ಠಾಣೆ: ಹದಿನಾರು ವರ್ಷದ ಬಾಲಕಿ ಮೇಲೆ ಆಕೆಯ 54 ವರ್ಷ ವಯಸ್ಸಿನ ತಂದೆಯೇ ಹಲವು ಬಾರಿ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಬದ್ಲಾಪುರ ಪಟ್ಟಣದಲ್ಲಿ ಈ ಕೃತ್ಯ ನಡೆದಿದೆ.
ಆರೋಪಿಯು ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ನಡೆದಿದೆ. ತಂದೆಯ ಕೃತ್ಯದಿಂದ ಭೀತಳಾಗಿದ್ದ ಬಾಲಕಿ ಮನೆಯಿಂದ ಓಡಿಹೋಗಿದ್ದು, ನಂತರ ವಾಪಾಸಾಗಿದ್ದಳು ಎಂದು ತಿಳಿಸಿದ್ದಾರೆ.
ಬದ್ಲಾಪುರ ಪಟ್ಟಣದ ಪೂರ್ವ ಠಾಣೆಗೆ ಸೋಮವಾರ ಬಂದ ಬಾಲಕಿಯು ತನ್ನ ತಂದೆಯ ವಿರುದ್ಧ ದೂರು ನೀಡಿದ್ದಾಳೆ. ಆ ಪ್ರಕಾರ ಪೊಲೀಸರು ಅತ್ಯಾಚಾರ, ಹಲ್ಲೆ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಪೋಕ್ಸೊ ಕಾಯ್ದೆಯಡಿಯೂ ಪ‍್ರಕರಣ ದಾಖಲಿಸಲಾಗಿದೆ.
ಬದ್ಲಾಪುರದಲ್ಲೇ ಈಚೆಗೆ ಇಬ್ಬರು ಎಲ್‌ಕೆಜಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ತೀವ್ರ ಚರ್ಚೆಗೆ ಒಳಪಟ್ಟಿತ್ತು. ಮಹಾರಾಷ್ಟ್ರ ಸರ್ಕಾರ ಇದರ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದೆ.