ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ‘ದಳಪತಿ’ ಎಂದೇ ಜನಪ್ರಿಯರಾಗಿ ರುವ ನಟ ಸಿ. ಜೋಸೆಫ್ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿ ಯಾಗಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಡಿಎಂಕೆ– ಎಐಎಡಿಎಂಕೆಯ ಆರು ದಶಕಗಳ ಪರ್ಯಾಯ ಆಡಳಿತ ಕೊನೆಗೊಂಡು, ದ್ರಾವಿಡ ನಾಡಿನ ರಾಜಕೀಯದಲ್ಲಿ ಹೊಸ ಶಕೆ ಆರಂಭವಾಗಿದೆ.

ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರು ವಿಜಯ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಟಿವಿಕೆ ಪಕ್ಷದ ಚಿನ್ಹೆ ‘ಸೀಟಿ’ ಊದುವ ಮೂಲಕ ವಿಜಯ್ ಅಭಿಮಾನಿಗಳು ಸಮಾರಂಭಕ್ಕೆ ಕಳೆ ತುಂಬಿದರು. ಪಕ್ಷದಧ್ವಜದ ಬಣ್ಣ ಹೊಂದಿರುವ ಶಾಲುಗಳನ್ನು ಬೀಸಿ ಸಂಭ್ರಮಿಸಿದರು. ತಮ್ಮ ನೆಚ್ಚಿನ‘ದಳಪತಿ’ (ಕಮಾಂಡರ್), ‘ಮುದಲಮೈಚರ್’ (ಮುಖ್ಯಮಂತ್ರಿ) ಆಗಿ ಅಧಿಕಾರ ವಹಿಸಿಕೊಳ್ಳುವ ಐತಿಹಾಸಿಕ ಕ್ಷಣವನ್ನು ತುಂಬಿಕೊಳ್ಳಲು ಸಾವಿರಾರು ಜನರು ಸೇರಿದ್ದರಿಂದ ಇಡೀ ಕ್ರೀಡಾಂಗಣ ಉತ್ಸಾಹದ ಸಮುದ್ರವಾಗಿ ಮಾರ್ಪಟ್ಟಿತು.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಚೊಚ್ಚಲ ಭಾಷಣ ಮಾಡಿದ ವಿಜಯ್, ‘ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ತಮಿಳುನಾಡಿನಲ್ಲಿ ನೈಜ ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ಹೊಸ ಯುಗ ಪ್ರಾರಂಭವಾಗಿದೆ’ ಎಂದು ಘೋಷಿಸಿದರು.

ಈ ಸರ್ಕಾರದಲ್ಲಿ ತನ್ನನ್ನು ಹೊರತು ಪಡಿಸಿ ಇನ್ನೊಂದು ಶಕ್ತಿ ಕೇಂದ್ರ ಇರುವುದಿಲ್ಲ ಎಂದು ಪ್ರತಿಪಾದಿಸಿದ ಅವರು, ‘ನಾನು ಮಾತ್ರ ಏಕೈಕ ಶಕ್ತಿಕೇಂದ್ರ’ ಎಂಬುದನ್ನು ಒತ್ತಿ ಹೇಳಿದರು. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಗೃಹ ಬಳಕೆದಾರರಿಗೆ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಒದಗಿಸುವ ಮತ್ತು ಮಹಿಳೆಯರ ರಕ್ಷಣೆಗೆ ವಿಶೇಷ ಪಡೆ ರಚಿಸುವ ಕಡತಗಳಿಗೆ ಅವರು ಸಹಿ ಹಾಕಿದರು.

9 ಸಚಿವರ ಪ್ರಮಾಣ: ವಿಜಯ್ ಸಂಪುಟದ ಸದಸ್ಯರಾಗಿ ಒಂಬತ್ತು ಮಂದಿ ಪ್ರಮಾಣ ವಚನ ಸ್ವೀಕರಿಸಿದರು. ಹಿರಿಯ ನಾಯಕ ಕೆ.ಎ. ಸೆಂಗೊಟೈಯನ್ ಮತ್ತು ಯುವ ಮುಖಗಳಾದ ಡಾ. ಟಿ.ಕೆ.ಪ್ರಭು ಹಾಗೂ ಎಸ್.ಕೀರ್ತನಾ ಅವರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ವಿಜಯ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಆಧವ್ ಅರ್ಜುನ, ಎನ್. ಆನಂದ್, ಆರ್. ನಿರ್ಮಲ್ ಕುಮಾರ್, ಎ. ರಾಜ್ಮೋಹನ್, ಪಿ. ವೆಂಕಟರಮಣನ್ ಮತ್ತು ಕೆ.ಜಿ. ಅರುಣ್ರಾಜ್ ಅವರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

‘ಇದು ಜನರ, ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಮಹಿಳೆಯರ ಮತ್ತು ಯುವ ಜನರ ಗೆಲುವು. ಖಂಡಿತವಾಗಿಯೂ ನಮ್ಮ ನಾಯಕರು ಮತ್ತು ಸಚಿವರು ಪಾರದರ್ಶಕ ಆಡಳಿತ ನೀಡಲಿದ್ದಾರೆ. ರಾಜ್ಯದ ಎಲ್ಲರ ಒಳಿತಿಗಾಗಿ ಕೆಲಸ ಮಾಡಲಿದ್ದಾರೆ’ ಎಂದು ಆಧವ್ ಅರ್ಜುನ ಹೇಳಿದರು.

ರಾಹುಲ್ ಭಾಗಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಮಾರಂಭದ ವೇದಿಕೆಯಲ್ಲಿ ಹಾಜರಿದ್ದರು. ಕಾಂಗ್ರೆಸ್ ನಾಯಕ ಪ್ರವೀಣ್ ಚಕ್ರವರ್ತಿ, ಬಿಜೆಪಿ ನಾಯಕಿ ತಮಿಳ್ಇಸೈ ಸೌಂದರರಾಜನ್, ವಿಜಯ್ ಅವರ ತಂದೆ, ಸಿನಿಮಾ ನಿರ್ದೇಶಕ ಎಸ್.ಎ.ಚಂದ್ರಶೇಖರ್, ತಾಯಿ ಶೋಭಾ, ನಟಿ ತ್ರಿಷಾ ಸೇರಿದಂತೆ ಹಲವು ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾದರು.

ಮೊದಲ ಸಾಲಿನಲ್ಲಿ ಕುಳಿತಿದ್ದ ವಿಜಯ್ ಪೋಷಕರು, ತಮ್ಮ ಮಗ ಚೊಚ್ಚಲ ಚುನಾವಣೆಯಲ್ಲೇ ರಾಜಕೀಯವಾಗಿ ಉತ್ತುಂಗಕ್ಕೇರಿದ್ದನ್ನು ನೋಡಿ ಭಾವುಕರಾದರು.

ಸ್ಟಾಲಿನ್ ಗೈರು: ಮಾಜಿ ಮುಖ್ಯಮಂತ್ರಿ ಗಳಾದ ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಮತ್ತು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ವಿಜಯ್ ಪತ್ನಿ ಸಂಗೀತಾ ಹಾಗೂ ಇಬ್ಬರು ಮಕ್ಕಳೂ ಗೈರಾಗಿದ್ದರು. ಟಿವಿಕೆಗೆ ಸರ್ಕಾರ ರಚಿಸಲು ಬೆಂಬಲ ನೀಡಿರುವ ವಿಸಿಕೆ, ಸಿಪಿಐ, ಸಿಪಿಎಂ ಮತ್ತು ಐಯುಎಂಎಲ್ ಪಕ್ಷಗಳ ನಾಯಕರು ಸಮಾರಂಭದಲ್ಲಿ ಪಾಲ್ಗೊಂಡರು.

ವಿಜಯ್ ಅವರು ರಾಹುಲ್ ಗಾಂಧಿ ಮತ್ತು ಸಂಪುಟ ಸಹೋದ್ಯೋಗಿಗಳು ಸೇರಿದಂತೆ ವೇದಿಕೆಯಲ್ಲಿದ್ದವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಸುಮಾರು ಒಂದು ಗಂಟೆ ನಡೆದ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಐತಿಹಾಸಿಕ ಸೇಂಟ್ ಜಾರ್ಜ್ ಕೋಟೆಯ ಆವರಣದಲ್ಲಿರುವ ತಮಿಳುನಾಡು ಸಚಿವಾಲಯಕ್ಕೆ ಭೇಟಿ ನೀಡಿ ಅಧಿಕಾರ ವಹಿಸಿಕೊಂಡು ಔಪಚಾರಿಕವಾಗಿ ಕೆಲಸ ಆರಂಭಿಸಿದರು.

ಉದಯನಿಧಿ ಡಿಎಂಕೆ ಶಾಸಕಾಂಗ ಪಕ್ಷದ ನಾಯಕ: ಮಾಜಿ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಡಿಎಂಕೆ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಮಾಜಿ ಸಚಿವ ಮತ್ತು ಪಕ್ಷದ ಹಿರಿಯ ನಾಯಕ ಕೆ.ಎನ್ ನೆಹ್ರು ಅವರನ್ನು ಶಾಸಕಾಂಗ ಪಕ್ಷದ ಉಪ ನಾಯಕ ಹಾಗೂ ಮಾಜಿ ಸಚಿವ ಇ.ವಿ ವೇಲು ಅವರನ್ನು ಸಚೇತಕರನ್ನಾಗಿ ಆಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-51-1835843272

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.