ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CEIR ಬಳಸಿ ಕದ್ದ ಮೊಬೈಲ್ ವಶ: ತೆಲಂಗಾಣ ಪ್ರಥಮ, ಕರ್ನಾಟಕ ದ್ವಿತೀಯ

Published 9 ಆಗಸ್ಟ್ 2023, 12:52 IST
Last Updated 9 ಆಗಸ್ಟ್ 2023, 12:52 IST
ಅಕ್ಷರ ಗಾತ್ರ

ಹೈದರಾಬಾದ್: ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್‌) ಎಂಬ ಪೋರ್ಟಲ್‌ ಬಳಸಿ ಕಳೆದು ಹೋದ ಮತ್ತು ಕದ್ದ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ತೆಲಂಗಾಣ ರಾಜ್ಯ ದೇಶದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ‌

5,038 (ಶೇ 67.09) ಮೊಬೈಲ್‌ಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ ಸಿಇಐಆರ್ ಪೋರ್ಟಲ್ ಬಳಸಿ ಕಳೆದುಹೋದ ಮತ್ತು ಕದ್ದ ಮೊಬೈಲ್ ಸಾಧನಗಳನ್ನು ವಶಪಡಿಸಿಕೊಂಡ ಪಟ್ಟಿಯಲ್ಲಿ ತೆಲಂಗಾಣ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ (ಶೇ 54.20) ಮತ್ತು ಆಂಧ್ರಪ್ರದೇಶ (ಶೇ 50.90) ನಂತರದ ಸ್ಥಾನದಲ್ಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಕಳೆದು ಹೋದ ಅಥವಾ ಕಳುವಾದ ಮೊಬೈಲ್ ಫೋನ್‌ಗಳನ್ನು ‍ಬ್ಲಾಕ್‌ ಮಾಡುವ ಮತ್ತು ಪತ್ತೆ ಮಾಡಲು ದೂರಸಂಪರ್ಕ ಇಲಾಖೆ (ಡಿಒಟಿ) ಅಭಿವೃದ್ಧಿಪಡಿಸಿದ ಸಿಇಐಆರ್ ಪೋರ್ಟಲ್ ಅನ್ನು ಅಧಿಕೃತವಾಗಿ 2023ರ ಮೇ 17ರಂದು ರಾಷ್ಟ್ರವ್ಯಾಪಿ ಪ್ರಾರಂಭಿಸಿತು. 2023ರ ಏ. 19 ರಿಂದ ತೆಲಂಗಾಣದಲ್ಲಿ ಮತ್ತು 2022 ರ ಸೆಪ್ಟೆಂಬರ್‌ನಿಂದ ಕರ್ನಾಟಕದಲ್ಲಿ ಇದನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಯಿತು.

ತೆಲಂಗಾಣದ ಎಲ್ಲಾ 780 ಪೊಲೀಸ್ ಠಾಣೆಗಳಲ್ಲಿ ಸಿಇಐಆರ್ ಪೋರ್ಟಲ್ ನಿರ್ವಹಿಸಲಾಗುತ್ತದೆ. 110 ದಿನಗಳ ಅವಧಿಯಲ್ಲಿ ಕಳೆದುಹೋದ/ ಕದ್ದ 5,038 ಮೊಬೈಲ್‌ಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಮಂಗಳವಾರ ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT