಗೊಂದಲ.
ಸ್ಫೋಟಕ್ಕೆ ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಕಾರಣವೇ?

ಪ್ರಾಥಮಿಕ ತನಿಖೆಯಯಲ್ಲಿ ಪ್ರಕಾರ ಕಾರ್ಖಾನೆಯಲ್ಲಿ ಸುರಕ್ಷತಾ ನಿಯಮಗಳ ಉಲ್ಲಂಘನೆಯನ್ನು ಎತ್ತಿ ತೋರಿಸಿದೆ.

ನಿಯಮದ ಪ್ರಕಾರ ಒಂದು ಉತ್ಪಾದನಾ ಕೊಠಡಿಯಲ್ಲಿ ಕೇವಲ 3 ರಿಂದ 4 ಕಾರ್ಮಿಕರಿಗೆ ಅವಕಾಶ ಕಲ್ಪಿಸಬೇಕಿತ್ತು. ಆದರೆ, ಚಿಕ್ಕ ಕೊಠಡಿಯಲ್ಲಿಯೇ ಹೆಚ್ಚುವರಿ ಕಾರ್ಮಿಕರ ನಿಯೋಜನೆ ಮಾಡಿದ್ದರು. ದುರಂತದ ವೇಳೆ ಸುಮಾರು 20 ಜನರು ಒಂದೇ ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ‘ಟೈಮ್ಸ್ ನೌವ್‘ ವರದಿ ಮಾಡಿದೆ.

ಉತ್ಪಾದನಾ ಕೊಠಡಿಗಳು ಪ್ರತ್ಯೇಕವಾಗಿರಬೇಕಿತ್ತು. ಆದರೆ ಗೋದಾಮಿನ ಮಾದರಿಯಲ್ಲಿ ಕೊಠಡಿಗಳನ್ನು ಒಂದಕ್ಕೊಂದು ಸೇರಿಸಲಾಗಿತ್ತು ಎಂದು ತಿಳಿದು ಬಂದಿದೆ.
.ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಬೋಲಾನಾಥ್ಗೆ ಕೋರ್ಟ್ ತರಾಟೆ.ಅಪಶಕುನ, ಜೇಬುಗಳ್ಳತನ ಹೇಳಿಕೆ: ರಾಹುಲ್, ಖರ್ಗೆ ವಿರುದ್ಧ ಆಯೋಗಕ್ಕೆ ಬಿಜೆಪಿ ದೂರು.
ನಿಯಮದಂತೆ ನಾಲ್ಕು ತುರ್ತು ನಿರ್ಗಮನ ದ್ವಾರಗಳಿರಬೇಕಾದ ಜಾಗದಲ್ಲಿ ಕೇವಲ ಎರಡು ದ್ವಾರಗಳು ಮಾತ್ರ ಇದ್ದವು.

ಈ ಕಾರ್ಖಾನೆಯ ಪರವಾನಗಿಯನ್ನು ಈಗಾಗಲೇ ರದ್ದುಗೊಳಿಸಲಾಗಿತ್ತು. ಆದರೂ ಮಾಲೀಕರು ಕಾನೂನುಬಾಹಿರವಾಗಿ ಕಾರ್ಖಾನೆಯನ್ನು ಗುತ್ತಿಗೆಗೆ ನೀಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದರು.

ಕೇರಳದ ತ್ರಿಶೂರ್ನಲ್ಲಿರುವ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಮಂಗಳವಾರ (ಏಪ್ರಿಲ್ 21) ಸಂಭವಿಸಿದ ಭೀಕರ ಅವಘಡದಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಮಧ್ಯಾಹ್ನ ಸುಮಾರು 3.30ಕ್ಕೆ ಈ ಘಟನೆ ಸಂಭವಿಸಿದ್ದು, ದೀರ್ಘ ಕಾಲದವರೆಗೆ ಸ್ಪೋಟ ಸಂಭವಿಸಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು ಎಂದು ಅಧಿಕಾರಿಗಳುರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.