ಹೈದರಾಬಾದ್: ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ ಖಚಿತಪಡಿಸುವ ಗುರಿ ಹೊಂದಿರುವ 'ತೆಲಂಗಾಣ ನೌಕರರ ಹೊಣೆಗಾರಿಕೆ ಮತ್ತು ಪೋಷಕರ ಬೆಂಬಲ ಮೇಲ್ವಿಚಾರಣೆ ಮಸೂದೆ 2026' ಅನ್ನು ತೆಲಂಗಾಣ ವಿಧಾನಸಭೆ ಭಾನುವಾರ ಅಂಗೀಕರಿಸಿದೆ.

ದೇಶವು ಈಗಾಗಲೇ ಹಿರಿಯ ನಾಗರಿಕರಿಗಾಗಿ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007ಅನ್ನು ಹೊಂದಿದೆ. ಅದನ್ನು ಮೀರಿ ಈ ಕಾಯ್ದೆ ಭದ್ರತೆ ಒದಗಿಸುತ್ತದೆ ಎಂದು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹೇಳಿದ್ದಾರೆ.

ಹೊಸ ಮಸೂದೆಯು ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಮತ್ತು ಖಾಸಗಿ ಉದ್ಯೋಗಿಗೂ ಅನ್ವಯಿಸುತ್ತದೆ ಎಂದಿದ್ದಾರೆ.

ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಮತ್ತು ಖಾಸಗಿ ಉದ್ಯೋಗಿಗಳು ತಮ್ಮ ವೃದ್ಧ ಪೋಷಕರನ್ನು ನೋಡಿಕೊಳ್ಳಬೇಕೆಂದು ಮಸೂದೆಯು ಹೇಳುತ್ತದೆ. ಮಸೂದೆಯನ್ನು ಪಾಲಿಸುವಲ್ಲಿ ವಿಫಲವಾದರೆ ಅವರ ವೇತನದ ಶೇ 15 ರಷ್ಟು ಅಥವಾ ₹10,000 ಅನ್ನು ಕಡಿತಗೊಳಿಸಿ ಪೋಷಕರಿಗೆ ಪಾವತಿಸಲಾಗುತ್ತದೆ.

ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರೆಡ್ಡಿ, ಉದ್ಯಮಿ ವಿಜಯಪತ್ ಸಿಂಘಾನಿಯಾ ಅವರ ಪ್ರಕರಣವನ್ನು ಉಲ್ಲೇಖಿಸಿದರು. ಸಿಂಘಾನಿಯಾ ತಮ್ಮ ಎಲ್ಲ ಆಸ್ತಿಯನ್ನು ಮಗನಿಗೆ ನೀಡಿದ್ದರು. ಬಳಿಕ, ಮಗನೇ ತಂದೆಯನ್ನು ಹೊರಹಾಕಿದ್ದ ಎಂದು ಹೇಳಿದರು.

‘ರಾಜ್ಯ ಸರ್ಕಾರವು ಸಾಮಾಜಿಕ ಜವಾಬ್ದಾರಿಯಾಗಿ ಈ ಮಸೂದೆಯನ್ನು ತಂದಿದೆ. ಇದು ಬೇರೆ ಯಾವುದೋ ಮಸೂದೆಯಂತಲ್ಲ. ಜನರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುತ್ತದೆ. ಯಾರಾದರೂ ತಮ್ಮ ಪೋಷಕರನ್ನು ನಿರ್ಲಕ್ಷಿಸಿದರೆ ಕಾನೂನಿನ ವ್ಯಾಪ್ತಿಯಲ್ಲಿ ಅವರಿಗೆ ನ್ಯಾಯ ಒದಗಿಸುತ್ತದೆ’ ಎಂದಿದ್ದಾರೆ.

ಪೋಷಕರನ್ನು ನಿರ್ಲಕ್ಷಿಸುವ ಮಕ್ಕಳನ್ನು ತಿದ್ದುವುದು ಸಮಾಜದ ಜವಾಬ್ದಾರಿಯಾಗಿದೆ. ಅಂತಹ ಕಾನೂನನ್ನು ರಾಜ್ಯ ಸರ್ಕಾರ ಮಾಡಬೇಕಾಗಿ ಬಂದಿದ್ದು ದುರಾದೃಷ್ಟಕರ. ಪೋಷಕರನ್ನು ನಿರ್ಲಕ್ಷಿಸುವವರಿಗೆ ಸಾಮಾಜದಲ್ಲಿ ಬದುಕುವ ಹಕ್ಕಿಲ್ಲ ಎಂದು ರೆಡ್ಡಿ ಹೇಳಿದ್ದಾರೆ.

ಪೋಷಕರಿಲ್ಲದೇ ಜೀವನವೇ ಇಲ್ಲ. ಅವರನ್ನು ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಸಚಿವೆ ಕೊಂಡ ಸುರೇಖಾ ಹೇಳಿದ್ದಾರೆ.

‘ಮಕ್ಕಳಿಗೆ ಜವಾಬ್ದಾರಿಗಳನ್ನು ನೆನಪಿಸುವ ಅವಶ್ಯಕತೆ ಇದೆ. ಸಮಾಜವು ವೃದ್ಧರ ಬಗ್ಗೆ ತನ್ನ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ. ಇಂತಹ ಮಸೂದೆ ತಂದಿದ್ದಕ್ಕಾಗಿ ಮುಖ್ಯಮಂತ್ರಿಯವರನ್ನು ನಾನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ’ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.