ಮುಂಬೈ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಉದ್ಯೋಗಿಗಳ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಮತ್ತು ಮತಾಂತರ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈ ಸಂಬಂಧ ನಾಸಿಕ್ ಪೊಲೀಸರು ರಾಜ್ಯ ಗುಪ್ತಚರ ಇಲಾಖೆ (ಎಸ್ಐಡಿ), ಭಯೋತ್ಪಾದನಾ ವಿರೋಧಿ ದಳ (ಎಟಿಎಸ್) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಗಳ (ಎನ್ಐಎ) ನೆರವು ಕೋರಿದ್ದಾರೆ.ರಾಷ್ಟ್ರೀಯ ಮಹಿಳಾ ಆಯೋಗದ (ಎನ್ಸಿಡಬ್ಲ್ಯೂ) ಸತ್ಯಶೋಧನಾ ತಂಡವೂ ಶೀಘ್ರವೇ ಸ್ಥಳಕ್ಕೆ ಭೇಟಿ ನೀಡಲಿದೆ.
.TCS Job Cuts | AI ಅಳವಡಿಕೆ: 12 ಸಾವಿರ ಉದ್ಯೋಗ ಕಡಿತ ಘೋಷಣೆ ಮಾಡಿದ ಟಿಸಿಎಸ್.
ಎಸ್ಐಟಿ ತನಿಖೆ ನಡೆಸುತ್ತಿದ್ದು, ಪ್ರಕರಣ ಹಲವು ಅಯಾಮಗಳನ್ನು ಪಡೆದುಕೊಂಡಿರುವುದರಿಂದ ವಿವಿಧ ತನಿಖಾ ಸಂಸ್ಥೆಗಳ ನೆರವು ಕೋರಲಾಗಿದೆ.

‘ಪೊಲೀಸರು ಪ್ರಕರಣದ ಎಲ್ಲಾ ವಿವರಗಳನ್ನು ಎಸ್ಐಡಿ, ಎಟಿಎಸ್ ಮತ್ತು ಎನ್ಐಎಗೆ ಒದಗಿಸಿದ್ದಾರೆ. ಅವರಿಂದ ಮಾಹಿತಿ ಲಭ್ಯವಾದ ನಂತರವಷ್ಟೇ, ಇಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪಿಗಳಿಗೆ ಅಂತರಾಷ್ಟ್ರೀಯ ಮಟ್ಟದ ಸಂಪರ್ಕ ಅಥವಾ ಹೊರಗಿನ ಬೆಂಬಲವಿದೆಯೇ ಎಂಬುದು ತಿಳಿಯಲಿದೆ’ ಎಂದು ನಾಸಿಕ್ ಪೊಲೀಸ್ ಆಯುಕ್ತ ಸಂದೀಪ್ ಕಾರ್ಣಿಕ್ ತಿಳಿಸಿದ್ದಾರೆ.
.ನಾಸಿಕ್: ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಇನ್ಸ್ಪೆಕ್ಟರ್ ಆತ್ಮಹತ್ಯೆ.
‘ಲೈಂಗಿಕ ಕಿರುಕುಳ, ಕಿರುಕುಳ ಮತ್ತು ಧಾರ್ಮಿಕ ಮತಾಂತರಕ್ಕೆ ಒತ್ತಡ ಹೇರಿದ್ದರೆ ಎಂದು 9 ಮಂದಿ ಕಿರಿಯ ಉದ್ಯೋಗಿಗಳು ನೀಡಿದ ದೂರುಗಳ ಆಧಾರದ ಮೇಲೆ ಮಾರ್ಚ್ 26 ಮತ್ತು ಏಪ್ರಿಲ್ 3ರ ನಡುವೆ ಪೊಲೀಸರು ಒಟ್ಟು 9 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಒಂದು ದೇವಲಾಯಿ ಕ್ಯಾಂಪ್ ಮತ್ತು ಎಂಟು ಮುಂಬೈ ನಾಕಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ’ ಎಂದು ಅವರು ವಿವರಿಸಿದ್ದಾರೆ.

ಪ್ರಕರಣವು ಅತ್ಯಂತ ಸೂಕ್ಷ್ಮ ಹಾಗೂ ಐಟಿ ಕ್ಷೇತ್ರಕ್ಕೆ ಸಂಬಂಧಿಸಿರುವುದರಿಂದ, ನಾಸಿಕ್ ಪೊಲೀಸರು ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೂ ಆಗಿರುವ ದೇವೇಂದ್ರ ಫಡಣವೀಸ್ ಮತ್ತು ಪೊಲೀಸ್ ಮಹಾನಿರ್ದೇಶಕ ಸದನ್ ಅವರಿಗೆ ನಿಯಮಿತವಾಗಿ ಮಾಹಿತಿ ನೀಡುತ್ತಿದ್ದಾರೆ.

ಈ ನಡುವೆ, ಘಟನೆ ಸಂಬಂಧ ಕುರಿತಾದ ಮಾಧ್ಯಮ ವರದಿಗಳನ್ನು ಆಧರಿಸಿ ರಾಷ್ಟ್ರೀಯ ಮಹಿಳಾ ಆಯೋಗವು (ಎನ್ಸಿಡಬ್ಲ್ಯೂ) ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

ಬಾಂಬೆ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಸಾಧನಾ ಜಾಧವ್, ಹರಿಯಾಣದ ಮಾಜಿ ಪೊಲೀಸ್ ಮಹಾನಿರ್ದೇಶಕ ಬಿ.ಕೆ. ಸಿನ್ಹಾ, ಸುಪ್ರೀಂ ಕೋರ್ಟ್ ವಕೀಲೆ ಮೋನಿಕಾ ಅರೋರಾ ಮತ್ತು ಎನ್ಸಿಡಬ್ಲ್ಯೂ ಹಿರಿಯ ಸಂಯೋಜಕಿ ಲೀಲಾಬತಿ ಅವರನ್ನೊಳಗೊಂಡ ನಾಲ್ವರು ಸದಸ್ಯರ ತಂಡವು ಶುಕ್ರವಾರ ನಾಸಿಕ್ಗೆ ಭೇಟಿ ನೀಡಿ ವಿಚಾರಣೆ ನಡೆಸಲಿದೆ.
.ಲೈಂಗಿಕ ದೌರ್ಜನ್ಯ, ಮತಾಂತರ ಕುರಿತು ಟಿಸಿಎಸ್ ತನಿಖೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.