ಅಯೋಧ್ಯೆ: 2024ರ ಜನವರಿ 22ರಂದು ರಾಮ ಮಂದಿರದಲ್ಲಿ ರಾಮ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಅಯೋಧ್ಯೆಗೆ ಭೇಟಿ ನೀಡುವ ಸಾವಿರಾರು ಭಕ್ತರಿಗಾಗಿ ಅನೇಕ 'ಟೆಂಟ್ ಸಿಟಿ'ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.
‘ಮಾಝ ಗುಪ್ತರ್ ಘಾಟ್, ಬಾಘ್ ಬಿಜೆಸಿ ಹಾಗೂ ಬ್ರಹ್ಮಕುಂಡಗಳಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಾಗೂ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಈ ಟೆಂಟ್ ಸಿಟಿಗಳನ್ನು ನಿರ್ಮಾಣ ಮಾಡುತ್ತಿವೆ’ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
‘ಮಾಝ ಗುಪ್ತರ್ ಘಾಟ್‌ನ 20 ಎಕರೆ ಪ್ರದೇಶಲ್ಲಿ 20ರಿಂದ 25 ಸಾವಿರ ಭಕ್ತರು ತಂಗಬಹುದಾದ ಟೆಂಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಬ್ರಹ್ಮಕುಂಡದಲ್ಲಿ 30 ಸಾವಿರ ಭಕ್ತರನ್ನು ಹಿಡಿಸುವ ಸಾಮರ್ಥ್ಯದ 35 ದೊಡ್ಡ ಟೆಂಟ್‌ಗಳನ್ನು ಮತ್ತು ಬಾಘ್ ಬಿಜೆಸಿಯ 25 ಎಕರೆ ಪ್ರದೇಶಲ್ಲಿ 25 ಸಾವಿರ ಭಕ್ತರು ಉಳಿದುಕೊಳ್ಳಬಹುದಾದ ಟೆಂಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ’ ಎಂದು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಸತ್ಯೇಂದ್ರ ಸಿಂಗ್ ಹೇಳಿದರು.
‘ಕರಸೇವಕಪುರಂ ಹಾಗೂ ಮಣಿಪುರಂ ದಾಸ್ ಕಂಟೋನ್ಮೆಂಟ್ ಪ್ರದೇಶದಲ್ಲೂ ಇಂಥದ್ದೇ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಚಳಿಗಾಲ ಗರಿಷ್ಠವಾಗಿರುವಾಗಲೇ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಭಕ್ತರು ಚಳಿಯಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಹಾಸಿಗೆ– ಹೊದಿಕೆಗಳ ವ್ಯವಸ್ಥೆಯನ್ನೂ ಮಾಡಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.