ನಾಸಿಕ್ (ಪಿಟಿಐ): ಸಹೋದ್ಯೋಗಿ ಯನ್ನು ಬಲವಂತವಾಗಿ ಮತಾಂತರಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಸಿಎಸ್ನ ನಾಲ್ವರು ಉದ್ಯೋಗಿಗಳನ್ನು ಮೇ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮಹಾರಾಷ್ಟ್ರದ ನಾಸಿಕ್ನ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

ಆರೋಪಿಗಳಾದ ರಾಜಾ ರಫೀಕ್ ಮೆಮೋಮ್ (35), ತೌಸಿಫ್ ಬಿಲಾಲ್ ಅತ್ತರ್ (37), ಡ್ಯಾನಿಶ್ ಇಜಾಜ್ ಶೇಖ್ (32) ಮತ್ತು ಶಾರುಕ್ ಹುಸೇನ್ ಶೌಕತ್ ಖುರೇಶಿ (34) ಅವರ ಮೇಲೆ, ಕಚೇರಿಯಲ್ಲಿ ಮಹಿಳಾ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವೂ ಇದೆ.

ಆರೋಪಿಗಳನ್ನು ಏ. 23ರಂದು ಎಸ್ಐಟಿ ಬಂಧಿಸಿತ್ತು. ನಂತರ ಅವರನ್ನು ಮೇ 5ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿತ್ತು. ಅವಧಿ ಮುಗಿದ ಕಾರಣ ಮಂಗಳವಾರ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-51-1779951782

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.