ಚೆನ್ನೈ/ ನವದೆಹಲಿ: ತಮಿಳುನಾಡು ಮುಖ್ಯಮಂತ್ರಿಯಾಗಿ ಬೇಗ ಅಧಿಕಾರ ವಹಿಸಿಕೊಳ್ಳುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಜೋಸೆಫ್ ವಿಜಯ್ ಅವರ ಉತ್ಸಾಹಕ್ಕೆ ಬುಧವಾರ ಅಡ್ಡಿ ಎದುರಾಗಿದೆ. ‘ಸರ್ಕಾರ ರಚನೆಗೆ ಆಹ್ವಾನಿಸಬೇಕಾದರೆ ಬಹುಮತ ಹೊಂದಿರುವ ಬಗ್ಗೆ ದಾಖಲೆ ಒದಗಿಸಬೇಕು’ ಎಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಸೂಚಿಸಿದ್ದಾರೆ.

ವಿಜಯ್ ಅವರು ಲೋಕ ಭವನಕ್ಕೆ ಭೇಟಿ ನೀಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದಾಗ ರಾಜ್ಯಪಾಲರು ತಮ್ಮ ನಿಲುವನ್ನು ತಿಳಿಸಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಟಿವಿಕೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಐದು ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್, ತನ್ನ ಬೆಂಬಲ ಸೂಚಿಸಿರುವುದರಿಂದ ಟಿವಿಕೆ ಒಟ್ಟು 113 ಶಾಸಕರ ಬಲ ಹೊಂದಿದೆ. ಆದರೆ ‘ಮ್ಯಾಜಿಕ್ ಸಂಖ್ಯೆ’ ಆಗಿರುವ 117 ಶಾಸಕರ ಬೆಂಬಲ ಇರುವುದಕ್ಕೆ ದಾಖಲೆ ಒದಗಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ.

ವಿಜಯ್ ಅವರು ಶೀಘ್ರವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬೇಕೆಂದು ಟಿವಿಕೆ ಹಾಕಿಕೊಂಡಿದ್ದ ಯೋಜನೆಗೆ ಇದರಿಂದ ಹಿನ್ನಡೆಯಾಗಿದೆ. ಕಾಂಗ್ರೆಸ್ ಪಕ್ಷವು ಟಿವಿಕೆಗೆ ಬೆಂಬಲ ನೀಡಿರುವುದು ಮತ್ತು ಹೊಸ ಸರ್ಕಾರದ ಭಾಗವಾಗಲು ಮುಂದಾಗಿರುವುದು ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಎಂದು ಉನ್ನತ ಮೂಲವೊಂದು ತಿಳಿಸಿದೆ.

ಟಿವಿಕೆಯನ್ನು ಬೇಷರತ್ತಾಗಿ ಬೆಂಬಲಿಸಲು ಪಕ್ಷವು ಸಿದ್ಧವಾಗಿದೆ ಎಂದು ಎಐಎಡಿಎಂಕೆ ನಾಯಕರು ಬುಧವಾರ ಬೆಳಿಗ್ಗೆ ಹೇಳಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಟಿವಿಕೆಗೆ ಬೆಂಬಲ ಸೂಚಿಸಿದ ಬಳಿಕ ಪರಿಸ್ಥಿತಿ ಬದಲಾಯಿತು. ಸಂಜೆಯ ವೇಳೆಗೆ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಶಾಸಕರ ತುರ್ತು ಸಭೆ ನಡೆಸಿದ್ದಾರೆ. ‘ಪಕ್ಷವು ಟಿವಿಕೆಯನ್ನು ಎಂದಿಗೂ ಬೆಂಬಲಿಸುವುದಿಲ್ಲ’ ಎಂದು ತಮ್ಮ ಆಪ್ತ ಕೆ.ಪಿ. ಮುನುಸಾಮಿ ಮೂಲಕ ಪ್ರಕಟಿಸಿದ್ದಾರೆ.

ತಮಗೆ 117 ಶಾಸಕರ ಬೆಂಬಲವಿದೆ ಎಂಬುದಕ್ಕೆ ಪುರಾವೆ ನೀಡುವಂತೆ ರಾಜ್ಯಪಾಲರು ಸೂಚಿಸಿರುವುದು ವಿಜಯ್ ಅವರನ್ನು ಒತ್ತಡಕ್ಕೆ ಸಿಲುಕಿಸಿದೆ. 113 ಶಾಸಕರ ಬೆಂಬಲ ಹೊಂದಿರುವ ಟಿವಿಕೆಗೆ ಸರ್ಕಾರ ರಚಿಸಲು ಇನ್ನೂ ನಾಲ್ವರು ಶಾಸಕರ ಬೆಂಬಲ ಬೇಕಿದೆ. ಅದಕ್ಕಾಗಿ ಸಿಪಿಐ, ಸಿಪಿಎಂ ಮತ್ತು ವಿಸಿಕೆಯ ಬೆಂಬಲ ಕೋರಿದೆ. ಈ ಮೂರು ಪಕ್ಷಗಳು ತಲಾ ಎರಡು ಸ್ಥಾನಗಳನ್ನು ಗೆದ್ದುಕೊಂಡಿವೆ.

ಟಿವಿಕೆ ಕೋರಿಕೆಯ ಹೊರತಾಗಿಯೂ, ಡಿಎಂಕೆ ಮೈತ್ರಿಕೂಟದಲ್ಲಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಬೆಂಬಲ ನೀಡಲು ನಿರಾಕರಿಸಿದೆ.

ಸಿಪಿಐ, ಸಿಪಿಎಂ ಮತ್ತು ವಿಸಿಕೆ ಪಕ್ಷಗಳು ‘ಶೀಘ್ರ’ದಲ್ಲೇ ನಿರ್ಧಾರ ಪ್ರಕಟಿಸುವುದಾಗಿ ಹೇಳಿವೆ. ಈ ಮೂರು ಪಕ್ಷಗಳು ವಿಜಯ್ಗೆ ಬೆಂಬಲ ನೀಡಿದರೆ ಶಾಸಕರ ಸಂಖ್ಯೆ 119ಕ್ಕೆ ತಲುಪಲಿದ್ದು, ಟಿವಿಕೆಗೆ ಸರ್ಕಾರ ರಚಿಸಲು ಸಾಧ್ಯವಾಗಲಿದೆ.

‘ವಿಜಯ್ ಅವರು ನಮ್ಮ ಬೆಂಬಲ ಕೋರಿದ್ದಾರೆ. ಹಿರಿಯ ನಾಯಕರ ಜತೆ ಗುರುವಾರ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ವಿಸಿಕೆ ಪಕ್ಷದ ಮುಖ್ಯಸ್ಥ ತೊಲ್ ತಿರುಮಾವಳವನ್ ಹೇಳಿದ್ದಾರೆ.

ಇಕ್ಕಟ್ಟಿನಲ್ಲಿ ಎಡಪಕ್ಷಗಳು: ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಟಿವಿಕೆಗೆ ಬೆಂಬಲ ನೀಡಬೇಕೇ, ಬೇಡವೇ ಎಂಬ ದ್ವಂದ್ವದಲ್ಲಿ ಸಿಲುಕಿವೆ. ಕಾಂಗ್ರೆಸ್ ಮಾಡಿದಂತೆ, ತಕ್ಷಣವೇ ಡಿಎಂಕೆ ಮೈತ್ರಿಯಿಂದ ಹೊರಬರಲು ಈ ಪಕ್ಷಗಳು ಸಿದ್ಧವಿಲ್ಲ. ‘ಆದರೂ, ಬಿಜೆಪಿಯು ಪರಿಸ್ಥಿತಿಯ ಲಾಭ ಎತ್ತಿಕೊಳ್ಳುವುದನ್ನು ತಡೆಯಲು ಎಡಪಕ್ಷಗಳು ಟಿವಿಕೆಗೆ ಬೆಂಬಲ ನೀಡುವ ಸಾಧ್ಯತೆ ಅಧಿಕ’ ಎಂದು ಮೂಲಗಳು ಹೇಳಿವೆ.

‘ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಎಂ.ಎ.ಬೇಬಿ (ಸಿಪಿಎಂ) ಮತ್ತು ಡಿ.ರಾಜಾ (ಸಿಪಿಐ) ಅವರು ಹಿರಿಯ ನಾಯಕರ ಜತೆ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಲಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.